Advertisement

Pro Kabaddi League; ಪುನೇರಿಗೆ ಜೈಪುರ್‌ ಶಾಕ್‌

11:15 PM Jan 13, 2024 | Team Udayavani |

ಜೈಪುರ: ತವರಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿಕೊಂಡು ಬಂದ ಜೈಪುರ್‌ ಪಿಂಕ್‌ ಪ್ಯಾಂಥರ್, ಟೇಬಲ್‌ ಟಾಪರ್‌ ಪುನೇರಿ ಪಲ್ಟಾನ್ಸ್‌ ವಿರುದ್ಧ ರೋಚಕ ಜಯ ಸಾಧಿಸಿದೆ. ಅಂತರ 36-34.

Advertisement

ಇದು 12 ಪಂದ್ಯಗಳಲ್ಲಿ ಪುನೇರಿಗೆ ಎದುರಾದ ಕೇವಲ 2ನೇ ಸೋಲು. ಇದರಿಂದ ಅಗ್ರಸ್ಥಾನಕ್ಕೇನೂ ಧಕ್ಕೆ ಆಗಿಲ್ಲ. ನಾಯಕ, ರೈಡರ್‌ ಅರ್ಜುನ್‌ ದೇಶ್ವಾಲ್‌ 16 ಅಂಕ ಗಳಿಸಿ ಜೈಪುರ್‌ ತಂಡದ ಹೀರೋ ಎನಿಸಿದರು. ಜೈಪುರ್‌ 12 ಪಂದ್ಯಗಳಲ್ಲಿ 8ನೇ ಜಯ ಸಾಧಿಸಿತು.

ಪುನೇರಿಯಲ್ಲೂ ನಾಯಕನ ಆಟವೇ ಗಮನ ಸೆಳೆಯಿತು. ಅಸ್ಲಾಮ್‌ ಮುಸ್ತಾಫಾ 8 ಅಂಕ ತಂದಿತ್ತರು.

ಬೆಂಗಾಲ್‌ಗೆ ಜಯ
ಇನ್ನೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ 42-37 ಅಂಕಗಳಿಂದ ಯುಪಿ ಯೋಧಾಸ್‌ಗೆ ಸೋಲುಣಿ ಸಿತು. ಇದು ಬೆಂಗಾಲ್‌ ಸಾಧಿಸಿದ 5ನೇ ಜಯ.

Advertisement

Udayavani is now on Telegram. Click here to join our channel and stay updated with the latest news.

Next