Advertisement

1980 ಪ್ರಿಯಾಂಕಾ ಉಪೇಂದ್ರ ರೆಟ್ರೋ ಲುಕ್‌ ಔಟ್‌

09:38 AM Feb 24, 2021 | Team Udayavani |

ಸದ್ಯ ಒಂದರ ಹಿಂದೊಂದು ವಿಭಿನ್ನ ಚಿತ್ರಗಳಲ್ಲಿ ಬಿಝಿಯಾಗಿರುವ ನಟಿ ಪ್ರಿಯಾಂಕಾ ಉಪೇಂದ್ರ ಈ ವರ್ಷದ ಆರಂಭದಲ್ಲೇ ರೆಟ್ರೋ ಲುಕ್‌ನಲ್ಲಿ ಪ್ರೇಕ್ಷಕರಮುಂದೆ ಬರಲು ರೆಡಿಯಾಗಿದ್ದಾರೆ. ಹೌದು, ಪ್ರಿಯಾಂಕಾ ಉಪೇಂದ್ರ “1980′ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಮೊದಲ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ಇನ್ನು “1980′ ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಮಾತನಾಡಿರುವ ನಾಯಕಿ ಪ್ರಿಯಾಂಕಾ ಉಪೇಂದ್ರ, “ಕೋವಿಡ್‌ ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಸಿಕ್ಕ ಮೊದಲ ಸಿನಿಮಾ ಇದು. ಸಿನಿಮಾದ ಕಥೆ ಅದ್ಭುತವಾಗಿದ್ದರಿಂದ, ಕೇಳಿದ ತಕ್ಷಣವೇ ಈ ಪಾತ್ರ ಮಾಡಲು ಒಪ್ಪಿಕೊಂಡೆ. ಕೋವಿಡ್‌ ಭಯವಿದ್ದ ಕಾರಣ, ಆರಂಭದಲ್ಲಿ ಶೂಟಿಂಗ್‌ ಹೇಗಿರುತ್ತದೆ ಎಂದು ಟೆನ್ಶನ್‌ ಇತ್ತು. ಆದ್ರೆ ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಶೂಟಿಂಗ್‌ ಮುಗಿಯಿತು. ಹೊಸ ತಂಡವಾದ್ರೂ ತುಂಬ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ.

ತಂಡದ ಜೊತೆ ಕೆಲಸ ಮಾಡಿ ಖುಷಿಯಾಯ್ತು. ಇದೊಂದು ಸೈಕಲಾಜಿಕಲ್‌ -ಥ್ರಿಲ್ಲರ್‌ ಸಿನಿಮಾ. ಕಥೆ ಮತ್ತು ನನ್ನ ಪಾತ್ರ ಎರಡೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಸ್ಕ್ರಿಪ್ಟ್, ಮೇಕಿಂಗ್‌ ಎಲ್ಲವೂ ಚೆನ್ನಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಹೊರಬಂತು ‘ಹೀರೋ’ ಮೊದಲ ಹಾಡು

“ಪೂಜಶ್ರೀ ಪೊ›ಡಕ್ಷನ್‌’ ಮತ್ತು “ನೇಸರ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ಮೂಡಿಬಂದಿರುವ “1980′ ಚಿತ್ರಕ್ಕೆ ರಾಜ್‌ ಕಿರಣ್‌ ನಿರ್ದೇಶನವಿದೆ. “1980′ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಶರಣ್ಯಾ ಶೆಟ್ಟಿ, ಶ್ರೀಧರ್‌, ಅರವಿಂದ್‌ ರಾವ್‌, ರಮೇಶ್‌ ಪಂಡಿತ್‌, ಶಂಕರ್‌ ಅಶ್ವತ್‌, ಕಿಶೋರ್‌ ಕುಮಾರ್‌, ವಿಶಾಲ್‌ ಧೀರಜ್‌, ಧನುಷ್‌ ಗೌಡ, ಮಾಸ್ಟರ್‌ ಕೃತಿಕಾ, ಭಾನು ಪ್ರಿಯಾ ಮೊದಲಾದವರು ಇತರ ಪ್ರಮುಖ ಪಾತ್ರಗಳಲಿ ಅಭಿನಯಿಸಿದ್ದಾರೆ

Advertisement

ಚಿತ್ರಕ್ಕೆ ಜೀವ ಆಂಟೋನಿ ಛಾಯಾಗ್ರಹಣ, ಲೋಕೇಶ್‌ ಪುಟ್ಟೇಗೌಡ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಚಿಂತನ್‌ ವಿಕಾಸ್‌ ಸಂಗೀತ, ನರೇಂದ್ರ ಬಾಬು ಸಂಭಾಷಣೆಯಿದೆ. ಈಗಾಗಲೇ “1980′ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಟೀಸರ್‌ ಬಿಡುಗಡೆಯ ಮೂಲಕ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಆನಂದ್‌ ಆಡಿಯೋ ಯು- ಟ್ಯೂಬ್‌ ಚಾನೆಲ್ ನಲ್ಲಿ “1980′ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next