Advertisement

ಪ್ರೊ ಕಬಡ್ಡಿ: ಮುಂಬಾ-ಯುಪಿ ನಡುವೆ ಇಂದು ಎಲಿಮಿನೇಟರ್‌

12:35 AM Dec 30, 2018 | Team Udayavani |

ಕೊಚ್ಚಿ: ಭಾನುವಾರದಿಂದ ಪ್ರೊ ಕಬಡ್ಡಿ ಪ್ಲೇಆಫ್ ಹಂತ ಶುರು. ಕೊಚ್ಚಿಯಲ್ಲಿ ಮೊದಲನೇ ಎಲಿಮಿನೇಟರ್‌ ಪಂದ್ಯ ಯು ಮುಂಬಾ ಮತ್ತು ಯುಪಿ ಯೋಧಾಸ್‌ ನಡುವೆ ನಡೆಯುವ ಮೂಲಕ ಪ್ರೊ ಕಬಡ್ಡಿ ಅಂತಿಮ ಹಂತಕ್ಕೆ ಚಾಲನೆ ಸಿಗಲಿದೆ. 

Advertisement

ಎಲಿಮಿನೇಟರ್‌ ಸುತ್ತಿನಲ್ಲಿ ತಂಡಗಳಿಗೆ ಗೆಲ್ಲುವುದೊಂದೇ ದಾರಿ. ಸೋತ ತಂಡ ನೇರವಾಗಿ ಹೊರಹೋಗುತ್ತದೆ. ಬಲಿಷ್ಠ ಯು ಮುಂಬಾ ತಂಡಕ್ಕೆ ಸಾಮಾನ್ಯ ತಂಡ ಯುಪಿ ಯೋಧಾಸ್‌ ಎದುರಾಳಿಯಾಗಿದೆ. ಇದುವರೆಗಿನ ಲೆಕ್ಕಾಚಾರಗಳನ್ನು ಪರಿಗಣಿಸಿದರೆ, ಮುಂಬಾ ಗೆಲ್ಲುವುದು ಖಚಿತವಾಗಿದೆ. ಯುಪಿ ಪ್ಲೇಆಫ್ ಸುತ್ತಿಗೇರಿದ್ದನ್ನು ಪರಿಗಣಿಸಿದರೆ, ಉಳಿದ ತಂಡಗಳು ತಮ್ಮ ಗುಣಮಟ್ಟವನ್ನು ಕಳೆದುಕೊಂಡಿವೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಎ ವಲಯದಲ್ಲಿ ಆಡಿದ ಯು ಮುಂಬಾ ಒಟ್ಟು 22 ಪಂದ್ಯಗಳಲ್ಲಿ 15 ಗೆದ್ದು, 5 ಪಂದ್ಯವನ್ನು ಮಾತ್ರ ಸೋತು, 2 ಪಂದ್ಯವನ್ನು ಟೈ ಮಾಡಿಕೊಂಡಿದೆ. ಇದಕ್ಕೆ ಹೋಲಿಸಿದರೆ ಯುಪಿ 22 ಪಂದ್ಯಗಳಲ್ಲಿ 8 ಪಂದ್ಯ ಮಾತ್ರ ಗೆದ್ದು, 10 ಪಂದ್ಯ ಸೋತು, 4 ಪಂದ್ಯ ಟೈ ಮಾಡಿಕೊಂಡಿದೆ.  ಈ ಎಲಿಮಿನೇಟರ್‌ ಪಂದ್ಯವನ್ನು ಗೆಲ್ಲುವ ತಂಡ, ಇನ್ನೂ ಎರಡು ಪಂದ್ಯ ಗೆದ್ದರೆ ಮಾತ್ರ ಫೈನಲ್‌ಗೇರಲಿದೆ. ಈ ಹಂತದಲ್ಲಿ ಎಲ್ಲಿ ಎಡವಿದರೂ ನಿರಾಸೆ ಕಟ್ಟಿಟ್ಟದ್ದು.

ಅಚ್ಚರಿಯೆಂದರೆ ಸತತ 3 ಬಾರಿ ಪ್ರೊ ಕಬಡ್ಡಿ ಗೆದ್ದು ದಾಖಲೆ ನಿರ್ಮಿಸಿದ್ದ ಪಾಟ್ನಾ ಪೈರೇಟ್ಸ್‌ ತಂಡ ಈ ಬಾರಿ ಪೂರ್ಣ ವೈಫ‌ಲ್ಯ ಅನುಭವಿಸಿ, ಲೀಗ್‌ ಹಂತದಲ್ಲಿಯೇ ಕೂಟದಿಂದ ಹೊರಬಿದ್ದಿದೆ. ಹಿಂದೆ ನಡೆದ ಹರಾಜಿನಲ್ಲಿ ಪಾಟ್ನಾದ ಖ್ಯಾತ ಆಟಗಾರ ಮೋನು ಗೋಯತ್‌ ಬೇರೆ ತಂಡದ ಪಾಲಾಗಿದ್ದು ಈ ಫ‌ಲಿತಾಂಶಕ್ಕೆ ಕಾರಣ. ಅಲ್ಲದೇ ಪ್ರಮುಖ ಆಟಗಾರ ಪ್ರದೀಪ್‌ ನರ್ವಾಲ್‌ ವೈಫ‌ಲ್ಯವನ್ನೂ ಪಾಟ್ನಾ ಸ್ಥಿತಿಗೆ ಕಾರಣವೆಂದು ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next