Advertisement

ಕರಕುಶಲಕರ್ಮಿಗಳ ಸಹಾಯಕ್ಕೆ ಪ್ರಿಯಾಂಕಾ : ದೇಸಿ ಉತ್ಪನ್ನ ಖರೀದಿಸುವ ಅಭಿಯಾನ

12:54 PM Oct 20, 2020 | Suhan S |

ಕೋವಿಡ್ ದಿಂದ ಅನೇಕ ಉದ್ಯಮಗಳು ಕುಸಿತಕಂಡಿವೆ. ಜೀವನೋಪಾಯಕ್ಕೆ ನಂಬಿಕೊಂಡಿದ್ದ ಕೆಲಸಕೈ ಜಾರುತ್ತಿದ್ದಂತೆ ಅನೇಕರು ಸ್ಥಿತಿಯು ಕಷ್ಟಕರವಾಗಿದೆ. ಇದರಲ್ಲಿ ಕರಕುಶಲಕರ್ಮಿ ಗಳು ಕೂಡಾ ಸೇರಿದ್ದಾರೆ. ಲಾಕ್‌ಡೌನ್‌ನಿಂದಾಗಿ 87000 ಮೀಟರ್‌ ಬಟ್ಟೆ ವ್ಯಾಪಾರವಾಗದೇ ಉಳಿದುಬಿಟ್ಟಿದೆ. ಈಗ ನಟಿ ಪ್ರಿಯಾಂಕಾ ಉಪೇಂದ್ರ ದೇಸಿ ಹಾಗೂ ಖಾದಿ ಉಡುಪುಗಳ ಪ್ರಚಾರಕ್ಕೆ ಹಾಗೂ ಕರಕುಶಲಕರ್ಮಿಗಳ ಸಹಾಯಕ್ಕೆ ಮುಂದಾಗಿದ್ದಾರೆ.

Advertisement

ಈ ಬಗ್ಗೆ ಫೇಸ್‌ ಬುಕ್‌ನಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ದೇಸಿ ಉತ್ಪನ್ನವನ್ನು ಖರೀದಿಸಿಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವ ಅಭಿಯಾನವನ್ನು ಆರಂಭಿಸಿದ್ದಾರೆ. ಇವರ ಈ ಅಭಿಯಾನಕ್ಕೆ ಅನೇಕರು ಸಾಥ್‌ ನೀಡುತ್ತಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ, ರಾಜ್ಯದ ದೇಸಿ ನೇಯ್ಗೆ ಸಮುದಾಯದ ಪರಿಸ್ಥಿತಿ ಕಷ್ಟಕರಕವಾಗಿದೆ. ಈ ಸಂದರ್ಭದಲ್ಲಿ ನಾವು ಅವರ ಸಹಾಯಕ್ಕೆ ನಿಲ್ಲಲೇಬೇಕಿದ್ದು,ಕರಕುಶಲ ಉತ್ಪನ್ನಗಳನ್ನು ಖರೀದಿಸಲು ಮುಂದಾಗಬೇಕಿದೆ ಎಂದಿದ್ದಾರೆ.­

Advertisement

Udayavani is now on Telegram. Click here to join our channel and stay updated with the latest news.

Next