Advertisement
ಪ್ರತಿ ವರ್ಷ, ನಾನು, ನಮ್ಮ ಅತ್ತಿಗೆ, ಅತ್ತೆ ಎಲ್ಲ ಸೇರಿ ವರಮಹಾಲಕ್ಷಿ$¾à ಪೂಜೆ ಮಾಡ್ತೀವಿ. ಈ ಸಲ ಬೆಳ್ಳಿ ಮುಖದಲ್ಲಿ ವೆಂಟಕಟ್ರಮಣ ಸ್ವಾಮೀನ ಕೂರಿಸಿದ್ದೀವಿ. ನಾಳೆ ಲಕ್ಷಿ$¾à ಪೂಜೆ. ಹಿಂದಿನ ದಿನ ದೇವಿಗೆ ಪೂಜೆ ಮಾಡಿದರೆ ಒಳ್ಳೇದು ಅಂತ ಹೇಳಿದರು. ಅದಕ್ಕೆ ಇವತ್ತೇ ಪೂಜೆ ಮಾಡ್ತಾ ಇದ್ದೀವಿ”
ಕೇಳಿದವರೆಲ್ಲ, “”ಅರೆ, ಈಕೆ ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರÇÉಾ? ನಮ್ಮ ಕೊಡಗೋ, ಶಿರಸಿಯೋ, ಮಂಗಳೂರ ಕಡೆಯವರೇ ಇರಬೇಕು ಅಂತ ಅಂದುಕೊಳ್ಳುವಷ್ಟರ ಮಟ್ಟಿಗೆ, ಆಕೆ ಮೂಲತಃ ಬಂಗಾಲಿ ಬೆಡಗಿ ಅನ್ನೋದನ್ನೇ ಮರೆಸಿ “ನಮ್ಮೊàರು’ ಅನ್ನೋ ಭಾವ ಮೂಡಿಸುವ ಹಾಗೆ ಭಾಷೆಯನ್ನು ಅರಗಿಸಿಕೊಂಡಿದ್ದಾರೆ ಪ್ರಿಯಾಂಕಾ. ಇವರ ನಾಲಿಗೆಗೆ ಕನ್ನಡದ ಕಲಾಯಿ ಮಾಡಿಸಿದ್ದು ಹೇಗೆ? ಇದಕ್ಕೆ ಕಾರಣ ನಟ ಉಪೇಂದ್ರರೇ?
ಈ ಪ್ರಶ್ನೆಯನ್ನು ಉಪೇಂದ್ರರ ಎದುರಿಗಿಟ್ಟರೆ….
Related Articles
Advertisement
ಉಪೇಂದ್ರ-ಪ್ರಿಯಾಂಕಾ ಮದುವೆಯಾದ ಹೊಸದರಲ್ಲಿ ಮಾತನಾಡುತ್ತಿದ್ದದ್ದು ಇಂಗ್ಲೀಷಿನಲ್ಲೇ. “”ಐ ವಿಲ್ ಕಮ್, ಯೂ ಗೋ’ ಅಂತೆಲ್ಲÉ ಹೇಳುವಾಗಲೆಲ್ಲ ಮಾತಿನ ಹಿಂದಿನ ಭಾವಗಳು ಯಾರಿಗೂ ತಟ್ಟುತ್ತಿರಲಿಲ್ಲ. ಒಣಗಿ ಹಾರಿ, ಹತ್ತಿಕಾಯದ ಪದಗಳಾಗಿದ್ದವಂತೆ. ಆನಂತರ ಪ್ರಿಯಾಂಕಾ ಇಂಗ್ಲೀಷ್‌ನಲ್ಲಿ ಮಾತನಾಡಿದರೆ, ಉಪೇಂದ್ರ ಕನ್ನಡದಲ್ಲೇ ಉತ್ತರಿಸೋಕೆ ಶುರುಮಾಡಿದರು. ಯಾವುದೇ ಭಾಷೆ ಕಲಿಯಬೇಕಾದರೆ ಮೊದಲು ಅಡ್ಡ ಬರೋದು ನಾಚಿಕೆ. “ತಪ್ಪಾಯೆ¤àನೋ’ ಅನ್ನೋ ಅನುಮಾನಗಳು. ಇವು ಪ್ರಿಯಾಂಕಾ ಕನ್ನಡ ಕಲಿಯವಾಗಲೂ ಎದುರಾಗಿತ್ತು.. ಆಗ ಉಪೇಂದ್ರ ಏನು ಮಾಡಿದರು ಎಂದರೆ…
“”ಮಕ್ಕಳು ಬೇಗ ಭಾಷೆ ಕಲಿತವೆ. ಅವರಿಗೆ ತಪ್ಪುಮಾಡ್ತಾ ಇದ್ದೀವಿ, ತಪ್ಪು ಮಾಡಿದರೂ ಯಾರಾದರೂ ಏನಾದರೂ ಅಂದಕೊಳ್ತಾರಲ್ಲಪ್ಪಾ ಅನ್ನೋ ನಾಚಿಕೆ, ಭಯ ಇರೋಲ್ಲ. ಪ್ರಿಯಾ ಜೊತೆ ಕನ್ನಡ ಮಾತನಾಡುವಾಗ ಇದೇ ಟೆಕ್ನಿಕ್ ಬಳಸಿದ್ದು. ಏನಾದರು ಮಾತನಾಡಿದರೆ “ಅರೇ, ನನಗಿಂತ ಚೆನ್ನಾಗಿ ಮಾತಾಡ್ತೀಯಲ್ಲಾ’ ಅನ್ನುತ್ತಿದ್ದೆ”
“”ಮೊದಲು ಸಣ್ಣ ವಿಚಾರಗಳನ್ನು ಹೇಳ್ತಾ ಹೋದೆ. ಅವಳು ಮಾತಾಡ್ತಾ ಹೋದಳು. ಆಗಾಗ ಎಡವುತ್ತಿದ್ದಳು, ಇಂಗ್ಲಿಶ್, ಬೆಂಗಾಲಿ ಪದಗಳೆÇÉಾ ಮಧ್ಯ ಮಧ್ಯ ನುಗ್ಗಿ ಬಿಡೋದು. ಹಿಂದಿ ಪ್ರಭಾವ ಇರುವವರು ನಮಸ್ಕಾರ ಅನ್ನೋದಕ್ಕೆ ನಮಶಾRರ್ ಅಂತಾರೆ. ಇಂಥ ಸಂದರ್ಭದಲ್ಲಿ ಈ “ಶ’ ನ ತೆಗೆದು “ಸಾ’ ಎಲ್ಲಿ ಬಳಸಬೇಕು ಅಂತ ಹೇಳಿಕೊಟ್ಟರೆ ಸಾಕು. ಆಶ್ಚರ್ಯ ಅಂದರೆ ಪ್ರಿಯಾಗೆ ಜ್ಞಾಪಕಶಕ್ತಿ ಬಹಳ ಚೆನ್ನಾಗಿದೆ. ಹೊಸ ಪದಗಳನ್ನು ಕೇಳಿಸಿಕೊಂಡಾಗ ಮನದ ಸ್ಲೇಟಿನ ಮೇಲೆ ಬರೆದುಕೊಂಡು ರಿಯಾಜು ಮಾಡಿಬಿಡುತ್ತಾಳೆ”
