Advertisement

Pro Kabaddi ಸೀಸನ್‌ ನಂ.10: ಕಾಲೆಳೆಯುವ ಆಟಕ್ಕೆ ‘ಕ್ಯಾರವಾನ್‌’ ಲುಕ್‌

11:33 PM Dec 01, 2023 | Team Udayavani |

ಅಹ್ಮದಾಬಾದ್‌: ಮತ್ತೆ ದೇಶದಲ್ಲಿ ಕಬಡ್ಡಿ ಹವಾ ಬೀಸಲಾರಂಭಿಸಿದೆ. ಡಿ. 2ರ ಶನಿವಾರದಿಂದ ಮೊದಲ್ಗೊಂಡು ಫೆಬ್ರವರಿ ಕೊನೆಯ ತನಕ ಬರೋಬ್ಬರಿ 3 ತಿಂಗಳ ಕಾಲ 10ನೇ ಪ್ರೊ ಕಬಡ್ಡಿ ಸೀಸನ್‌ ಸಾಗಲಿದೆ. ವಿಶ್ವಕಪ್‌ ಕೈತಪ್ಪಿದ ಹತಾಶೆಯಲ್ಲಿರುವವರಿಗೆ ಈ ಕಾಲೆಳೆಯುವ ಆಟ ಭಾರೀ ಮೋಜು ನೀಡುವುದರಲ್ಲಿ ಅನುಮಾನವಿಲ್ಲ.
ಈ ಬಾರಿಯಿಂದ ಮತ್ತೆ “ಕ್ಯಾರವಾನ್‌’ ಮಾದರಿಗೆ ಮರಳಿದ್ದು ಪ್ರೊ ಕಬಡ್ಡಿಯ ಆಕರ್ಷಣೆ ಹಾಗೂ ಹೆಚ್ಚುಗಾರಿಕೆ. ಕೋವಿಡ್‌ ಮುಗಿದ ಬಳಿಕ ಕೆಲವೇ ಕೇಂದ್ರಗಳಿಗೆ ಸೀಮಿತಗೊಂಡಿದ್ದ ಕಬಡ್ಡಿ ಪಂದ್ಯಗಳು ಈ ಸಲದಿಂದ ಎಲ್ಲ 12 ಫ್ರಾಂಚೈಸಿಗಳ ಕೇಂದ್ರದಲ್ಲೂ ನಡೆಯಲಿವೆ. ಹೀಗಾಗಿ ಕಬಡ್ಡಿ ಪ್ರಿಯರ ಸಂಭ್ರಮ ದೇಶವ್ಯಾಪಿಯಾಗಲಿದೆ.

Advertisement

ಈ 12 ಕೇಂದ್ರಗಳೆಂದರೆ ಅಹ್ಮದಾಬಾದ್‌, ಬೆಂಗಳೂರು, ಚೆನ್ನೈ, ಹೈದರಾಬಾದ್‌, ಹೊಸದಿಲ್ಲಿ, ಜೈಪುರ, ಕೋಲ್ಕತಾ, ಮುಂಬಯಿ, ನೋಯ್ಡಾ, ಪಾಟ್ನಾ, ಪಂಚಕುಲ ಮತ್ತು ಪುಣೆ.

ದಿನಂಪ್ರತಿ 2 ಪಂದ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ. ಮೊದಲ ಪಂದ್ಯ ರಾತ್ರಿ 8 ಗಂಟೆಗೆ, ದ್ವಿತೀಯ ಪಂದ್ಯ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಸ್ಟಾರ್‌ ನ್ಪೋರ್ಟ್ಸ್ನಲ್ಲಿ ಪಂದ್ಯಗಳು ನೇರ ಪ್ರಸಾರ ಕಾಣಲಿವೆ.

ಉದ್ಘಾಟನ ಪಂದ್ಯ
ಈವರೆಗೆ ಪ್ರಶಸ್ತಿ ಎತ್ತಲು ವಿಫ‌ಲವಾದ ಗುಜರಾತ್‌ ಜೈಂಟ್ಸ್‌ ಮತ್ತು ತೆಲುಗು ಟೈಟಾನ್ಸ್‌ ತಂಡಗಳು ಶನಿವಾರದ ಉದ್ಘಾಟನ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ. ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್‌ ಆಟಗಾರರಾದ ಫ‌ಜಲ್‌ ಅಟ್ರಾಚಲಿ ಮತ್ತು ಪವನ್‌ ಸೆಹ್ರಾವತ್‌ ಈ ತಂಡಗಳನ್ನು ಮುನ್ನಡೆಸಲಿದ್ದಾರೆ. ಹೀಗಾಗಿ 10ನೇ ಸೀಸನ್‌ನ ಆರಂಭಿಕ ಪಂದ್ಯವೇ ಹೆಚ್ಚು ರೋಚಕವಾಗಿ ಸಾಗುವ ಸಾಧ್ಯತೆ ಇದೆ.

