Advertisement
ಅವರು ಆ. 2ರಂದು ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಎಂಜಿನಿಯರ್ ಇಂಡಿಯಾ ಲಿಮಿಟೆಡ್ ಅವರ ಸಿಎಸ್‌ಆರ್ ಯೋಜನೆಯಡಿ ಅಲಿಮೊRà ಬೆಂಗಳೂರು, ಜಿಲ್ಲಾಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಇವರ ಸಹಕಾರದೊಂದಿಗೆ ಜಿಲ್ಲೆಯ ಅರ್ಹ 371 ಸಂತ್ರಸ್ತರಿಗೆ 40 ಲಕ್ಷ ರೂಪಾಯಿ ಮೌಲದ್ಯ ವಿವಿಧ ಸಲಕರಣೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರಿಗಾಗಿ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿರುವ ವೆಲ್ಲೂರು ಶ್ರೀನಿವಾಸ್ ಅವರು ಹೊಸ ಯೋಜನೆಯೊಂದನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ವಿಂಗಡಿಸಲು ಅಗಾಧವಾದ ಮಾನವ ಸಂಪನ್ಮೂಲದ ಅಗತ್ಯವಿದ್ದು, ಅದಕ್ಕೆ ವಿಕಲಚೇತನರನ್ನು ಉಪಯೋಗಿಸಿಕೊಳ್ಳುವ ಇರಾದೆ ಇದೆ. ಕುಳಿತಲ್ಲಿಯೇ ಸುಲಭವಾಗಿ ಕೆಲಸ ಮಾಡಬಹುದಾದ ಈ ಉದ್ಯೋಗ ವಿಕಲಚೇತನರ ಬದುಕಿಗೆ ಬಹುದೊಡ್ಡ ಆಶಾಕಿರಣವಾಗಲಿದೆ. ಉದ್ಯೋಗದಲ್ಲಿ ಆಸಕ್ತಿ ಇರುವ ವಿಕಲಚೇತನರು ಅರ್ಜಿಯನ್ನು ಸಲ್ಲಿಸಬೇಕೆಂದು ಎಂದು ಅವರು ಹೇಳಿದರು. ಅಲಿಮೊRàದ ಘಟಕದ ಮುಖ್ಯಸ್ಥ ಅನುಪಮ್ ಪ್ರಕಾಶ್ ಶಿಖರೋಪನ್ಯಾಸ ನೀಡಿದರು. ಇಐಎಲ್‌ನ ವಿಜಯ ಶಾಸಿŒ, ಕೆ. ಸ್ವಾಮಿನಾಥನ್, ಐಆರ್‌ಸಿಎಸ್ ರಾಜ್ಯ ಸಭಾಪತಿ ಬಸೂÅರು ರಾಜೀವ ಶೆಟ್ಟಿ, ಉಡುಪಿ ಘಟಕದ ಸಭಾಪತಿ ಡಾ| ಉಮೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
Related Articles
Advertisement