Advertisement

ಪ್ರೊ ಕಬಡ್ಡಿ: ತಮಿಳ್‌ ತಲೈವಾಸ್‌ ವಿರುದ್ಧ ಸೋಲು ಕಂಡ ಬೆಂಗಳೂರು ಬುಲ್ಸ್‌

02:30 PM Jan 31, 2022 | Team Udayavani |

ಬೆಂಗಳೂರು: ಪ್ರೊ ಕಬಡ್ಡಿ ಕೂಟದ ಆರಂಭದಲ್ಲಿ ಅಮೋಘ ಮೇಲುಗೈ ಸಾಧಿಸುತ್ತ ಬಂದ ಬೆಂಗಳೂರು ಬುಲ್ಸ್‌ ಈಗ ಸತತವಾಗಿ ಸೋಲಿನತ್ತ ಜಾರುತ್ತಿದೆ.

Advertisement

ರವಿವಾರ ತಮಿಳ್‌ ತಲೈವಾಸ್‌ ವಿರುದ್ಧ 24-42 ಅಂತರದಿಂದ ಎಡವಿ 7ನೇ ಸೋಲನ್ನು ಹೊತ್ತುಕೊಂಡಿತು. ಕೊನೆಯ 6 ಪಂದ್ಯಗಳಲ್ಲಿ ಬುಲ್ಸ್‌ಗೆ ಎದುರಾದ 5ನೇ ಸೋಲು ಇದಾಗಿದೆ.

ಜೈಪುರಕ್ಕೆ ಭರ್ಜರಿ ಜಯ
ಮೊದಲ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ 51-30 ಅಂಕಗಳಿಂದ ಬಲಿಷ್ಠ ಪಾಟ್ನಾ ಪೈರೇಟ್ಸ್‌ ತಂಡವನ್ನು ಸೋಲಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ತುಸು ಮೇಲೇರಿದೆ.

ಜೈಪುರ ಗೆಲುವಿನಲ್ಲಿ ದಾಳಿಗಾರ ಅರ್ಜುನ್‌ ದೇಶ್ವಾಲ್‌ (17), ದೀಪಕ್‌ ಹೂಡಾ (8) ಮುಖ್ಯ ಪಾತ್ರ ವಹಿಸಿದರು. ರಕ್ಷಣಾ ವಿಭಾಗದಲ್ಲಿ ಸವ್ಯಸಾಚಿ ಸಂದೀಪ್‌ ಧುಲ್‌ ಅತ್ಯುತ್ತಮವಾಗಿ ಆಡಿದರು. ಅವರು 8 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ, ಅದರಲ್ಲಿ 5 ಬಾರಿ ಯಶಸ್ವಿಯಾಗಿ 5 ಅಂಕ ಸಂಪಾದಿಸಿದರು.

Koo App

Advertisement

Udayavani is now on Telegram. Click here to join our channel and stay updated with the latest news.

Next