Advertisement

Pro Kabaddi; 7ನೇ ಸಲ ಮುಳುಗಿದ ತೆಲುಗು ಟೈಟಾನ್ಸ್‌

11:14 PM Dec 30, 2023 | Team Udayavani |

ನೋಯ್ಡಾ: ಹತ್ತನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ ತೆಲುಗು ಟೈಟಾನ್ಸ್‌ 7ನೇ ಸೋಲನುಭವಿಸಿ ಕೊನೆಯ ಸ್ಥಾನವನ್ನು ಗಟ್ಟಿಗೊಳಿಸಿದೆ. ಶನಿವಾರದ ಪಂದ್ಯದಲ್ಲಿ ಯು ಮುಂಬಾ ಟೈಟಾನ್ಸ್‌ 52-34 ಅಂತರದಿಂದ ಟೈಟಾನ್ಸ್‌ಗೆ ಹೊಡೆತವಿಕ್ಕಿತು.
ರೈಡರ್‌ಗಳಾದ ಗುಮಾನ್‌ ಸಿಂಗ್‌ (10), ಜೈ ಭಗವಾನ್‌ (7), ಆಲ್‌ರೌಂಡರ್‌ ಆಮೀರ್‌ ಮೊಹಮ್ಮದ್‌ (8), ಡಿಫೆಂಡರ್‌ ರಿಂಕು (8) ಮುಂಬಾದ 5ನೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

ದಿನದ ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 35-25 ಅಂಕಗಳಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಇದು 8 ಪಂದ್ಯಗಳಲ್ಲಿ ಡೆಲ್ಲಿಗೆ ಒಲಿದ 4ನೇ ಜಯ. ಯೋಧಾಸ್‌ 9 ಪಂದ್ಯಗಳಲ್ಲಿ 5ನೇ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next