Advertisement
ಪಂದ್ಯದ ಆರಂಭದಿಂದಲೇ ಗುಜರಾತ್ ತಂಡವನ್ನು ಹಿಂದಿಕ್ಕಲು ಯಶಸ್ವಿಯಾದ ಪಾಟ್ನಾ ಪೈರೇಟ್ಸ್ ತಂಡವು ಮುನ್ನಡೆ ಸಾಧಿಸುತ್ತ ಹೋಯಿತು. ಅಂತಿಮ ಹಂತದಲ್ಲಿ ಗುಜರಾತ್ ತೀವ್ರ ಹೋರಾಟ ನೀಡಿತ್ತು. ಇದರಿಂದ ಗೆಲುವಿನ ಸನಿಹಕ್ಕೆ ಬಂತು. ಆದರೆ ಅಂತಿಮವಾಗಿ ಪಾಟ್ನಾ 33-30 ಅಂಕಗಳಿಂದ ಜಯಭೇರಿ ಬಾರಿಸಿತು. ಪಾಟ್ನಾ ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ತಂಡವನ್ನು ಭಾರೀ ಅಂತರದಿಂದ ಸೋಲಿಸಿತ್ತು.
ಈ ಮೊದಲು ನಡೆದ ಬೆಂಗಾಲ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ ನಡುವಣ ಪಂದ್ಯವು 28-28 ಅಂಕ ಗಳಿಂದ ರೋಚಕವಾಗಿ ಟೈಗೊಂಡಿತು. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಪ್ರತಿಯೊಂದು ಅಂಕಕ್ಕೂ ತೀವ್ರವಾಗಿ ಹೋರಾಡಿದರು.
ಬೆಂಗಾಲ್ ತಂಡವು ರೈಡಿಂಗ್‌ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿತು. ಮಣಿಂದರ್, ವೈಭವ್, ನಿತಿನ್ ಮತ್ತು ಶ್ರೀಕಾಂತ್ ಹೆಚ್ಚಿನ ಅಂಕ ಗಳಿ ಸಲು ಪ್ರಯತ್ನಿಸಿದರೆ ಜೈಪುರ ಪರ ಅರ್ಜುನ್ ದೇಸ್ವಾಲ್ ರೈಡಿಂಗ್‌ನಲ್ಲಿ ಆರಂಕ ಪಡೆದರು. ಟ್ಯಾಕಲ್‌ನಲ್ಲಿಯೂ ಜೈಪುರ ಮೇಲುಗೈ ಸಾಧಿಸಿ ಏಳಂಕ ಪಡೆಯಿತು.
Related Articles
ಶುಕ್ರವಾರದಿಂದ ಬೆಂಗಳೂರು ಚರಣದ ಪಂದ್ಯಗಳು ಆರಂಭವಾಗ ಲಿದೆ. ಕೊರೊನಾ ಬಳಿಕ ಈ ವರ್ಷದಿಂದ ಈ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಪ್ರತಿಯೊಂದು ತಂಡಗಳ ತವರಿನ ಸ್ಥಳದಲ್ಲಿ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯಗಳು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಡಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯವು ಯು ಮುಂಬಾ ಮತ್ತು ಪುನೇರಿ ಪಲ್ಟಾನ್ಸ್ ನಡುವೆ ನಡೆಯಲಿದೆ.
Advertisement
ಇಂದಿನ ಪಂದ್ಯ1. ಬೆಂಗಾಲ್-ಜೈಪುರ್
l ಆರಂಭ: ರಾತ್ರಿ 8.00 2. ಗುಜರಾತ್-ಪಾಟ್ನಾ
l ಆರಂಭ: ರಾತ್ರಿ 9.00
l ಪ್ರಸಾರ: ಸ್ಟಾರ್ ಸ್ಪೋರ್ಟ್ಸ್