Advertisement

ಬೆಂಗಾಲ್‌ ಕದನ ಗೆದ್ದ ದಿಲ್ಲಿ; ಮತ್ತೆ ನವೀನ್‌ ಕುಮಾರ್‌ ಆರ್ಭಟ

10:57 PM Dec 29, 2021 | Team Udayavani |

ಬೆಂಗಳೂರು: ಬುಧವಾರದ ಬೆಂಗಾಲ್‌ ಕದನವನ್ನು ದೊಡ್ಡ ಅಂತರದಲ್ಲಿ ಗೆದ್ದ ದಬಾಂಗ್‌ ದಿಲ್ಲಿ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ. ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯರ್ ವಿರುದ್ಧ ದಿಲ್ಲಿ ಪಡೆ 52-35 ಅಂತರದ ಅಮೋಘ ಜಯ ಸಾಧಿಸಿತು.

Advertisement

ಇದು 4 ಪಂದ್ಯಗಳಲ್ಲಿ ದಿಲ್ಲಿಗೆ ಒಲಿದ 3ನೇ ಜಯ. ಒಂದು ಪಂದ್ಯ ಟೈ ಮಾಡಿಕೊಂಡಿತ್ತು. ದಿಲ್ಲಿ 18 ಅಂಕ ಗಳಿಸಿದೆ. ಇನ್ನೊಂದೆಡೆ ಬೆಂಗಾಲ್‌ ಸತತ 2 ಪಂದ್ಯಗಳಲ್ಲಿ ಎಡವಿತು.

ದಿಲ್ಲಿ-ಬೆಂಗಾಲ್‌ ನಡುವಿನ ಮೊದಲ ಪಂದ್ಯ ಕಳೆದ ಸಲದ ಫೈನಲ್‌ ಮುಖಾಮುಖಿಯ ಪುನರಾವರ್ತನೆ ಯಾಗಿತ್ತು. ಅಂದು ಬೆಂಗಾಲ್‌ ಗೆದ್ದು ಚಾಂಪಿಯನ್‌ ಆದರೆ, ಇಂದು ದಿಲ್ಲಿ ಭಾರೀ ಅಂತರದಿಂದ ಬೆಂಗಾಲ್‌ ಕದನ ಗೆದ್ದಿತು. ದಿಲ್ಲಿಯ ರೈಡರ್‌ ನವೀನ್‌ ಕುಮಾರ್‌ ಮತ್ತೊಮ್ಮೆ ಆರ್ಭಟಿಸಿ 24 ಅಂಕ ಗಳಿಸಿ ಕೊಟ್ಟರು. ಆಲ್‌ರೌಂಡರ್‌ ವಿಜಯ್‌ ದಿಲ್ಲಿಯ ಮತ್ತೋರ್ವ ಹೀರೋ ಎನಿಸಿದರು. ವಿಜಯ್‌ ತಂದಿತ್ತ ಅಂಕ 10.

ಪಂದ್ಯದ ಆರಂಭದಿಂದಲೇ ರೈಡಿಂಗ್‌ ಮತ್ತು ರಕ್ಷಣಾ ವಿಭಾಗಗಳೆರಡರಲ್ಲೂ ದಿಲ್ಲಿ ಅಮೋಘ ಹಿಡಿತ ಸಾಧಿಸಿತು. ವಿರಾಮದ ವೇಳೆ 33-15 ಅಂಕಗಳ ಬೃಹತ್‌ ಮುನ್ನಡೆ ದಿಲ್ಲಿಯ ಪಾರಮ್ಯಕ್ಕೆ ಸಾಕ್ಷಿಯಾಗಿತ್ತು.

ಇದನ್ನೂ ಓದಿ:ಪೃಥ್ವಿ ಶಾ ಮುಂಬಯಿ ರಣಜಿ ನಾಯಕ : ಅರ್ಜುನ್ ತೆಂಡೂಲ್ಕರ್ ತಂಡದಲ್ಲಿ

Advertisement

ಬೆಂಗಾಲ್‌ ತಂಡದ ತಾರಾ ರೈಡರ್‌ ಮಣಿಂದರ್‌ ಸಿಂಗ್‌ 16 ಅಂಕ ಗಳಿಸಿದರೂ ಮೊದಲಾರ್ಧದ ಆಟದಲ್ಲಿ ಯಶಸ್ಸು ಕಾಣಲಿಲ್ಲ. ಅವರ ರೈಡ್‌ಗಳು ವಿಫ‌ಲಗೊಂಡದ್ದೇ ಹೆಚ್ಚು. ದ್ವಿತೀಯಾರ್ಧದಲ್ಲಿ ಮಣಿಂದರ್‌ ಅಬ್ಬರಿಸಿದರೂ ಆಗಲೇ ದಿಲ್ಲಿ ಬಹಳ ಮುಂದೆ ಸಾಗಿತ್ತು. ಬಂಗಾಲದ ಮತ್ತೋರ್ವ ರೈಡರ್‌ ಸುಕೇಶ್‌ ಹೆಗ್ಡೆ 9 ಅಂಕ ಕೊಡಿಸಿದರು. ಕರ್ನಾಟಕದ ಮತ್ತಿಬ್ಬರು ಆಟಗಾರರಾದ ದರ್ಶನ್‌ ಜೆ. (1 ಅಂಕ) ಮತ್ತು ಸಚಿನ್‌ ವಿಠuಲ (0) ವಿಫ‌ಲರಾದರು. ಡಿಫೆಂಡರ್‌ ಅಬೋಜರ್‌ ಮಿಘಾನಿ (4) ಸಾಧಾರಣ ಯಶಸ್ಸು ಕಂಡರು.

ಯುಪಿ ಯೋಧಾ ಮತ್ತು ಗುಜರಾತ್‌ ನಡುವಿನ ದಿನದ ಮತ್ತೂಂದು ಪಂದ್ಯ32-32 ಅಂತರದಿಂದ ಸಮಬಲಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next