ಹೈದರಾಬಾದ್: ಲೀಗ್ ಹಂತದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಪುನೇರಿ ಪಲ್ಟಾನ್ 10ನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮೊದಲ ಸಲ ಕಿರೀಟ ಏರಿಸಿ ಕೊಂಡು ಮೆರೆದಾಡಿದೆ. ಶುಕ್ರವಾರದ ಜಿದ್ದಾಜಿದ್ದಿ ಫೈನಲ್‌ನಲ್ಲಿ ಪುನೇರಿ 28-25 ಅಂಕಗಳಿಂದ ಹರಿಯಾಣ ಸ್ಟೀಲರ್ಗೆ ಸೋಲುಣಿಸಿತು.
ಪುನೇರಿಗೆ ಇದು ಸತತ 2ನೇ ಫೈನಲ್ ಆಗಿತ್ತು. ಕಳೆದ ಸಲ ಜೈಪುರ್ ವಿರುದ್ಧ 33-29 ಅಂತರದಿಂದ ಸೋಲನುಭವಿ ಸಿತ್ತು. ಈ ಬಾರಿ ಜೈಪುರವನ್ನು ಸೆಮಿ ಫೈನಲ್‌ನಲ್ಲೇ ಕೆಡವಿದ ಹರಿಯಾಣ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆಯಿತು. ಆದರೆ ಇಲ್ಲಿ ಅದೃಷ್ಟ ಕೈಕೊಟ್ಟಿತು. ಲೀಗ್ ಹಂತದಲ್ಲಿ ಹರಿಯಾಣ 5ನೇ ಸ್ಥಾನದಲ್ಲಿತ್ತು.
ಫೈನಲ್ ಹಣಾಹಣಿ ಆರಂಭದಿಂದಲೇ ತೀವ್ರ ಪೈಪೋಟಿಯ ಸೂಚನೆ ನೀಡಿತು. ಪುಣೆ ಬಹಳ ಬೇಗ ಅಂಕದ ಖಾತೆ ತೆರೆದರೆ, ಹರಿಯಾಣಕ್ಕೆ 7 ನಿಮಿಷ ಬೇಕಾಯಿತು. ವಿರಾಮದ ವೇಳೆ ಪುನೇರಿ 13-10 ಅಂಕಗಳ ಮುನ್ನಡೆ ಸಾಧಿಸಿತ್ತು.
ಪುನೇರಿ ಪರ ರೈಡರ್‌ಗಳಾದ ಪಂಕಜ್ ಮೋಹಿತೆ 9, ಮೋಹಿತ್ ಗೋಯತ್ 5, ನಾಯಕ ಅಸ್ಲಾಮ್ ಇನಾಮಾªರ್ 4 ಅಂಕ ಗಳಿಸಿದರು. ಮೋಹಿತ್ ಒಮ್ಮೆಲೇ ಗಳಿಸಿದ 4 ರೈಡಿಂಗ್ ಅಂಕ ಪಂದ್ಯದ ಗತಿಯನ್ನು ಬದಲಿಸಿತು.
ಹರಿಯಾಣ ಪರ ಮಿಂಚಿದ್ದು ರೈಡರ್‌ಗಳಾದ ಶಿವಂ ಪತಾರೆ (6), ಸಿದ್ಧಾರ್ಥ್ ದೇಸಾಯಿ (4) ವಿನಯ್ (3) ಮತ್ತು ಡಿಫೆಂಡರ್ ಮೋಹಿತ್ (3).
· ಸದಾಶಿವ ಎಸ್.