Advertisement
ಬುಧವಾರ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ ವಿರುದ್ಧ 21 37 ಅಂತರದ ಬೃಹತ್ ಗೆಲುವು ದಾಖಲಿಸಿದ್ದ ಪುನೇರಿ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿತ್ತು. ಇನ್ನೊಂದು ಜಿದ್ದಾಜಿದ್ದಿ ಸೆಮಿಫೈನಲ್ ಪಂದ್ಯದಲ್ಲಿ, ಎರಡು ಬಾರಿಯ ಚಾಂಪಿಯನ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ 31 27 ಅಂತರದಿಂದ ಜಯ ಗಳಿಸಿದ್ದ ಹರಿಯಾಣ ಸ್ಟೀಲರ್ಸ್ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೇರಿತ್ತು.
ನಮ್ಮ ತಂಡ ಚೆನ್ನಾಗಿದೆ. ತಂಡಕ್ಕೆ ಬಲವಾಗಿ ನಿಲ್ಲುವ ರೈಡರ್‌ಗಳಿದ್ದಾರೆ. ಹೀಗಾಗಿ ಗೆಲ್ಲಲು ನಾವು ಶೇ.100 ಪ್ರಯತ್ನ ಮಾಡುತ್ತೇವೆ. ತಂಡದಲ್ಲಿ ಎಲ್ಲರೂ ಫಿಟ್ ಆಗಿದ್ದಾರೆ. ಹೀಗಾಗಿ ಪಂದ್ಯ ಗೆಲ್ಲುತ್ತೇವೆ ಎನ್ನುವ ಸಂಪೂರ್ಣ ಭರವಸೆ ನಮಗಿದೆ.
ಜೈದೀಪ್ ದಹಿಯ ಹರಿಯಾಣ ನಾಯಕ
Related Articles
ಟೂರ್ನಿಯಲ್ಲಿ ನಮ್ಮ ತಂಡದ ಪ್ರತೀ ಆಟಗಾರರೂ ತಮ್ಮ ಪಾತ್ರ ನಿಭಾಯಿಸಿದ್ದಾರೆ. ಹೀಗಾಗಿ ಫೈನಲ್ ಪಂದ್ಯದ ಬಗ್ಗೆ ನಮಗೆ ಯಾವ ಒತ್ತಡವೂ ಇಲ್ಲ. ಇದು ಹೊಸ ಪಂದ್ಯ. ಆತ್ಮವಿಶ್ವಾಸದಿಂದ ನಿಮ್ಮ ಆಟ ಆಡಿ ಎಂದು ತಂಡದ ಆಟಗಾರರಿಗೆ ಹೇಳಿದ್ದೇನೆ.
ಅಸ್ಲಾಮ್ ಇನಾಮ್ದಾರ್- ಪುನೇರಿ ನಾಯಕ
Advertisement
3 ಕೋ.ರೂ.ಪಿಕೆಎಲ್ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಂಡ 3 ಕೋಟಿ ರೂ. ನಗದು ಪುರಸ್ಕಾರ ಬಾಚಿಕೊಳ್ಳಲಿದೆ. ರನ್ನರ್ ಅಪ್ ತಂಡಕ್ಕೆ 1.8 ಕೋಟಿ ರೂ. ಬಹುಮಾನ ಲಭಿಸಲಿದೆ. ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಮುಖಾಮುಖಿ
ಒಟ್ಟು ಪಂದ್ಯಗಳು 14
ಪುನೇರಿಗೆ ಜಯ 8
ಹರಿಯಾಣಕ್ಕೆ ಜಯ 5
ಪಂದ್ಯ ಟೈ 1 *ಸದಾಶಿವ ಎಸ್.