Advertisement

Pro Kabaddi: ಪ್ಲೇ ಆಫ್ಗೆ ಪಾಟ್ನಾ ಪೈರೇಟ್ಸ್‌ 

11:23 PM Feb 13, 2024 | Team Udayavani |

ಕೋಲ್ಕತಾ: ಪಾಟ್ನಾ ಪೈರೇಟ್ಸ್‌ 5ನೇ ತಂಡವಾಗಿ ಪ್ರೊ ಕಬಡ್ಡಿ ಪ್ಲೇ ಆಫ್ ಪ್ರವೇಶಿಸಿದೆ. ಮಂಗಳವಾರದ ಮುಖಾಮುಖೀಯಲ್ಲಿ ಅದು 38-36 ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿತು. ಇದರಿಂದ 4ನೇ ಸ್ಥಾನಕ್ಕೆ ನೆಗೆಯಿತು (68 ಅಂಕ).

Advertisement

ಇದು 21 ಪಂದ್ಯಗಳಲ್ಲಿ ಪಾಟ್ನಾಕ್ಕೆ ಒಲಿದ 11ನೇ ಜಯ. ತೆಲುಗು ಟೈಟಾನ್ಸ್‌ 20 ಪಂದ್ಯಗಳಲ್ಲಿ 18ನೇ ಸೋಲನುಭವಿಸಿತು. ಪಾಟ್ನಾ ಪರ ರೈಡರ್‌ ಮಂಜೀತ್‌ 8, ಸಂದೀಪ್‌ ಕುಮಾರ್‌ 7 ಮತ್ತು ಸಚಿನ್‌ 5 ಅಂಕ ಗಳಿಸಿದರು.

ಟೈಟಾನ್ಸ್‌ ಪರ ನಾಯಕ ಪವನ್‌ ಸೆಹ್ರಾವತ್‌ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು 16 ಅಂಕ ತಂದಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next