Advertisement

Pro Kabaddi League; ಬೆಂಗಳೂರಿಗೆ ಸತತ 4ನೇ ಸೋಲು: ಪಾಟ್ನಾಗೆ ರೋಚಕ ಜಯ

11:44 PM Oct 25, 2024 | Team Udayavani |

ಹೈದರಾಬಾದ್‌: ಇನ್ನೂ ಸೋಲಿನ ಸುಳಿಯಿಂದ ಹೊರಬಾರದ ಬೆಂಗಳೂರು ಬುಲ್ಸ್‌, 11ನೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ 4ನೇ ಆಘಾತದಿಂದ ತತ್ತರಿಸಿದೆ. ಶುಕ್ರವಾರದ ಮುಖಾಮುಖೀಯಲ್ಲಿ ಪುಣೇರಿ ಪಲ್ಟಾನ್‌ 36-22 ಅಂತರದಿಂದ ಬುಲ್ಸ್‌ಗೆ ತಿವಿಯಿತು. ಇದು 4 ಪಂದ್ಯಗಳಲ್ಲಿ ಪುಣೇರಿಗೆ ಒಲಿದ 3ನೇ ಜಯ.

Advertisement

ಪಾಟ್ನಾಗೆ ರೋಚಕ ಜಯ
ಹ್ಯಾಟ್ರಿಕ್‌ ಗೆಲುವಿನ ಹಾದಿಯಲ್ಲಿದ್ದ ತಮಿಳ್‌ ತಲೈವಾಸ್‌ ಕೊನೆಯ ಹಂತದಲ್ಲಿ ಮುಗ್ಗರಿಸಿ ಪಾಟ್ನಾ ಪೈರೆಟ್ಸ್‌ಗೆ 40-42 ಅಂಕಗಳಿಂದ ಶರಣಾಯಿತು. ಇದು ಪಾಟ್ನಾಕ್ಕೆ ಒಲಿದ ಮೊದಲ ಜಯ. ಪಾಟ್ನಾ ಪರ ರೈಡರ್‌ ದೇವಾಂಕ್‌ ಅಮೋಘ ಪ್ರದರ್ಶನ ನೀಡಿ 25 ಅಂಕ ಕಲೆಹಾಕಿದರು. ತಮಿಳ್‌ ತಂಡದ ರೈಡರ್‌ ನರೇಂದರ್‌ ಕಂಡೋಲ 15 ಅಂಕ ತಂದಿತ್ತರು.

ಶನಿವಾರದ ಪಂದ್ಯ
1. ಮುಂಬಾ ಬೆಂಗಾಲ್‌
ಆರಂಭ: ರಾತ್ರಿ 8 ಗಂಟೆ

2. ತೆಲುಗು ಡೆಲ್ಲಿ
ಆರಂಭ: ರಾತ್ರಿ 9 ಗಂಟೆ

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next