“”ಒಂದು ಸಲ ಅಸಮಾನತೆ ಅಂದರೇನು, ಶೈಕ್ಷಣಿಕ ಎಂದರೇನು ಅಂತೆಲ್ಲ ಕೇಳಿಬಿಟ್ಟಳು. ಆಗ ಕನ್ನಡ ಒಳಗೆ ಕೆಲಸ ಮಾಡುತ್ತಿದೆ ಅಂದುಕೊಂಡೆ. ಇನ್ನೊಂದು ಸಲ ಪೂಜನೀಯವಾದುದು ಅಂದರೇನು ಅಂದಳು? ಅರೆರೇ, ಈ ಪದ ಹೇಗೆ ಗೊತ್ತಾಯ್ತು ? ಅಂತ ನೋಡಿದರೆ… ಪ್ರಿಯಾ ಯಾವುದೋ ಸಮಾರಂಭಕ್ಕೆ ಹೋಗಿ¨ªಾಗ,ಅಲ್ಲಿ ಪದ ಬಳಸಿ¨ªಾರೆ. ಅದನ್ನು ನೆನಪಿಟ್ಟುಕೊಂಡು ಬಂದು ಕೇಳಿದ್ದಳು. ಹೀಗೆ ಮಾಡಿದಾಗೆಲ್ಲ ಹೊಗಳ್ಳೋಕೆ ಶುರುಮಾಡಿದೆ. ತುಂಬ ಚೆನ್ನಾಗಿ ಮಾತಾಡ್ತೀಯಾ, ಬಹಳ ಸ್ಪಷ್ಟವಾಗಿ ಮಾತಾಡ್ತೀಯಾ ಅಂದಾಗೆಲ್ಲ. “ಹೌದಾ.. ತುಂಬ ಚೆನ್ನಾಗಿ ಮತಾಡ್ತಿನಾ’ ಅನ್ನೋಳು’ - ಹೆಂಡತಿಯ ಬಗ್ಗೆ ಇಷ್ಟು ಹೇಳಿದ ಉಪೇಂದ್ರ, ಭಾಷೆ ಕಲಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಕೂಡ ಹೇಳಿದರು”
“”ಭಾಷೆ ಹೇಳಿ ಕೊಡಬೇಕಾದರೆ ತಪ್ಪಾಗೋದು ಸಹಜ. ಆಗ ನಗಬಾರದು. ಏನ್ರೀ ಹೀಗೆ ಮಾತಾಡ್ತೀರ. ಚೆನ್ನಾಗಿಲ್ಲ ನೀವು ಮಾತಾಡಿದ್ದು ಅಂತ ಮುಖ ಕಿವುಚಿಕೊಂಡು ತೆಗಳಿದರೆ ಕಲಿಯುವವರ ಆತ್ಮವಿಶ್ವಾಸ ಪಾತಾಳಕ್ಕೆ ಬಿಧ್ದೋಗುತ್ತೆ. ಪ್ರಿಯನ ವಿಚಾರವಾಗಿ ಆ ಕೆಲಸ ಮಾಡಲಿಲ್ಲ. ಮಧ್ಯೆ, ಮಧ್ಯೆ ಸ್ವತ್ಛವಾಗಿ ಕನ್ನಡ ಬಳಕೆ ಮಾಡ್ತೀಯಾ, ಯಾರಾದರು ಸಂದರ್ಶನಕ್ಕೆ ಬಂದರೆ ಕನ್ನಡದಲ್ಲೇ ಮಾತಾಡು. ನಿನ್ನ ಸಿನೆಮಾ ಡಬ್ಬಿಂಗ್‌ಗೆ ಬಹಳ ಅನುಕೂಲ ಆಗುತ್ತೆ ಅಂತೆಲ್ಲಾ ಹುರಿದುಂಬಿಸಿದಾಗ ಖುಷಿಯಾಗೋಳು”
ಹೀಗೆ ಹೇಳುವಾಗ ಉಪೇಂದ್ರರ ಮುಖದಲ್ಲೂ ಸಂತೋಷದ ಬೆಳಕು ಹೊತ್ತಿಕೊಂಡಿತು. .
