Advertisement

Pro Kabaddi: ಅಗ್ರಸ್ಥಾನ ಗಟ್ಟಿಗೊಳಿಸಿದ ಜೈಪುರ

11:03 PM Feb 19, 2024 | Team Udayavani |

ಪಂಚಕುಲ: ಗುಜರಾತ್‌ ಜೈಂಟ್ಸ್‌ ವಿರುದ್ಧ 45-36 ಅಂಕಗಳ ಜಯ ಸಾಧಿ ಸಿದ ಜೈಪುರ್‌ ಪಿಂಕ್‌ ಪ್ಯಾಂಥರ್ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಟ್ಟಿಗೊ ಳಿಸಿದೆ. ತಂಡದ ಅಂಕವೀಗ 92ಕ್ಕೆ ಏರಿದೆ.

Advertisement

ಇದು 22 ಪಂದ್ಯಗಳಲ್ಲಿ ಜೈಪುರ್‌ ಸಾಧಿಸಿದ 16ನೇ ಗೆಲುವು. ರೈಡರ್‌ಗಳಾದ ಅರ್ಜುನ್‌ ದೇಶ್ವಾಲ್‌ 13 ಅಂಕ, ಶುಭಂ ಶೆಲ್ಕೆ 8 ಅಂಕ ಗಳಿಸಿ ಜೈಪುರ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್‌ 22 ಪಂದ್ಯಗಳಲ್ಲಿ 9ನೇ ಸೋಲನುಭವಿಸಿತು. ಪ್ರತೀಕ್‌ ದಹಿಯಾ 14 ಅಂಕ ತಂದಿತ್ತರು.

ಪುನೇರಿ ಜಯಭೇರಿ
ದಿನದ 2ನೇ ಪಂದ್ಯದಲ್ಲಿ ಪುನೇರಿ ಪಲ್ಟಾನ್‌ 51-36 ಅಂಕಗಳಿಂದ ಹರ್ಯಾಣ ಸ್ಟೀಲರ್ ತಂಡವನ್ನು ಕೆಡವಿ ದ್ವಿತೀಯ ಸ್ಥಾನದಲ್ಲಿ ಮುಂದುವರಿಯಿತು (91 ಅಂಕ). ರೈಡರ್‌ ಮೋಹಿತ್‌ ಗೋಯತ್‌ 12 ಅಂಕ ಗಳಿಸಿ ಕೊಟ್ಟರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next