Advertisement

ಪ್ರೊ ಕಬಡ್ಡಿ: ಬೆಂಗಾಲ್‌ ವಾರಿಯರ್, ದಬಾಂಗ್‌ ದಿಲ್ಲಿ ಗೆಲುವಿನ ಆಟ

11:16 PM Feb 18, 2022 | Team Udayavani |

ಬೆಂಗಳೂರು: ಪುನೇರಿ ಪಲ್ಟಾನ್‌ ವಿರುದ್ಧದ ಅಂತಿಮ ಪ್ರೊ ಕಬಡ್ಡಿ ಲೀಗ್‌ ಪಂದ್ಯವನ್ನು ಬೆಂಗಾಲ್‌ ವಾರಿಯರ್ 43- 36 ಅಂತರದಿಂದ ಜಯಿಸಿದೆ. ಆದರೆ ಇದರಿಂದ ಬೆಂಗಾಲ್‌ಗೆ ಯಾವುದೇ ಲಾಭ ವಾಗಲಿಲ್ಲ. ಅದು 9ನೇ ಸ್ಥಾನದಲ್ಲಿ ಉಳಿದಿದೆ.

Advertisement

ಪುನೇರಿ 11 ಪಂದ್ಯ ಜಯಿಸಿದ್ದು, ಇನ್ನೂ ಒಂದು ಪಂದ್ಯ ಆಡಲಿಕ್ಕಿದೆ. ಪಾಟ್ನಾ, ದಿಲ್ಲಿ ಮತ್ತು ಯೋಧಾ ತಂಡಗಳ ಮುಂದಿನ ಸುತ್ತಿನ ಪ್ರವೇಶವಷ್ಟೇ ಅಧಿಕೃತಗೊಂಡಿದೆ.

ಬೆಂಗಾಲ್‌ ನಾಯಕ ಮಣಿಂದರ್‌ ಸಿಂಗ್‌ ಅಮೋಘ ರೈಡಿಂಗ್‌ ನಡೆಸಿ 11 ಅಂಕ ತಂದಿ ತ್ತರು. ಮತ್ತೋರ್ವ ರೈಡರ್‌ ಸುಕೇಶ್‌ ಹೆಗ್ಡೆ 7 ಅಂಕ ಗಳಿಸಿದರು. ಪುನೇರಿ ರೈಡರ್‌ ಮೋಹಿತ್‌ ಗೋಯತ್‌ ಪ್ರದರ್ಶನ ಅಮೋಘ ಮಟ್ಟದಲ್ಲಿತ್ತು. ಅವರು 15 ಅಂಕ ಗಳಿಸಿದರು. ಆದರೆ ಇವರಿಗೆ ಸಾಟಿ ಯಾಗುವಂಥ ಪ್ರದರ್ಶನ ಬೇರೆ ಯವರಿಂದ ಕಂಡು ಬರಲಿಲ್ಲ.

ದಬಾಂಗ್‌ ದಿಲ್ಲಿ ವಿಜಯ
ದಿನದ ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ದಿಲ್ಲಿ ಗೆಲುವು ಒಲಿಸಿಕೊಂಡಿತು. ಅದು ಈ ಕೂಟದಲ್ಲೇ ಅತ್ಯಂಕ ಕಳಪೆ ನೀಡಿದ ತೆಲುಗು ಟೈಟಾನ್ಸ್‌ಗೆ 17ನೇ ಸೋಲುಣಿಸಿತು. 22 ಪಂದ್ಯಗಳಲ್ಲಿ ಟೈಟಾನ್ಸ್‌ ಜಯಿಸಿದ್ದು ಒಂದನ್ನು ಮಾತ್ರ. ದಿಲ್ಲಿ ಗೆಲುವಿನ ಅಂತರ 40-32. ಆದರೆ ಈ ಜಯದಿಂದ ದಿಲ್ಲಿಗೆ ದ್ವಿತೀಯ ಸ್ಥಾನ ಬಿಟ್ಟು ಮೇಲೇರಲಾಗಲಿಲ್ಲ. ಅದು ಒಟ್ಟು 12 ಜಯದೊಂದಿಗೆ ಲೀಗ್‌ ವ್ಯವಹಾರ ಮುಗಿಸಿತು. ದಬಾಂಗ್‌ ದಿಲ್ಲಿ ಸಾಂ ಕ ಆಟದ ಮೂಲಕ ಮಿಂಚಿತು. ಆಲ್‌ರೌಂಡರ್‌ ವಿಜಯ್‌ ಮತ್ತು ರೈಡರ್‌ ಆಶು ಮಲಿಕ್‌ ತಲಾ 6 ಅಂಕ ಗಳಿಸಿದರು. ಟೈಟಾನ್ಸ್‌ ಪರ ಅಂಕಿತ್‌ ಬೇನಿವಾಲ್‌ ಅವರದು ಏಕಾಂಗಿ ಹೋರಾಟವಾಗಿತ್ತು (10 ಅಂಕ).

Advertisement

Udayavani is now on Telegram. Click here to join our channel and stay updated with the latest news.

Next