Advertisement

ಪ್ರಿಯಾಂಕ್‌ಗೆ ಸೋಲಿನ ಭಯ

10:47 AM Dec 16, 2017 | Team Udayavani |

ವಾಡಿ: ಪಟ್ಟಣದ ಪುರಸಭೆಯ ವಾರ್ಡ್‌ 1ರ ಬಸವನ ಕಣಿ ಬಡಾವಣೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುವ ಆತಂಕ ಉಂಟಾಗಿದೆ. ಆ ಕಾರಣಕ್ಕೆ ಒಬ್ಬ ಕ್ಯಾಬಿನೆಟ್‌ ಸಚಿವ ಪ್ರಿಯಾಂಕ್‌ ಖರ್ಗೆ ಕೇವಲ ಒಂದು ವಾರ್ಡ್‌ ಉಪ ಚುನಾವಣೆಯ ಪ್ರಚಾರಕ್ಕೆ ಬಂದಿರುವುದು ಬಿಜೆಪಿಯ ಗೆಲುವಿನ ಸಂಕೇತ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ದಿವ್ಯಾ ಆರ್‌.ಹಾಗರಗಿ ಹೇಳಿದರು.

Advertisement

ಪಟ್ಟಣದ ಪುರಸಭೆ ವಾರ್ಡ್‌ 1ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶನ್‌ ಜಾಧವ್‌ ಪರ ಮತಯಾಚಿಸಿ ಅವರು ಮಾತನಾಡಿದರು. ದೇಶದಲ್ಲಿ ನರೇಂದ್ರ ಮೋದಿ ಆಡಳಿತ ಮೆಚ್ಚಿಕೊಂಡಿರುವ ಜನ 2018ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ. ಪಟ್ಟಣದ ಬಸವನ ಕಣಿ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಖಚಿತವಾಗಿದ್ದು, ಕಾಂಗ್ರೆಸ್‌ ಸೋಲಿನ ರುಚಿ ಉಣ್ಣಲಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ವಾಲ್ಮೀಕಿ ನಾಯಕ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಸಿದ್ದಣ್ಣ ಕಲಶೆಟ್ಟಿ ಮಾತನಾಡಿದರು. ಅಭ್ಯರ್ಥಿ ಕಿಶನ್‌ ಜಾಧವ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಭಾಗೀರತಿ ಶಹಾಬಾದಿ, ವೀರಣ್ಣ ಯಾರಿ, ಬಸವರಾಜ ಕಿರಣಗಿ, ಯಮನಪ್ಪ ನವನಳ್ಳಿ, ಆನಂದ ಇಂಗಳಗಿ, ಭೀಮಶಾ ಜಿರೊಳ್ಳಿ, ವಿಠ್ಠಲ ನಾಯಕ, ದೌಲತರಾವ್‌ ಚಿತ್ತಾಪುರಕರ, ಭೀಮರಾಯ ನಾಯಕೋಡಿ, ರಾಜೇಶ ಅಗರವಾಲ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. 

ನಾಳೆ ಮತದಾನ: ಪುರಸಭೆ ವಾರ್ಡ್‌ 1ರ ಬಸವನ ಕಣಿ ಬಡಾವಣೆಯ ಚುನಾಯಿತ ಕಾಂಗ್ರೆಸ್‌ ಸದಸ್ಯ ಮರೆಪ್ಪ ಭೋವಿ ನಿಧನವಾದ ಕಾರಣಕ್ಕೆ ನಡೆಯುತ್ತಿರುವ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದ್ದು, ಶನಿವಾರ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಡಿ.17ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆ ವರೆಗೆ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next