Advertisement
ಇದು 19 ಪಂದ್ಯಗಳಲ್ಲಿ ಪುನೇರಿ ಮೊಳಗಿಸಿದ 14ನೇ ಜಯಭೇರಿ. ರೈಡರ್ ಪಂಕಜ್ ಮೋಹಿತೆ (12 ಅಂಕ), ಆಲ್‌ರೌಂಡರ್ ಮೊಹಮ್ಮದ್ ರೇಝ (8 ಅಂಕ), ರೈಡರ್ ಮೋಹಿತ್ ಗೋಯತ್ (7 ಅಂಕ) ಪುನೇರಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದೆಡೆ ತಮಿಳ್ ತಲೈ ವಾಸ್ 20 ಪಂದ್ಯಗಳಲ್ಲಿ 12ನೇ ಸೋಲನುಭವಿಸಿತು.
ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ 50-28 ಅಂತರದ ಸೋಲು ಣಿ ಸಿದ ಗುಜರಾತ್ ಜೈಂಟ್ಸ್ 4ನೇ ತಂಡವಾಗಿ ಪ್ಲೇ ಆಫ್ ಪ್ರವೇ ಶಿ ಸಿದೆ. ಬುಲ್ಸ್ ರೇಸ್‌ನಿಂದ ಹೊರಬಿತ್ತು. ಇದು 20 ಪಂದ್ಯಗಳಲ್ಲಿ ಬುಲ್ಸ್ ಅನು ಭವಿಸಿದ 11ನೇ ಸೋಲು. ಗುಜರಾತ್ ಇಷ್ಟೇ ಪಂದ್ಯಗಳಿಂದ 12ನೇ ಜಯ ಸಾಧಿಸಿ 4ನೇ ಸ್ಥಾನಕ್ಕೆ ನೆಗೆಯಿತು. ಪ್ರತೀಕ್ ದಹಿಯಾ ಗುಜರಾತ್ ತಂಡದ ಹೀರೋ ಎನಿಸಿದರು. ಇವರದು 13 ಅಂಕಗಳ ಸಾಧನೆ. ನಾಯಕ ಫಜಲ್ ಅಟ್ರಾಚಲಿ 6 ಅಂಕ ತಂದಿತ್ತರು.
Related Articles
Advertisement