Advertisement

ಬೆಂಗಳೂರಿನಲ್ಲಿ ಮುಸ್ತಫಾ ಜತೆ ಪ್ರಿಯಾಮಣಿ ರಿಜಿಸ್ಟರ್ ಮ್ಯಾರೇಜ್

03:12 PM Aug 23, 2017 | Sharanya Alva |

ಬೆಂಗಳೂರು: ಬಹುಕಾಲದ ಗೆಳೆಯ ಮುಸ್ತಫಾ ರಾಜಾ ಜತೆ ಬಹುಭಾಷಾ ನಟಿ ಪ್ರಿಯಾಮಣಿ ಬುಧವಾರ ಬೆಂಗಳೂರಿನ ಜಯನಗರದಲ್ಲಿರುವ ರಿಜಿಸ್ಟರ್ ಕಚೇರಿಯಲ್ಲಿ ಸರಳವಾಗಿ ರಿಜಿಸ್ಟರ್ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಮುಂಬೈನ ಬಹುಕಾಲದ ಗೆಳೆಯ ಮುಸ್ತಫಾ ರಾಜಾ ಜತೆ ಪ್ರಿಯಾಮಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಯನಗರದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ತಂದೆ ವಾಸುದೇವ ಮಣಿ ಅಯ್ಯರ್ ಸೇರಿದಂತೆ ಕುಟುಂಬಸ್ಥರ ಜತೆ ಆಗಮಿಸಿದ್ದರು. ಕಳೆದ ತಿಂಗಳೇ ಪ್ರಿಯಾಮಣಿ ಅವರು ರಿಜಿಸ್ಟರ್ ವಿವಾಹಕ್ಕೆ ಅರ್ಜಿ ಸಲ್ಲಿಸಿದ್ದರು.

ರಿಜಿಸ್ಟರ್ ಮದುವೆಯಾದ ಪ್ರಿಯಾಮಣಿ ಅವರು ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು. ನಟಿ ಪ್ರಿಯಾಮಣಿ ಅವರು ಹಸಿರು, ಹಳದಿ ಬಣ್ಣದ ಸೀರೆಯನ್ನುಟ್ಟು ಸರಳವಾಗಿ ರಿಜಿಸ್ಟರ್ ಕಚೇರಿಗೆ ಆಗಮಿಸಿದ್ದರು. ಮುಸ್ತಫಾ ರಾಜಾ ತಮ್ಮ ಕುಟುಂಬಸ್ಥರ ಜತೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next