Advertisement

Pro Kabaddi:ಹರ್ಯಾಣ ಜಯ; ಪಾಟ್ನಾಕ್ಕೆ 8ನೇ ಜಯ

11:00 PM Jan 29, 2024 | Team Udayavani |

ಪಾಟ್ನಾ: ತನ್ನ 16ನೇ ಪ್ರೊ ಕಬಡ್ಡಿ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಹರ್ಯಾಣ ಸ್ಟೀಲರ್ 41-36 ಅಂತರದಿಂದ ಬೆಂಗಾಲ್‌ಗೆ ಸೋಲುಣಿಸಿದೆ.

Advertisement

ರೈಡರ್‌ಗಳಾದ ಶಿವಂ ಪತಾರೆ (12 ಅಂಕ) ಮತ್ತು ಸಿದ್ಧಾರ್ಥ್ ದೇಸಾಯಿ (11 ಅಂಕ) ಹರ್ಯಾಣ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಂಗಾಲ್‌ ನಾಯಕ ಮಣಿಂದರ್‌ ಸಿಂಗ್‌ (13 ಅಂಕ) ದಿಟ್ಟ ಆಟವಾಡಿದರೂ ಪ್ರಯೋಜನ ವಾಗಲಿಲ್ಲ.

ಪಾಟ್ನಾಕ್ಕೆ 8ನೇ ಜಯ
ಇನ್ನೊಂದು ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್‌ 32-20 ಅಂಕಗಳಿಂದ ಗುಜರಾತ್‌ ಜೈಂಟ್ಸ್‌ ವಿರುದ್ಧ ಜಯ ಸಾಧಿಸಿತು. ಪಾಟ್ನಾಕ್ಕೆ 17 ಪಂದ್ಯಗಳಲ್ಲಿ ಒಲಿದ 8ನೇ ಜಯ ಇದಾಗಿದೆ. ರೈಡರ್‌ ಸಂದೀಪ್‌ ಕುಮಾರ್‌ (7 ಅಂಕ), ಆಲ್‌ರೌಂಡರ್‌ ಅಂಕಿತ್‌ (6 ಅಂಕ) ಉತ್ತಮ ಪ್ರದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next