ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ‘ಸಲಾರ್’ ಚಿತ್ರದಲ್ಲಿ ಕನ್ನಡ ನಟಿಯೋರ್ವಳು ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.
ಬಹು ನಿರೀಕ್ಷಿತ ಸಲಾರ್ ಚಿತ್ರದಲ್ಲಿ ಪ್ರಭಾಸ್ ಸಹೋದರಿ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಸಹೋದರಿಯಾಗಿ ಜ್ಯೋತಿಕಾ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಜ್ಯೋತಿಕಾ ಸಲಾರ್ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಬದಲಿಗೆ ಈ ಪಾತ್ರಕ್ಕೆ ಇಬ್ಬರು ಸ್ಟಾರ್ ನಟಿಯರನ್ನು ಲಿಸ್ಟ್‌ನಲ್ಲಿ ಇಟ್ಟಿದ್ದಾರಂತೆ. ಅದರಲ್ಲಿ ಒಬ್ಬರು ಕನ್ನಡದ ನಟಿ ಪ್ರಿಯಾಂಕಾ ಉಪೇಂದ್ರ ಎನ್ನಲಾಗುತ್ತಿದೆ.
ಇನ್ನು ಪ್ರಭಾಸ್ ತಾಯಿಯ ಪಾತ್ರದಲ್ಲಿ ರಮ್ಯಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಬಾಹುಬಲಿ ಚಿತ್ರದ ನಂತರ ರಮ್ಯಾಕೃಷ್ಣ ಮತ್ತು ಪ್ರಭಾಸ್ ಕಾಂಬಿನೇಷನ್ ಎಲ್ಲರಿಗೂ ಇಷ್ಟವಾಗಿದೆ. ಈ ಚಿತ್ರದಲ್ಲೂ ತಾಯಿ ಸೆಂಟಿಮೆಂಟ್ ಅಂಶವಿದ್ದು ರಮ್ಯಾ ಕೃಷ್ಣ ಸೂಕ್ತ ಎನ್ನಲಾಗಿದೆ. ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಭಾಸ್ ಒಂದು ಪಾತ್ರದ ಬಗ್ಗೆ ಮಾತ್ರ ರಿವೀಲ್ ಮಾಡಲಾಗಿದೆ. ಈಗಾಗಲೇ ಪ್ರಭಾಸ್ ಆರ್ಮಿ ಅಧಿಕಾರಿ ವಸ್ತ್ರ ಧರಿಸಿರುವ ಕೆಲವೊಂದು ಫೋಟೋಗಳು ವೈರಲ್ ಆಗಿದೆ.