Advertisement

BJP ಕಾರ್ಯಕರ್ತೆಯ ವಿಳಂಬಿತ ಜೈಲು ಬಿಡುಗಡೆ: ಮಮತಾ ಸರಕಾರಕ್ಕೆ ಸುಪ್ರೀಂ ನೊಟೀಸ್‌

09:30 AM Jul 02, 2019 | Sathish malya |

ಹೊಸದಿಲ್ಲಿ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಿರುಚಿದ ಚಿತ್ರವನ್ನು ಸಾಮಾಜಿಕ ಜಾಲ ತಾಣಕ್ಕೆ ಹಾಕಿದ ಕಾರಣಕ್ಕೆ ಜೈಲುಪಾಲಾಗಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರನ್ನು ಬಿಡುಗಡೆ ಮಾಡುವಲ್ಲಿ ಏಕೆ ವಿಳಂಬ ಮಾಡಲಾಯಿತು ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಪಶ್ಚಿಮ ಬಂಗಾಲ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿದೆ. ಈ ನೊಟೀಸಿಗೆ ನಾಲ್ಕು ದಿನಗಳ ಒಳಗೆ ಉತ್ತರಿಸುವಂತೆ ಅಪ್ಪಣೆ ಮಾಡಿದೆ.

Advertisement

ಪ್ರಿಯಾಂಕಾ ಶರ್ಮಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಲ್ಲಿ ತೋರಲಾದ ಎರಡು ದಿನಗಳ ವಿಳಂಬವು ಉನ್ನತ ನ್ಯಾಯಾಲಯದ ನಿಂದನೆ ಆಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರಿಯಾಂಕಾ ಶರ್ಮಾ ಅವರ ಸಹೋದರ ರಾಜೀಬ್‌ ಶರ್ಮಾ ಪಶ್ಚಿಮ ಸರಕಾರದ ವಿರುದ್ಧ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದ್ದರು. ತನ್ನ ಸಹೋದರಿಯನ್ನು 15 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾದ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿರುತ್ತದೆ ಎಂದು ದೂರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next