Advertisement

ಕೂಡಲೇ ತೆರಿಗೆ ಪಾವತಿಸಿ: ಚೋಪ್ರಾಗೆ ಐಟಿ ತಾಕೀತು

07:35 AM Jan 26, 2018 | Team Udayavani |

ಹೊಸದಿಲ್ಲಿ: ಅಮೆರಿಕದಲ್ಲೇ ಹೆಚ್ಚು ಕಾಲ ಕಳೆವ ನಟಿ ಪ್ರಿಯಾಂಕಾ ಚೋಪ್ರಾಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ. ತನಗೆ ಉಡುಗೊರೆಯಾಗಿ ಸಿಕ್ಕಿದೆ ಎಂದು ಅವರು ಹೇಳಿಕೊಂಡಿರುವ ಲಕ್ಸುರಿ ವಸ್ತುಗಳಾದ 40 ಲಕ್ಷ ಬೆಲೆಯ ವಾಚ್‌, 27 ಲಕ್ಷದ ಟೊಯೋಟಾ ಪ್ರಿಯಸ್‌ ಲಕ್ಸುರಿ ಸೆಡಾನ್‌ ಕಾರುಗಳಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಐಟಿ ಇಲಾಖೆ 2016ರಲ್ಲೇ ನೋಟಿಸ್‌ ನೀಡಿತ್ತು. ಈ ವಸ್ತುಗಳು ಉಡುಗೊರೆಯಾಗಿ ದೊರೆತಿರುವ ಕಾರಣ, ತೆರಿಗೆ ವಿಧಿಸಬಾರದು ಎಂದು ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ)ಗೆ ಮನವಿ ಮಾಡಿದ್ದರು. ಆದರೆ, ಅದು ಮನವಿ ತಿರಸ್ಕರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next