ಉಪೇಂದ್ರರಿಗೆ ಮಕ್ಕಳು ಕನ್ನಡವನ್ನು ಮುದ್ದು, ಮುದ್ದಾಗಿ, ತೊದಲು, ತೊದಲಾಗಿ ಮಾತನಾಡುವುದನ್ನು ಕೇಳುವ ಸುಖ ಬಹಳ ಇಷ್ಟ. ಅದಕ್ಕಾಗಿ ಅವರ ಮಕ್ಕಳಾದ ಐಶೂ, ಚಿನ್ನಿಗೂ ಕನ್ನಡ ಕಲಿಸಿದ್ದಾರೆ. ಶಾಲೆಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಕೊಡಿಸಿದ್ದಾರೆ. ಮುಖ್ಯವಾಗಿ ಅವರು ಅಪ್ಪನ ಜೊತೆ ಸಂಭಾಷಣೆ ಮಾಡುವುದು ಕನ್ನಡದಲ್ಲೇ. ಇದಕ್ಕೆ ಕಾರಣವೂ ಉಂಟು. ಮಕ್ಕಳು ಸ್ಕೂಲ್‌ನಲ್ಲಿ ಇಂಗ್ಲೀಷ್‌ನಲ್ಲೇ ಮಾತನಾಡುತ್ತಾರೆ. ಮನೆಯಲ್ಲೂ ಅದನ್ನೇ ಮಾಡಿದರೆ ಹೇಗೆ? ವಿದೇಶದಲ್ಲಿ ಇದ್ದಹಾಗೇ ಆಗಿಬಿಡು ತ್ತದೆ ಅಂತ ಪ್ರಿಯಾಂಕಾ ಅವರಿಗೆ ಮನೆಯಲ್ಲಿ ಮಕ್ಕಳ ಜೊತೆ ಹೆಚ್ಚಾಗಿ ಕನ್ನಡದಲ್ಲೇ ಮಾತನಾಡು ಅಂತ ಉಪೇಂದ್ರ ಹೇಳಿದ್ದರಂತೆ. “”ನಮ್ಮ ಮಕ್ಕಳು ಮಾತ್ರ ಕನ್ನಡ ಕಲಿತರೆ ಸಾಲದು. ಸ್ಕೂಲ್‌ನಲ್ಲಿ ನಾಲ್ಕು ಜನ ಸ್ನೇಹಿತರಿಗೂ ನಮ್ಮ ಭಾಷೆ ಕಲಿಸಬೇಕು ಅನ್ನೋದು ನನ್ನ ಆಸೆ. ರಜಕ್ಕೆ ಅಂತ ಮಕ್ಕಳ ಗೆಳೆಯರು ನಮ್ಮ ಮನೆಗೆ ಬರ್ತಾರೆ. ಇದೇ ಒಳ್ಳೇ ಸಮಯ ಅಂತ ಅವರಿಗೆ “ಇದು ಸಾಂಬಾರ್, ಇದು ಚಟ್ನಿ, ಇದ ಪಲ್ಯ’ ಹೀಗೆ ತಿನುಸುಗಳ ಹೆಸರುಗಳನ್ನು ತಿಳಿಸಿಕೊಡುವ ಮೂಲಕವೇ ಭಾಷೆಯ ರುಚಿ ಹತ್ತಿಸುತ್ತೇನೆ. ಅವರೂ ಪ್ರಯತ್ನ ಪಡುತ್ತಾರೆ” ಅಂತಾರೆ ಉಪೇಂದ್ರ. “”ಪ್ರಿಯಾಂಕಾ ತಮ್ಮನಿಗೂ ಕನ್ನಡ ಕಲಿ, ಇಲ್ಲಿನವರು ಅನ್ನೋ ಫೀಲ್ ಬಂದು ಬಿಡುತ್ತೆ ಅಂತ ಹೇಳ್ತಿರ್ತೀನಿ. ಅವರ ತಂದೆ, ತಾಯಿಗೆ ಸ್ವಲ್ಪ ಕನ್ನಡ ಬರುತ್ತೆ. ಓ ಬನ್ನಿ, ಬನ್ನಿ ಅಂತಾರೆ, ಊಟ ಬಹಳ ಚನ್ನಾಗಿದೆ, ಚೆನ್ನಾಗಿದೆ ಅಂತೆಲ್ಲ ಪುಟ್ಟ, ಪುಟ್ಟದಾಗಿ ಮಾತಾಡುತ್ತಾರೆ”- ಹೀಗೆ ಮನೆಯಲ್ಲಿ ಬೇರೂರಿದ, ಬೇರೆಯವರ ಮನಸ್ಸಲ್ಲಿ ನೆಟ್ಟ ಕನ್ನಡದ ಬಗ್ಗೆ ಹೇಳುತ್ತಿದ್ದಾಗ ಮತ್ತೂಮ್ಮೆ ಅವರ ಬೆರಗುಗಣ್ಣುಗಳು ತಿರುಗಾಡಿದವು. ಭಾಷೆ ನದಿಯಂತೆ
ನಮ್ಮ ಸಮಸ್ಯೆ ಏನು ಗೊತ್ತಾ? ಬೇರೆ ಭಾಷೆ ಕಲಿತೀವಿ, ಪಾಪ ಅವರಿಗೆ ಅರ್ಥವಾಗಲ್ಲ ಅಂತ ಅವರ ಭಾಷೆಯಲ್ಲೇ ಮಾತಾಡ್ತೀವಿ. ಆದರೆ ನಮ್ಮ ಭಾಷೆ ಅವರಿಗೆ ಕಲಿಸೋಲ್ಲ. ಯೂ ಡೋಂಟ್ ನೋ ಇಂಗ್ಲೀಷ್ ಅಂದರೆ. ಇಲ್ಲ ನನಗೆ ಗೊತ್ತಿಲ್ಲ ಅಂತ ಕನ್ನಡದಲ್ಲಿ ಮಾತು ಶುರುಮಾಡಿದರೆ, ಕೇಳಿದವನಿಗೆ ಗೊತ್ತಿಲ್ಲ ಅನ್ನೋ ಪದವಾದರೂ ಕಿವಿಗೆ ಬೀಳುತ್ತೆ. ನಾವು ಹೀಗೆ ಮಾಡೋಲ್ಲ. ಭಾಷೆ ಅನ್ನೋದು ನದಿಯಂತೆ ಎಲ್ಲರಲ್ಲೂ ಹರಿಯುತ್ತಾ ಇರಬೇಕು. ನಾನು ಶೂಟಿಂಗ್ ಸೆಟ್‌ಗೆ ಹೋದರೆ ಕನ್ನಡದÇÉೇ ಹೆಚ್ಚು ಮಾತಾಡೋದು. ಎಲ್ಲರಿಗೂ ಕನ್ನಡದÇÉೇ ಮಾತಾಡಿ ಅಂತ ಹೇಳ್ತೀನಿ. ಅರ್ಥವೇ ಆಗೋಲ್ಲ ಅಂದಾಗ ಮಾತ್ರ ಅವರ ಭಾಷೆಯಲ್ಲಿ ಮಾತಾಡ್ತೀನಿ.
ಎಷ್ಟೋ ಜನ ಹೇಳ್ತಾರೆ. ನಮ್ಮ ಭಾಷೆ ಸತ್ತೇ ಹೋಗುತ್ತೆ ಅಂತ. ಹಾಗೆಲ್ಲಾ ಆಗೋಲ್ಲ. ಇನ್ನೂ ನೂರು ವರ್ಷಗಳಾದರೂ ಕನ್ನಡ ಹೀಗೇ ಇರುತ್ತೆ. ನಮ್ಮ ಭಾಷೆಯ ಸೊಗಡು, ಸೊಗಸು, ಮಾಧುರ್ಯ ಆ ರೀತಿ ಇದೆ ನೋಡಿ” – ಕಟ್ಟೆ ಗುರುರಾಜ್