Advertisement

Pro Kabaddi: 2ನೇ ದಿನ ದುಬಾರಿ ಮೊತ್ತಕ್ಕೆ ಪುಣೇರಿ ಸೇರಿದ ಅಜಿತ್‌

12:13 AM Aug 17, 2024 | Team Udayavani |

ಮಂಬಯಿ: ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಗಾಗಿ ಮುಂಬಯಿಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಿದೆ. ಹರಾಜು ಕಣದಲ್ಲಿದ್ದ 500 ಮಂದಿ ಆಟಗಾರರಲ್ಲಿ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ.

Advertisement

ಇದರಲ್ಲಿ 8 ಮಂದಿ ಆಟಗಾರು ಕೋಟಿ ರೂ. ಮಿಕ್ಕಿದ ಬೆಲೆಗೆ ಹರಾಜಾದದ್ದು ವಿಶೇಷ. ಇದರಲ್ಲಿ ಮೊದಲನೇ ದಿನ ಸಚಿನ್‌ ತನ್ವರ್‌ 2.15 ಕೋಟಿ ರೂ.ಗೆ ತಮಿಳು ತಲೈವಾಸ್‌ ಪಾಲಾಗಿ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. 2ನೇ ದಿನ ಸಣ್ಣಪುಟ್ಟ ಬೆಲೆಗೆ ಆಟಗಾರರು ಹರಾಜಾದರು. 66 ಲಕ್ಷ ರೂ.ಗೆ ಪುಣೇರಿ ಪಾಲಾದ ಅಜಿತ್‌ ವಿ. ಕುಮಾರ್‌, 2ನೇ ದಿನದ ದುಬಾರಿ ಆಟಗಾರರಾಗಿ ಹೊರಹೊಮ್ಮಿದರು.

ಈ ಬಾರಿಯ ವಿದೇಶಿ ದುಬಾರಿ ಆಟಗಾರಲ್ಲಿ ಮೊಹಮ್ಮದ್‌ ಶಾದೂÉಯಿ ಚಿಯಾನೆಹ್‌ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿ ದ್ದಾರೆ. ಅವರು 2.07 ಕೋಟಿ ರೂ.ಗೆ ಹರ್ಯಾಣ ಸ್ಟೀಲರ್ ಪಾಲಾದರು. ಪ್ರಮುಖ ಆಕರ್ಷಣೆಯಾಗಿದ್ದ ಪವನ್‌ ಕುಮಾರ್‌ ಸೆಹ್ರಾವತ್‌ 1.72 ಕೋಟಿ ರೂ.ಗೆ ತೆಲುಗು ಟೈಟಾನ್ಸ್‌ ಪಾಲಾಗಿ ಗಮನ ಸೆಳೆದರು.

ಬೆಂಗಳೂರು ತಂಡ: ಅಜಿಂಕ್ಯ ಪವಾರ್‌, ಪ್ರದೀಪ್‌ ನರ್ವಾಲ್‌, ಲಕ್ಕಿ ಕುಮಾರ್‌, ಮಂಜೀತ್‌, ಚಂದ್ರನಾಯ್ಕ ಎಂ., ಹಾಸುನ್‌ ತೊಂಕ್ರುಯಿಯ, ಪ್ರಮೋದ್‌ ಸಾಯಿಸಿಂಗ್‌, ನಿತಿನ್‌ ರಾವಲ್‌, ಜೈ ಭಗವಾನ್‌, ಜತಿನ್‌.
ಉಳಿಸಿಕೊಳ್ಳಲಾಗಿದ್ದ ಆಟಗಾರರು: ಪೊನ್ಪರ್ತಿಬನ್‌ ಸುಬ್ರಮಣಿಯನ್‌, ಸುಶೀಲ್‌, ರೋಹಿತ್‌ ಕುಮಾರ್‌, ಸೌರಭ್‌ ನಂದಲ್‌, ಆದಿತ್ಯ ಪವಾರ್‌, ಅಕ್ಷಿತ್‌, ಅರುಲ್‌ನಂತಬಾಬು, ಪ್ರತೀಕ್‌.

ಕೋಟಿ ರೂ. ದಾಟಿದವರು
ಸಚಿನ್‌ ತನ್ವರ್‌, 2.15 ಕೋಟಿ ರೂ. (ತಮಿಳುನಾಡು)
ಮೊಹಮ್ಮದ್‌ ಶಾರ್ದೂಯಿ, 2.07 ಕೋಟಿ (ಹರ್ಯಾಣ)
ಗುಮಾನ್‌ ಸಿಂಗ್‌, 1.97 ಕೋಟಿ ರೂ. (ಗುಜರಾತ್‌)
ಪವನ್‌ ಸೆಹ್ರಾವತ್‌, 1.72 ಕೋಟಿ ರೂ. (ತೆಲುಗು)
ಭರತ್‌ ಹೂಡಾ, 1.30 ಕೋಟಿ ರೂ. (ಯುಪಿ)
ಮಣಿಂದರ್‌ ಸಿಂಗ್‌, 1.15 ಕೋಟಿ ರೂ. (ಬೆಂಗಾಲ್‌)
ಅಜಿಂಕ್ಯ ಪವಾರ್‌, 1.11 ಕೋಟಿ ರೂ. (ಬೆಂಗಳೂರು)
ಸುನೀಲ್‌ ಕುಮಾರ್‌, 1.01 ಕೋಟಿ ರೂ. (ಮುಂಬಾ)

Advertisement
Advertisement

Udayavani is now on Telegram. Click here to join our channel and stay updated with the latest news.