Advertisement

ಪ್ರೊ ಕಬಡ್ಡಿ: ಮತ್ತೆ ಅಗ್ರಸ್ಥಾನಕ್ಕೆ ನೆಗೆದ ಪುನೇರಿ ಪಲ್ಟಾನ್ಸ್‌

11:21 PM Nov 14, 2022 | Team Udayavani |

ಪುಣೆ: ಸೋಮವಾರದ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ಬೆಂಗಾಲ್‌ ಟೈಗರ್ ತಂಡವನ್ನು 43-27 ಅಂತರದಿಂದ ಕೆಡವಿದ ಪುನೇರಿ ಪಲ್ಟಾನ್ಸ್‌ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ನೆಗೆದಿದೆ. ಅದೀಗ 49 ಅಂಕ ಹೊಂದಿದೆ. ಬೆಂಗಳೂರು ಬುಲ್ಸ್‌ ದ್ವಿತೀಯ ಸ್ಥಾನಕ್ಕೆ ಇಳಿಯಿತು (46 ಆಂಕ).

Advertisement

ಇದು 14 ಪಂದ್ಯಗಳಲ್ಲಿ ಪುನೇರಿ ಸಾಧಿಸಿದ 8ನೇ ಗೆಲುವು. ರೈಡರ್‌ಗಳಾದ ಆಕಾಶ್‌ ಶಿಂಧೆ (10 ಅಂಕ), ಅಸ್ಲಾಮ್‌ ಇನಾಮಾªರ್‌ (9 ಅಂಕ) ಪುನೇರಿ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬೆಂಗಾಲ್‌ ಪರ ಮಣಿಂದರ್‌ ಸಿಂಗ್‌ ಅವರದು ಏಕಾಂಗಿ ಹೋರಾಟವಾಗಿತ್ತು. ಅವರೊಬ್ಬರೇ 14 ಅಂಕ ಗಳಿಸಿ ಕೊಟ್ಟರು.

ಅತ್ಯಂತ ರೋಚಕವಾಗಿ ಸಾಗಿದ ದಿನದ ಇನ್ನೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 33-32 ಆಂಕಗಳಿಂದ ಗುಜರಾತ್‌ ಜೈಂಟ್ಸ್‌ಗೆ ಸೋಲುಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next