Advertisement

166 ಕೋಟಿ ಕೊಟ್ಟು ಖರೀದಿಸಿದ ಮನೆಯಲ್ಲಿ ನೀರು ಸೋರಿಕೆ; ಮನೆ ಖಾಲಿ ಮಾಡಿದ ಪ್ರಿಯಾಂಕ ದಂಪತಿ

02:05 PM Feb 01, 2024 | Team Udayavani |

ಮುಂಬಯಿ: ಗ್ಲೋಬಲ್‌ ಐಕಾನ್‌ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ಗಾಯಕ ನಿಕ್‌ ಜೋನಾಸ್‌ ದಂಪತಿ ತಮ್ಮ ಲಾಸ್ ಎಂಜಲೀಸ್ ನ ದುಬಾರಿ ಮನೆಯನ್ನು ಖಾಲಿ ಮಾಡಿ ಬೇರೊಂದು ಮನೆಗೆ ಶಿಫ್ಟ್‌ ಆಗಿದ್ದು, ಮನೆ ಮಾರಾಟ ಮಾಡಿದವನ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.

Advertisement

ಅವರ ದುಬಾರಿ ಮನೆಯಲ್ಲಿ ನೀರು ಸೋರಿಕೆ ಸಮಸ್ಯೆ ಕಾಣಿಸಿಕೊಂಡಿದ್ದು,ಇದರಿಂದ ಅಲ್ಲಿ ವಾಸಿಸಲು ಸಾಧ್ಯವಾಗದ ಕಾರಣ ದಂಪತಿ ತಮ್ಮ ಮನೆ ಬದಲಾಯಿಸಿದ್ದಾರೆ ಎಂದು ʼಪೇಜ್‌ ಸಿಕ್ಸ್‌ʼ ವರದಿ ತಿಳಿಸಿದೆ.

ದಂಪತಿಗಳ ಮನೆಯ ಪೂಲ್ ಮತ್ತು ಸ್ಪಾ ಪ್ರದೇಶದಲ್ಲಿ ನೀರು ಸೋರಿಕೆಯ ಸಮಸ್ಯೆ ಕಾಣಿಸಿಕೊಂಡಿದೆ. ಇದಲ್ಲದೇ ಅಡುಗೆ ಮನೆ ಪ್ರದೇಶದಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿದೆ. ಲೀವಿಂಗ್‌ ಏರಿಯಾದಲ್ಲೂ ನೀರು ಸೋರಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಮನೆಯ ಹಲವು ಸಾಮಾಗ್ರಿಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Atif Aslam: 7 ವರ್ಷದ ಬಳಿಕ ಬಾಲಿವುಡ್‌ಗೆ ಮರಳಲಿದ್ದಾರೆ ಪಾಕ್‌ ಗಾಯಕ ಅತೀಫ್‌ ಅಸ್ಲಾಂ

ದಂಪತಿಗಳು ನೀರು ಸೋರಿಕೆಯಿಂದ ಅನುಭವಿಸಿದ ನಷ್ಟಕ್ಕೆ, ದುರಸ್ತಿ ವೆಚ್ಚಗಳಿಗೆ ಮರುಪಾವತಿ ಮಾಡಬೇಕು ಹಾಗೂ ಇತರ ಹಾನಿಗಳಿಗೆ ಪರಿಹಾರವನ್ನು ನೀಡಬೇಕೆಂದು ಮಾರಾಟಗಾರನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ನೀರಿನ ಸೋರಿಕೆಯಿಂದ $1.5 ಮಿಲಿಯನ್ (12 ಕೋಟಿ ರೂ.) ಸಾಮಾನ್ಯ ಹಾನಿಯಿಂದ ಸುಮಾರು $2.5 ಮಿಲಿಯನ್ (ರೂ. 20 ಕೋಟಿಗಿಂತ ಹೆಚ್ಚು) ನಷ್ಟ ಆಗಿದೆ ಎಂದು ವರದಿ ತಿಳಿಸಿದೆ.

ಪ್ರಿಯಾಂಕಾ ಮತ್ತು ನಿಕ್ ಸೆಪ್ಟೆಂಬರ್ 2019 ರಲ್ಲಿ $ 20 ಮಿಲಿಯನ್ (ರೂ. 166 ಕೋಟಿ) ಗೆ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಇದು ಏಳು ಬೆಡ್‌ ರೂಮ್, ಒಂಬತ್ತು ಬಾತ್‌ ರೂಮ್, ಅಡುಗೆಮನೆ, ತಾಪಮಾನ-ನಿಯಂತ್ರಿತ ವೈನ್ ಕೊಠಡಿ, ಒಳಾಂಗಣ ಬಾಸ್ಕೆಟ್‌ಬಾಲ್ ಅಂಕಣ, ಬೌಲಿಂಗ್ ಅಲ್ಲೆ, ಹೋಮ್ ಥಿಯೇಟರ್, ಮನರಂಜನಾ ಕೋಣೆ, ಸ್ಟೀಮ್ ಶವರ್‌ನೊಂದಿಗೆ ಸ್ಪಾ, ಪೂರ್ಣ ಸೇವಾ ಜಿಮ್ ಮತ್ತು ಬಿಲಿಯರ್ಡ್ಸ್ ಕೋಣೆಯನ್ನು ಹೊಂದಿದೆ.

ಸದ್ಯ ನಿಕ್ ಮತ್ತು ಪ್ರಿಯಾಂಕಾ ಯಾವಾಗ ಇಲ್ಲಿಗೆ ಮರಳುತ್ತಾರೆ ಎಂಬುದು ತಿಳಿದಿಲ್ಲ. ವರದಿಯ ಪ್ರಕಾರ, ಸದ್ಯಕ್ಕೆ ಐಷಾರಾಮಿ ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ ಮತ್ತು ಅದನ್ನು ಬಾಡಿಗೆಗೆ ನೀಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next