Advertisement

Pro Kabaddi; ತವರಲ್ಲಿ ಎಡವಿದ ಬೆಂಗಾಲ್‌

11:53 PM Feb 09, 2024 | Team Udayavani |

ಕೋಲ್ಕತಾ: ತವರಿನ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ ಸೋಲಿನ ಆಘಾತಕ್ಕೆ ಸಿಲುಕಿದೆ. ಗುಜರಾತ್‌ ಜೈಂಟ್ಸ್‌ ವಿರುದ್ಧದ ಮುಖಾಮುಖಿಯನ್ನು 32-41 ಅಂತರದಿಂದ ಕಳೆದುಕೊಂಡಿದೆ.

Advertisement

ರೈಡರ್‌ ರಾಕೇಶ್‌ 11 ಅಂಕ ತಂದು ಕೊಡುವ ಮೂಲಕ ಗುಜರಾತ್‌ನ 11ನೇ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಗುಜರಾತ್‌ ಪ್ಲೇ-ಆಳ್‌ಗೆ ಹತ್ತಿರವಾಗಿದೆ.

ಬೆಂಗಾಲ್‌ ಪರ ರೈಡರ್‌ ನಿತಿನ್‌ ಕುಮಾರ್‌ 12 ಮತ್ತು ನಾಯಕ ಮಣಿಂದರ್‌ ಸಿಂಗ್‌ 9 ಅಂಕ ತಂದಿತ್ತರೂ ಪ್ರಯೋಜನವಾಗಲಿಲ್ಲ. ದಿನದ 2ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 50-34 ಅಂತರದಿಂದ ಯುಪಿ ಯೋಧಾಸ್‌ ತಂಡವನ್ನು ಮಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next