Advertisement

ಪ್ರಯಾಗದಲ್ಲಿ ಪ್ರಿಯಾಂಕಾ ಗಂಗಾಯಾತ್ರೆ ಪ್ರಯೋಗ ?

12:30 AM Mar 22, 2019 | |

ಮಣಿಪಾಲ: ಪ್ರಿಯಾಂಕಾ ವಾದ್ರಾ ಗಂಗಾ ತಟದಿಂದ ಆರಂಭಿಸಿರುವ ಯಾತ್ರೆಯ ವಿಶೇಷವೇನು?

Advertisement

ಮೂರು ದಿನಗಳ ಈ ಯಾತ್ರೆಯಲ್ಲಿ ಪ್ರಿಯಾಂಕಾ ಸಾಗಿದ್ದು 140 ಕಿ.ಮೀ. ಅಂದರೆ ಪ್ರಯಾಗ್‌ರಾಜ್‌ನಿಂದ ವಾರಾಣಸಿಯವರೆಗೆ. ದೋಣಿ ಯಾತ್ರೆ. ಹಾಗೆ ಸಾಗುತ್ತಾ ನದಿ ತೀರ ದಲ್ಲಿನ ಪ್ರದೇಶಗಳಲ್ಲಿ ಪ್ರಚಾರ ಮಾಡುವುದು ಯಾತ್ರೆಯ ಉದ್ದೇಶ.

ಇದು ರಾಜಕೀಯವಾಗಿ ಹೇಳುವ ರೀತಿ. ಆದರೆ ಅಷ್ಟೇ ಎಂದು ಲೆಕ್ಕ ಹಾಕಿ  ಕುಳಿತರೆ ತಪ್ಪು. ಈ ಯಾತ್ರೆಯ ಉದ್ದೇಶದ ಹಿಂದೆ ಇರುವ ಮತ್ತೂಂದು ಉದ್ದೇಶ ಮೋದಿ ಸರಕಾರ ಕೈಗೊಂಡ ಗಂಗಾ ಶುದ್ಧೀಕರಣದ ಅಸಲಿಯತ್ತು ತಾಳೆ ಹಾಕಿ ನೋಡುವುದು. ಸದ್ಯ ರಾಜ ಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು ಇದೇ. 

ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಯದ್ದೇ ಆಡಳಿತ. ಈ ಮಧ್ಯೆ ಆರಂಭದಲ್ಲಿ ಮಹಾಘಟ್‌ಬಂಧನ್‌ನ ಜತೆಗೆ ಗುರುತಿಸಿಕೊಂಡಿದ್ದ ಎಸ್ಪಿ-ಬಿಎಸ್ಪಿಗಳು ಇಂದು ಕಾಂಗ್ರೆಸ್‌ ಜತೆಯಲ್ಲಿಲ್ಲ. ಹಾಗಾಗಿ ಹಲವೆಡೆ ತ್ರಿಕೋನ ಸ್ಪರ್ಧೆ ಖಚಿತ. 

ಕಾಂಗ್ರೆಸ್‌ ಹಿಡಿತದಲ್ಲಿದ್ದ ಕ್ಷೇತ್ರಗಳು ಇಂದು ಬಿಜೆಪಿ ಪಾಲಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪರ್ಧಿಸುವ ಲೋಕಸಭಾ ಕ್ಷೇತ್ರ ಇದೇ ರಾಜ್ಯ ದಲ್ಲಿರುವುದು ಬಿಜೆಪಿಗೆ ವರವಾದರೆ, ವಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣ. ಇಂಥ ಹೊತ್ತಿನಲ್ಲಿ ಕಾಂಗ್ರೆಸ್‌ ಪರ ಗಾಳಿ ಬೀಸುವಂತೆ ಮಾಡಲು ಪ್ರಿಯಾಂಕಾ ಗಾಂಧಿ ಗಂಗಾ ಯಾತ್ರೆ ಹೊರಟಿದ್ದಾರೆ.

Advertisement

ನಂಟಿನೊಂದಿಗಿನ ರಾಜಕೀಯ
ಪ್ರಯಾಗ್‌ ರಾಜ್‌ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಭಾವನಾತ್ಮಕ ನಂಟಿದೆ.  ಪ್ರಥಮ ಪ್ರಧಾನಿ ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಜನಿಸಿದ ಸ್ಥಳವಿದು. ಮುತ್ತಜ್ಜನ ಆಶೀರ್ವಾದ ಪಡೆಯುವ ಪ್ರಯತ್ನ ಒಂದೆಡೆ. ಹಿಂದೂ ಸಮುದಾಯಕ್ಕೆ ಗಂಗೆ, ತ್ರಿವೇಣಿ ಸಂಗಮದ ಪ್ರಯಾಗ್‌ರಾಜ್‌ ಪವಿತ್ರ ಭೂಮಿ. ಇತ್ತೀಚೆಗಷ್ಟೇ ಕುಂಭ ಮೇಳ ನಡೆದು ಕೋಟ್ಯಂತರ ಮಂದಿ ಹಿಂದೂ ಸಮುದಾಯ ಪಾಲ್ಗೊಂಡಿತ್ತು. ಹೀಗಾಗಿ ಇಲ್ಲಿಂದ ಯಾತ್ರೆ ಆರಂಭಿಸಿ ಹಿಂದೂ ಸಮುದಾ  ಯದ ಒಲವುಗಳಿಸುವುದೂ ಮತ್ತೂಂದೆಡೆ.

