ಪ್ರಿಯಾಂಕಾ ಉಪೇಂದ್ರ “ಉಗ್ರಾವತಾರಾ’ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ಅವರು ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡು, ಫೈಟ್ ಸನ್ನಿವೇಶಗಳು ಬಾಕಿ ಇವೆ. ಗುರುಮೂರ್ತಿ ಈ ಚಿತ್ರದ ನಿರ್ದೇಶಕರು.
ಈ ಚಿತ್ರದಲ್ಲಿ ಪ್ರಿಯಾಂಕಾ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಸನ್ನಿವೇಶಗಳು ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ ಸಾಹಸ ಸಂಯೋಜಕ ರವಿ ಅವರಿಂದ ವಿಶೇಷ ಆ್ಯಕ್ಷನ್ ತರಬೇತಿ ಪಡೆದುಕೊಂಡು, ಕ್ಯಾಮರಾ ಮುಂದೆ ಯಾವುದೇ ಡ್ನೂಪ್ ಬಳಸದೇ ಸುಲಲಿತವಾಗಿ ಹೊಡೆದಾಡಿದ್ದಾರಂತೆ.
ಇದನ್ನೂ ಓದಿ:ಕಲರ್ ಫುಲ್ ಲುಕ್ ನಲ್ಲಿ ‘ಓಲ್ಡ್ ಮಾಂಕ್’: ರೊಮ್ಯಾಂಟಿಕ್ ಕಾಮಿಡಿ ಸಿನಿಮಾ
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗುರುಮೂರ್ತಿ, “ಇಲ್ಲಿಯವರೆಗೆ ಪ್ರಿಯಾಂಕಾ ಉಪೇಂದ್ರ ಎಲ್ಲೂ ಕಾಣಿಸಿಕೊಳ್ಳದಂತಹ, ಹೊಸ ಡಿಫರೆಂಟ್ ಗೆಟಪ್‌ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಿಯಾಂಕಾ ಅವರದ್ದು ರಫ್ ಆ್ಯಂಡ್ ಟಫ್ ಪೊಲೀಸ್ ಆಫೀಸರ್ ಪಾತ್ರ.
ಮರ್ಡರ್ ಮಿಸ್ಟರಿ ಇರುವ ಈ ಕಥೆ ಅತ್ಯಾಚಾರವೊಂದರ ಸುತ್ತ ಸಾಗುತ್ತದೆ. ಸಿನಿಮಾದ ಕೊನೆಯಲ್ಲಿ, ರಸ್ತೆಯಲ್ಲಿ ಹುಡುಗಿಯೊಬ್ಬಳು ಹೋಗುವಾಗ ಆಕೆಯನ್ನು ಗೌರವದಿಂದ ಕಾಣಿರಿ ಎನ್ನುವ ಮೆಸೇಜ್ ಕೂಡ ಇದೆ’ ಎಂದು ವಿವರಣೆ ಕೊಡುತ್ತಾರೆ.
ಚಿತ್ರದಲ್ಲಿ ಪೊಲೀಸ್ ಕಮಿಷನರ್ ಆಗಿ ಸುಮನ್ ನಟಿಸುತ್ತಿದ್ದಾರೆ. ಉಳಿದಂತೆ ನಿಸರ್ಗ, ಕಾಕ್ರೋಚ್ ಸುಧಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