Advertisement

ನಾಳೆಯಿಂದ ದೇಶದಲ್ಲಿ ‘5G’ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

04:54 PM Sep 30, 2022 | Team Udayavani |

ನವದೆಹಲಿ: ಬಹು ನಿರೀಕ್ಷಿತ ನೆಟ್ ವರ್ಕ್ ಕ್ರಾಂತಿ ಭಾರತದಲ್ಲಿ ಆರಂಭಕ್ಕೆ ಸಾಕ್ಷಿಯಾಗಿ ನಾಳೆ (ಅಕ್ಟೋಬರ್ 01) ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಅ.1 ರಿಂದ 4 ರವರೆಗೆ ನಡೆಯಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ನ ಆರನೇ ಆವೃತ್ತಿಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

Advertisement

ಕೆಂಪು ಕೋಟೆಯ ಆವರಣದಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ,  ಶೀಘ್ರದಲ್ಲೇ 5G ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು. ಈ ಕಾರ್ಯಕ್ರಮವನ್ನು ದೂರಸಂಪರ್ಕ ಇಲಾಖೆ (DOT) ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (COAI) ಜಂಟಿಯಾಗಿ ಆಯೋಜಿಸಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ, ಸಂವಹನ ಸಚಿವಾಲಯದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ (ಎನ್‌ಬಿಎಂ) ಶನಿವಾರ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಭಾರತದಲ್ಲಿ 5 ಜಿ ಸೇವೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಅದೇ ದಿನ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ಪ್ರಾರಂಭವಾಗಲಿದೆ ಎಂದು ಟ್ವೀಟ್ ಮಾಡಿದೆ.

ಕಳೆದ ತಿಂಗಳು ಐಟಿ ಸಚಿವ ಅಶ್ವಿನಿ ವೈಷ್ಣವ್ ಅಕ್ಟೋಬರ್ 12 ರೊಳಗೆ ದೇಶದಲ್ಲಿ 5G ಸೇವೆಗಳನ್ನು ಹೊರತರುವ ನಿರೀಕ್ಷೆಯಿದೆ ಮತ್ತು ಗ್ರಾಹಕರಿಗೆ ಬೆಲೆಗಳು ಕೈಗೆಟುಕುವಂತೆ ಕೇಂದ್ರವು ಖಚಿತಪಡಿಸುತ್ತದೆ ಎಂದು ಹೇಳಿದ್ದರು.

 

Advertisement

5ಜಿ ಯೋಜನೆಗಳು ಸಾರ್ವಜನಿಕರಿಗೆ ಕೈಗೆಟುಕುವಂತೆ ಇರುವುದನ್ನು ಸರ್ಕಾರ ಖಚಿತಪಡಿಸುತ್ತದೆ ಎಂದು ಸಚಿವರು ಭರವಸೆ ನೀಡಿದ್ದರು. 5G ಸೇವೆಗಳನ್ನು ಹಂತ ಹಂತವಾಗಿ ಹೊರತರಲಾಗುವುದು ಮತ್ತು ಮೊದಲ ಹಂತದಲ್ಲಿ 13 ನಗರಗಳು 5G ಇಂಟರ್ನೆಟ್ ಸೇವೆಗಳನ್ನು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಹಮದಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಗಾಂಧಿನಗರ್, ಗುರುಗ್ರಾಮ್, ಹೈದರಾಬಾದ್, ಜಾಮ್ ನ
ಗರ್, ಕೊಲ್ಕತ, ಲಕ್ನೋ, ಮುಂಬೈ  ನಗರಗಳು ಈ ಪಟ್ಟಿಯಲ್ಲಿವೆ. ಈ ಕುರಿತು  5G ಸೇವೆಗಳ ವಿವರವನ್ನು ತಮ್ಮ 2G ಮತ್ತು  3G ಗ್ರಾಹಕರಿಗೆ ಪಡೆದುಕೊಳ್ಳುವ ಕುರಿತು ಟೆಲಿಕಾಂ ಕಂಪನಿ ಗಳು ಮಾಹಿತಿ ನೀಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next