ಹೀಗೂ ಇದ್ದೀತೇ?
ನೆಹರೂವನ್ನು ಮೂಲೆ ಗುಂಪು ಮಾಡುತ್ತಿದೆ ಎಂಬುದು ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗಿ ನಿಂದಲೂ ಕೇಳಿ ಬರುತ್ತಿದ್ದ ಕಾಂಗ್ರೆಸ್‌ನ ಟೀಕೆ. ಅದನ್ನೇ ಅಸ್ತ್ರ† ವನ್ನಾಗಿಸಿ ಕೊಳ್ಳಲು ಪ್ರಿಯಾಂಕಾ ನೆಹರೂ ಹುಟ್ಟಿದ ಊರಿನಿಂದಲೇ ಯಾತ್ರೆ ಆರಂಭಿಸಿದರೆ ಎಂಬುದೂ ಚರ್ಚಿತ ವಾಗುತ್ತಿರುವ ಮತ್ತೂಂದು ನೆಲೆ. 

ಯಾತ್ರೆಗೆ ಮೊದಲು ಇಲ್ಲಿನ ಸ್ವರಾಜ್‌ ಭವನ್‌ನಲ್ಲಿ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ವರನ್ನು ನೆನಪಿಸಿಕೊಂಡರು ಪ್ರಿಯಾಂಕಾ. ಸ್ವರಾಜ್‌ ಭವನ್‌ ಇಂದಿರಾಗಾಂಧಿ ಬೆಳೆದ ಪ್ರದೇಶ. ಅಜ್ಜಿಯ ಜತೆಗಿನ ಇಲ್ಲಿನ ಒಡನಾಟ ವನ್ನು ಮೆಲುಕು ಹಾಕಿದರು.   

ಇಷ್ಟಕ್ಕೂ ಈ ಯಾತ್ರೆಯ ಫ‌ಲ ಮೇ 23ಕ್ಕೆ ಸಿಗುವುದೋ ಅಥವಾ ಮುಂದಿನ ಉತ್ತರ ಪ್ರದೇಶದ ವಿಧಾನ ಸಭೆ ಚುನಾ ವಣೆಗೋ ಕಾದುನೋಡಬೇಕು.

ನದಿಯಲ್ಲೇ ಯಾತ್ರೆ ಯಾಕೆ? 
ಪ್ರಯಾಗ್‌ರಾಜ್‌ನಿಂದ ವಾರಾಣಸಿಗೆ ರಸ್ತೆಯ ಮೂಲಕ ತೆರಳುವ ಅವಕಾಶವಿದ್ದರೂ, ಜಲಮಾರ್ಗವನ್ನು ಬಳಸಿಕೊಂಡದ್ದು  ಮತ್ತೂಂದು ಅಚ್ಚರಿ. ಈ ಮೂಲಕ ನಮಗೂ ಗಂಗೆ ಪವಿತ್ರಳು, ಅವಳ ಮೇಲೆ ನಮಗೂ ಕಾಳಜಿ ಇದೆ ಎಂಬುದನ್ನು ಸಾರಲು ಹೊರಟಿಂತಿದೆ ಸ್ಥಿತಿ. ಗಂಗಾನದಿ ಶುದ್ಧೀಕರಣ ಕುರಿತು ಬಿಜೆಪಿ ಅಂದು ಅಧಿಕಾರದಲ್ಲಿದ್ದ ಯುಪಿಎ ಮೇಲೆ ಆರೋಪಗಳ ಸುರಿಮಳೆಗೈದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಗಂಗಾ ಕಲ್ಯಾಣ ಅಭಿಯಾನವನ್ನು ಆರಂಭಿಸಿತ್ತು. ಇದರ ನೇತೃತ್ವ ವಹಿಸಿದವರು ಮೋದಿಯೇ. ಆದ ಕಾರಣ ಗಂಗಾ ಯಾತ್ರೆಯ ಮೂಲಕ ಬಿಜೆಪಿ ಸರಕಾರ ನಡೆಸಿದ ಗಂಗಾ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮದ ಪರಿಶೀಲನೆಯನ್ನೂ ಪ್ರಿಯಾಂಕಾ ನಡೆಸುತ್ತಿದ್ದಾರೆ ಎಂಬ ವಾದಕ್ಕೆ ಜೀವ ಬಂದಿದೆ. ಯಾತ್ರೆಯಲ್ಲಿ ವಿವಿಧ ವಿವಿ ವಿದ್ಯಾರ್ಥಿಗಳನ್ನೂ ಕರೆದೊಯ್ದªದ್ದು ವಿಶೇಷ.