ಚಾಂಪಿಯನ್‌ ತಂಡಗಳು
ಸೀಸನ್‌-1 ಜೈಪುರ್‌ ಪಿಂಕ್‌ ಪ್ಯಾಂಥರ್
ಸೀಸನ್‌-2 ಯು ಮುಂಬಾ
ಸೀಸನ್‌-3 ಪಾಟ್ನಾ ಪೈರೇಟ್ಸ್‌
ಸೀಸನ್‌-4 ಪಾಟ್ನಾ ಪೈರೇಟ್ಸ್‌
ಸೀಸನ್‌-5 ಪಾಟ್ನಾ ಪೈರೇಟ್ಸ್‌
ಸೀಸನ್‌-6 ಬೆಂಗಳೂರು ಬುಲ್ಸ್‌
ಸೀಸನ್‌-7 ಬೆಂಗಾಲ್‌ ವಾರಿಯರ್
ಸೀಸನ್‌-8 ದಬಾಂಗ್‌ ಡೆಲ್ಲಿ
ಸೀಸನ್‌-9 ಜೈಪುರ್‌ ಪಿಂಕ್‌ ಪ್ಯಾಂಥರ್

Advertisement

ಪ್ರೊ ಕಬಡ್ಡಿ: 10 ತಾಣಗಳು
1 ಅಹ್ಮದಾಬಾದ್‌: ಡಿ. 2-7
2 ಬೆಂಗಳೂರು: ಡಿ. 8-13
3 ಪುಣೆ: ಡಿ. 15-20
4 ಚೆನ್ನೈ: ಡಿ. 22-27
5 ನೋಯ್ಡಾ: ಡಿ. 29-ಜ. 3
6 ಮುಂಬಯಿ: ಜ. 5-10
7 ಜೈಪುರ: ಜ. 12-17
8 ಹೈದರಾಬಾದ್‌: ಜ. 19-24
9 ಪಾಟ್ನಾ: ಜ. 26-31
10 ಹೊಸದಿಲ್ಲಿ: ಫೆ. 2-7
11 ಕೋಲ್ಕತಾ: ಫೆ. 9-14
12 ಪಂಚಕುಲ: ಫೆ. 16-21

ಅಹ್ಮದಾಬಾದ್‌ ಪಂದ್ಯಗಳ ವೇಳಾಪಟ್ಟಿ
ದಿನಾಂಕ ಪಂದ್ಯ ಆರಂಭ
ಡಿ. 2 ಗುಜರಾತ್‌-ಟೈಟಾನ್ಸ್‌ ರಾ. 8.00
ಡಿ. 2 ಮುಂಬಾ-ಯೋಧಾಸ್‌ ರಾ. 9.00
ಡಿ. 3 ತಮಿಳ್‌-ಡೆಲ್ಲಿ ರಾ. 8.00
ಡಿ. 3 ಗುಜರಾತ್‌-ಬೆಂಗಳೂರು ರಾ. 9.00
ಡಿ. 4 ಪುನೇರಿ-ಜೈಪುರ್‌ ರಾ. 8.00
ಡಿ. 4 ಬೆಂಗಳೂರು-ಬೆಂಗಾಲ್‌ ರಾ. 9.00
ಡಿ. 5 ಗುಜರಾತ್‌-ಮುಂಬಾ ರಾ. 8.00
ಡಿ. 6 ಟೈಟಾನ್ಸ್‌-ಪಾಟ್ನಾ ರಾ. 8.00
ಡಿ. 6 ಯೋಧಾಸ್‌-ಹರ್ಯಾಣ ರಾ. 9.00
ಡಿ. 7 ಬೆಂಗಾಲ್‌-ಜೈಪುರ್‌ ರಾ. 8.00
ಡಿ. 7 ಗುಜರಾತ್‌-ಪಾಟ್ನಾ ರಾ. 9.00

Advertisement

Udayavani is now on Telegram. Click here to join our channel and stay updated with the latest news.

Next