Advertisement

ಕಾಂಗ್ರೆಸ್‌ಗೆ ಬಿಜೆಪಿ ಕಂಟಕವಲ್ಲ

12:22 PM Jan 17, 2021 | Team Udayavani |

ಚಿತ್ತಾಪುರ: ಕಾಂಗ್ರೆಸ್‌ ನಾಯಕರು ಚುನಾವಣೆಯಲ್ಲಿ ಸೋತರೇ ಅದು ಕಾಂಗ್ರೆಸ್‌ನವರಿಂದಲೇ ಹೊರೆತು ಬಿಜೆಪಿ ಅವರಿಂದ ಅಲ್ಲ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ಬಜಾಜ್‌ ಕಲ್ಯಾಣ ಮಂಟಪದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಚಿತ್ತಾಪುರ ಹಾಗೂ ವಾಡಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಬೆಂಬಲಿತ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡದ ಅವರು, ಕಾಂಗ್ರೆಸ್‌ನವರು ಕಟ್ಟೆಗಳ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕಾಂಗ್ರೆಸ್‌ ಪಕ್ಷದಲ್ಲಿದ್ದು, ಕಾಂಗ್ರೆಸ್‌ ವಿರುದ್ಧವೇ ಮಾತನಾಡುವುದನ್ನು ನಿಲ್ಲಿಸಬೇಕು. ಅಂದಾಗ ಮಾತ್ರ ಕಾಂಗ್ರೆಸ್‌ ನವರಿಗೆ ಸೋಲಿಸಲು ಬಿಜೆಪಿಯವರಿಗೆ ಸಾಧ್ಯವಾಗುವುದಿಲ್ಲ ಎಂದರು.

ಸಿಎಂ ಬಿ.ಎಸ್‌ ಯಡಿಯೂರಪ್ಪ ನವರ ಸ್ಥಿತಿ ಹೇಗಾಗಿದೆ ಎಂದರೆ ಅಂದೇರಿ ನಗರ್‌ ಮೇ ಚೌಪಟ್‌ ರಾಜಾ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಅಧಿ ಕಾರ ಸಿ.ಡಿ ಮೇಲೆ ನಿಂತಿದೆ. ಸಿ.ಡಿ ಬಹಿರಂಗಗೊಂಡರೇ ಅವರು ಅಧಿ ಕಾರ ಕಳೆದುಕೊಳ್ಳಲಿದ್ದಾರೆ. ಇದನ್ನು ನಾವು ಕಾಂಗ್ರೆಸ್‌ನವರು ಹೇಳುತ್ತಿಲ್ಲ. ಬಿಜೆಪಿಯವರೇ ಹೇಳುತ್ತಿದ್ದಾರೆ. ಇದರಿಂದ ಕೆಲವೇ ದಿನಗಳಲ್ಲಿ ಬಿಎಸ್‌ವೈ ಮುಕ್ತ ಬಿಜೆಪಿ ಆಗುವುದಲ್ಲದೇ ಬಿಜೆಪಿ ಮುಕ್ತ ಕರ್ನಾಟಕ ಆಗುವ ದಿನಗಳು ದೂರವಿಲ್ಲ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:ಬೆಳಗಾವಿಗೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ: ಗಣ್ಯರ ಸ್ವಾಗತ

ಚಿತ್ತಾಪುರ ತಾಲೂಕು ಕಾಂಗ್ರೆಸ್‌ ಭದ್ರಕೋಟೆಯಾಗಿದೆ ಎಂದು ಹೇಳಿದ ಶಾಸಕರು, ಜನರ, ರೈತರ, ಹಿಂದುಳಿದವರ, ಬಡವರ ಪರ ಆಡಳಿತ ಒದಗಿಸುವ ಕೆಲಸ ಕಾಂಗ್ರೆಸ್‌ನಿಂದ ಸಾಧ್ಯ. ಹಾಗಾಗಿ ಪಕ್ಷದ ಧ್ಯೇಯೋದ್ದೇಶಗಳನ್ನು ಜನರಿಗೆ ತಲುಪಿಸಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು. ಕಲಬುರಗಿ ಜಿಲ್ಲೆಯಲ್ಲಿ ಒಬ್ಬರೇ ಒಬ್ಬರು ಸಚಿವರಿಲ್ಲ. ಇದರಿಂದ ಕಲ್ಯಾಣ ಕರ್ನಾಟಕ ಅನುದಾನ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಇಲ್ಲಿನ ಬಿಜೆಪಿ ಶಾಸಕರು ಸಿಎಂ ಹತ್ತಿರ ಕೈ ಕಟ್ಟಿ ನಿಲ್ಲುತ್ತಾರೆ. ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಹತ್ತಿರ ಕೈ ಕಟ್ಟಿ ನಿಲ್ಲುತ್ತಾರೆ. ಹೀಗಾದರೆ ಅನುದಾನ] ಬಿಡುಗಡೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅ ಧಿಕಾರಕ್ಕೆ ಬಂದರೇ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅಧಿ ಕಾರಕ್ಕೆ ಬಂದು ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಎಸ್‌ಟಿಗೆ ಸೇರಿಸಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕದವರು ಜನಪ್ರತಿನಿಧಿಗಳು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಬರಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ತಾಲೂಕಿನ 24 ಪಂಚಾಯಿತಿಗಳ ಕಾಂಗ್ರೆಸ್‌ ಬೆಂಬಲಿತ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್‌ ಕರದಾಳ, ಜಿಪಂ ಸದಸ್ಯ ಶಿವಾನಂದ ಪಾಟೀಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮುಕ್ತಾರ ಪಟೇಲ್‌ ಮಾತನಾಡಿದರು. ವಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೆಮೂದ್‌ ಸಾಹೇಬ್‌, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಜಿಪಂ ಸದಸ್ಯ ಶಿವರುದ್ರ ಭೀಣಿ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಮುಖಂಡರಾದ ರಮೇಶ ಮರಗೋಳ, ಶ್ರೀನಿವಾಸ ಸಗರ, ಅಜೀಜ್‌ ಸೇs…, ವೀರಣ್ಣಗೌಡ ಪರಸರೆಡ್ಡಿ, ರಾಜಶೇಖರ ತಿಮ್ಮನಾಕ್‌, ಬಸವರಾಜ ಪಾಟೀಲ್‌ ಹೇರೂರ್‌, ಸುನೀಲ್‌ ದೊಡ್ಮನಿ, ಜಯಪ್ರಕಾಶ ಕಮಕನೂರ್‌, ಮನ್ಸೂರ್‌ ಪಟೇಲ್‌, ಶೇಖ ಬಬು, ಶಿವಾಜಿ ಕಾಶಿ, ಸ್ವಪ್ನಾ ಪಾಟೀಲ್‌, ವಿನೋದ ಗುತ್ತೇದಾರ, ನಾಮದೇವ ರಾಠೊಡ, ನಾಗಯ್ಯ ಗುತ್ತೇದಾರ, ಜಗದೀಶ ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next