Advertisement

Pro Kabaddi: ಪಾಟ್ನಾ ಪೈರೇಟ್ಸ್‌ ಎದುರಿನ ಪಂದ್ಯದಲ್ಲಿ ತಮಿಳ್‌ ಸೋಲಿನ ಆರಂಭ

11:49 PM Dec 22, 2023 | Team Udayavani |

ಚೆನ್ನೈ: ಶುಕ್ರವಾರ ಮೊದಲ್ಗೊಂಡ ಚೆನ್ನೈ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ತಮಿಳ್‌ ತಲೈವಾಸ್‌ ಸೋಲಿನ ಆರಂಭ ಕಂಡಿದೆ. ಪಾಟ್ನಾ ಪೈರೇಟ್ಸ್‌ ಎದುರಿನ ಪಂದ್ಯವನ್ನು 33-46 ಅಂತರದಿಂದ ಕಳೆದುಕೊಂಡಿದೆ.

Advertisement

ಪಾಟ್ನಾ 6 ಪಂದ್ಯಗಳಲ್ಲಿ ಸಾಧಿಸಿದ 3ನೇ ಜಯ ಇದಾಗಿದೆ. ರೈಡರ್‌ಗಳಾದ ಸುಧಾಕರ್‌ ಎಂ. (11 ಅಂಕ), ಸಚಿನ್‌ (7 ಅಂಕ) ಸಂಪಾದಿಸಿ ಪಾಟ್ನಾ ಪರಾಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದರು.
ತಮಿಳ್‌ ಪರ ಡಿಫೆಂಡರ್‌ ಹಿಮಾಂಶು ಅತ್ಯಧಿಕ 8 ಅಂಕ ತಂದಿತ್ತರು. ರೈಡರ್‌ ಅಜಿಂಕ್ಯ ಪವಾರ್‌ ಮಿಂಚಿದ ಮತ್ತೋರ್ವ ಆಟಗಾರ (6 ಅಂಕ). 5 ಪಂದ್ಯಗಳಲ್ಲಿ ತಲೈವಾಸ್‌ಗೆ ಎದುರಾದ 3ನೇ ಸೋಲು ಇದಾಗಿದೆ.

ಟೈಟಾನ್ಸ್‌ಗೆ ಮೊದಲ ಜಯ
ಕೊನೆಗೂ ತೈಲುಗು ಟೈಟಾನ್ಸ್‌ ಈ ಕೂಟದ ಮೊದಲ ಜಯ ಕಾಣುವಲ್ಲಿ ಯಶಸ್ವಿಯಾಯಿತು. ರೋಚಕ ಹಣಾಹಣಿಯಲ್ಲಿ ಅದು ಹರ್ಯಾಣ ಸ್ಟೀಲರ್ ವಿರುದ್ಧ 37-36 ಅಂತರದಿಂದ ಗೆದ್ದು ಬಂತು.

Advertisement

Udayavani is now on Telegram. Click here to join our channel and stay updated with the latest news.

Next