ಪ್ರಸ್ತಾವಿಸದ ಗಂಗಾ ಶುದ್ಧೀಕರಣ
ಪ್ರಿಯಾಂಕಾ ಬುಧವಾರ ವಾರಾಣಸಿ ತಲುಪಿದರು. ಪ್ರಯಾಗ್‌ರಾಜ್‌ನಲ್ಲಿ ಗಂಗಾಭಿಷೇಕದ ಮೂಲಕ ಯಾತ್ರೆ ಆರಂಭಿಸಿದ್ದ ಯುವರಾಣಿ, ಗಂಗೆಗೆ ಆರತಿ ಬೆಳಗುವುದರ ಮೂಲಕ ಯಾತ್ರೆಗೆ ಮಂಗಳ ಹಾಡಿದರು. ಪ್ರಧಾನಿ ಮೋದಿ ಕುಂಭ ಮೇಳದಲ್ಲಿ ಆರತಿ ಎತ್ತಿ ನಮಿಸಿದ್ದಕ್ಕೆ ಪ್ರತಿಯಾಗಿ ತಾವೂ ಗಂಗೆ ಪ್ರಿಯರು ಎಂದು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಶಾಸ್ತ್ರಿಯನ್ನು ರಾಜಕೀಯಕ್ಕೆ ಬಳಸುತ್ತಿರುವ ಬಿಜೆಪಿಯನ್ನು ಟೀಕಿಸಿದ್ದಾರೆ. ಕಾಂಗ್ರೆಸ್‌ ಹಿಂದೂ ವಿರೋಧಿ ಎಂದು ಹೇಳಿಕೆ ನೀಡುತ್ತಿದ್ದ ಬಿಜೆಪಿಗೆ ಈ ಮೂಲಕ ಕಾಂಗ್ರೆಸ್‌ ಟಾಂಗ್‌ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿಯ ವರೆಗೆ ಪ್ರಧಾನಿ ಮೋದಿಯ ಹೆಸರು ಹೇಳದೆ ಟೀಕಿಸಿದ್ದ ಪ್ರಿಯಾಂಕಾ ವಾರಾಣಸಿಯಲ್ಲಿ ಪ್ರಧಾನಿಯನ್ನು ಹೆಸರೆತ್ತಿ ಟೀಕಿಸಲು ಮರೆ ತಿಲ್ಲ. ಬಿಜೆಪಿ ಕಳೆದ ಚುನಾವಣೆಯ ಪ್ರಣಾ ಳಿಕೆಯನ್ನು ಹಿಡಿದು ಸಾಕ್ಷಿ ಸಹಿತ ಆರೋಪ ಮಾಡುವ ಮೂಲಕ ಗಮನ ಸೆಳೆದರು.

“ಕಾಂಗ್ರೆಸ್‌ ಬ್ರಿಟಿಷರ ವಿರುದ್ಧ ಅಹಿಂಸೆಯ ಅಸ್ತ್ರದಿಂದ ಹೋರಾಡಿದ ಪಕ್ಷ. ಇಂದಿಗೂ ಆ ಹೋರಾಟ ನಿಂತಿಲ್ಲ. ಆದರೆ, ಪ್ರಧಾನ ಮಂತ್ರಿಯ ಸ್ಥಾನದಲ್ಲಿ ಕುಳಿತ ಭಾರತೀಯರ ವಿರುದ್ಧವೆ ಹೋರಾಡಬೇಕಿದೆ’ ಎನ್ನುತ್ತಲೇ, ನಿಮ್ಮ ಯಾವುದೇ ಕಿರುಕುಳಕ್ಕೂ ಬೆದರುವುದಿಲ್ಲ ಎಂದು ಸಂದೇಶ ರವಾನಿಸಿದರು. 

ಆದರೆ ಎನ್‌ಡಿಎಯ ಗಂಗೆಯ ಶುದ್ಧೀಕರಣ ಯೋಜನೆ ಕುರಿತು ಅಷ್ಟಾಗಿ ಪ್ರಸ್ತಾವಿಸದಿದ್ದುದು ವಿಶೇಷವೇ ಸರಿ.

– ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next