ಬೆಂಗಳೂರು: ಪ್ರೊ ಕಬಡ್ಡಿ 10ನೇ ಋತುವಿನ ಮಂಗಳವಾರದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ತಂಡವು ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ 60-42 ಅಂಕಗಳ ಭರ್ಜರಿ ಗೆಲುವು ದಾಖಲಿಸಿದೆ.
ಮಣಿಂದರ್ ಸಿಂಗ್, ನಿತಿನ್ ಮತ್ತು ಶ್ರೀಕಾಂತ್ ಜಾಧವ್ ಅವರ ಅಮೋಘ ರೈಡ್ ಮತ್ತು ಆಟದಿಂದಾಗಿ ಬೆಂಗಾಲ್ ತಂಡವು ಆರಂಭದಿಂದಲೇ ಭಾರೀ ಮುನ್ನಡೆಯೊಂದಿಗೆ ಭರ್ಜರಿ ಪ್ರದರ್ಶನ ನೀಡಿತು. ಮಣಿಂದರ್ ನಿತಿನ್ ರೈಡಿಂಗ್‌ನಲ್ಲಿ ಭಾರೀ ಯಶಸ್ಸು ಪಡೆದರು. ಮಣಿಂದರ್ 15 ಮತ್ತು ನಿತಿನ್ 14 ಅಂಕ ಗಳಿಸಿದರೆ ಶ್ರೀಕಾಂಥ್ 12 ಅಂಕ ಪಡೆದರು.
ಪಾಟ್ನಾ ಪರ ಸುಧಾಕರ್ ಮತ್ತು ಸಚಿನ್ ಗಮನ ಸೆಳೆದರು. ಅವರ ಉತ್ತಮ ಆಟದಿಂದಾಗಿ ಪಾಟ್ನಾ ತೀವ್ರ ಪೈಪೋಟಿ ನೀಡಲು ಸಾಧ್ಯವಾಯಿತು.
ಬುಧವಾರ ಬೆಂಗಳೂರು ಚರಣದ ಕೊನೆಯ ದಿನವಾಗಿದ್ದು ಮೊದಲ ಪಂದ್ಯ ತಮಿಳ್ ತಲೈವಾಸ್-ತೆಲುಗು ಟೈಟಾನ್ಸ್ ನಡುವೆ ನಡೆಯಲಿದೆ. ಎರಡನೇ ಪಂಧ್ಯವು ಬೆಂಗಳೂರು ಮತ್ತು ಜೈಪುರ ನಡುವೆ ನಡೆಯಲಿದೆ.
ಶುಕ್ರವಾರದಿಂದ ಪುಣೆ ಚರಣದ ಪಂದ್ಯಗಳು ಪುಣೆಯ ಬಾಳೇವಾಡಿ ಕ್ರೀಡಾ ಸಂಕೀರ್ಣದ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಮುಂಬಾ ಮತ್ತು ಪಾಟ್ನಾ ನಡುವೆ ನಡೆಯಲಿದ್ದರೆ ದ್ವಿತೀಯ ಪಂದ್ಯ ಪುನೇರಿ ಮತ್ತು ಹರಿಯಾಣ ಜತೆ ಜರಗಲಿದೆ.