Advertisement

ಪ್ರೊ ಕಬಡ್ಡಿ: ಗುಜರಾತ್‌ ಜೈಂಟ್ಸ್‌ ವಿರುದ್ಧ ದಬಾಂಗ್‌ ಡೆಲ್ಲಿಗೆ ಭರ್ಜರಿ ಗೆಲುವು

10:53 PM Oct 10, 2022 | Team Udayavani |

ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರೊ ಕಬಡ್ಡಿಯ ಎರಡನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡ ಗುಜರಾತ್‌ ಜೈಂಟ್ಸ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಈ ಮೊದಲು ನಡೆದ ಪಂದ್ಯದಲ್ಲಿ ಯು ಮುಂಬಾ ತಂಡವು ಯುಪಿ ಯೋಧಾಸ್‌ ತಂಡವನ್ನು 30-23 ಅಂಕಗಳಿಂದ ಮಣಿಸಿತ್ತು.

Advertisement

ರೈಡರ್‌ಗಳಾದ ನವೀನ್‌ ಕುಮಾರ್‌ ಮತ್ತು ಮನ್‌ಜಿತ್‌ ಅವರ ಉತ್ತಮ ಆಟದಿಂದಾಗಿ ಡೆಲ್ಲಿ ತಂಡವು 53-33 ಅಂಕಗಳಿಂದ ಗುಜರಾತ್‌ ತಂಡವನ್ನು ಮಣಿಸಿತು. ರೈಡ್‌ ಮೂಲಕ ನವೀನ್‌ 15 ಮತ್ತು ಮನ್‌ಜಿತ್‌ 10 ಅಂಕ ಗಳಿಸಿದ್ದರು. ಪಂದ್ಯದ ಆರಂಭದಿಂದಲೇ ಮೇಲುಗೈ ಸಾಧಿಸಿದ ಡೆಲ್ಲಿ ತಂಡ ಯಾವುದೇ ಹಂತದಲ್ಲೂ ಎದುರಾಳಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ,. ಅಂತಿಮವಾಗಿ ತಂಡ 20 ಅಂಕಗಳ ಅಂತರದಲ್ಲಿ ಜಯಭೇರಿ ಮೊಳಗಿಸಿತು.

ಈ ಮೊದಲು ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಯು ಮುಂಬಾ ಗೆಲುವಿನ ನಗೆ ಚೆಲ್ಲಿತು. ಮೊದಲ ಅವಧಿಯ ಆಟ ಮುಗಿದಾಗ ಮುಂಬಾ 14-9 ಅಂತರದಿಂದ ಮುನ್ನಡೆಯಲ್ಲಿತ್ತು.ರೈಡ್‌ನ‌ಲ್ಲಿ ಗುಮನ್‌ ಸಿಂಗ್‌ 5 ಮತ್ತು ಆಶಿಷ್‌, 4 ಮತ್ತು ಜೈ ಭಗವಾನ್‌ ಆರಂಕ ಗಳಿಸಿ ತಂಡದ ಮುನ್ನಡೆಗೆ ನೆರವಾಗಿದ್ದರು.

ರವಿವಾರ ನಡೆದ ಮೂರನೇ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್‌ ತಂಡವು ಪುನೇರಿ ಪಲ್ಟಾನ್ಸ್‌ ತಂಡವನ್ನು 41-39 ಅಂಕಗಳಿಂದ ಮಣಿಸಿತು. ಇದು ಬುಲ್ಸ್‌ ದಾಖಲಿಸಿದ ಎರಡನೇ ಗೆಲುವು ಆಗಿದೆ. ಮೊದಲ ಅವಧಿಯ ಆಟ ಮುಗಿದಾಗ ಬುಲ್ಸ್‌ 14 ಅಂಕಗಳಿಂದ ಮುನ್ನಡೆಯಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next