ನ್ಯೂಯಾರ್ಕ್: ಅಮೆರಿಕದ ಜನಪ್ರಿಯ ಟಿವಿ ಸರಣಿ ಕ್ವಾಂಟಿಕೋದ ಸಂಚಿಕೆಯೊಂದರಲ್ಲಿ ಭಾರತೀಯರು ಉಗ್ರರು ಎಂದು ಬಿಂಬಿತವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಲೇ ನಟಿ ಪ್ರಿಯಾಂಕಾ ಚೋಪ್ರಾ ಭಾರತೀಯರಲ್ಲಿ ಕ್ಷಮೆ ಯಾಚಿಸಿದ್ದಾರೆ.
ಕ್ವಾಂಟಿಕೊದ ಇತ್ತೀಚಿನ ಸಂಚಿಕೆಯಿಂದ ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದು ಈ ಬಗ್ಗೆ ನಾನು ತುಂಬಾ ದುಃಖಿತಳಾಗಿದ್ದೇನೆ. ನನ್ನ ಉದ್ದೇಶ ಎಂದಿಗೂ ಅದಾಗಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ಹೆಮ್ಮೆಯ ಭಾರತೀಯನಾಗಿದ್ದೇನೆ ಮತ್ತು ಅದು ಎಂದಿಗೂ ಬದಲಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕ್ವಾಂಟಿಕೋದಲ್ಲಿ ಪ್ರಿಯಾಂಕಾ ಅಲೆಕ್ಸ್ ಪ್ಯಾರಿಶ್ ಎಂಬ ಸಿಐಎ ಎಜೆಂಟ್ ಪಾತ್ರವಹಿಸಿದ್ದಾರೆ. ನ್ಯೂಕ್ಲಿಯರ್ ಬಾಂಬ್ ದಾಳಿ ನಡೆದ ಸ್ಥಳದಲ್ಲಿ ರುದ್ರಾಕ್ಷಿ ಮಾಲೆ ಪತ್ತೆಯಾದ ಹಿನ್ನಲೆಯಲ್ಲಿ ಭಾರತೀಯರನ್ನು ಉಗ್ರರ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಿದ ದೃಶ್ಯ ಕ್ವಾಂಟಿಕೋದಲ್ಲಿ ಪ್ರಸಾರವಾಗಿತ್ತು.
ಈಗಾಗಲೆ ಕ್ವಾಂಟಿಕೋ ನಿರ್ಮಾಪಕರೂ ಈ ಬಗ್ಗೆ ಕ್ಷಮೆ ಕೇಳಿದ್ದಾರೆ.