Advertisement

ತಾಯಿ ಅಗಲಿಕೆ ನಡುವೆಯೂ ತಂಡ ಸೇರಿಕೊಂಡ ಪ್ರಿಯಾ ಪೂನಿಯ

08:17 AM May 21, 2021 | Team Udayavani |

ಮುಂಬಯಿ: ಅಮ್ಮನ ಅಗಲಿಕೆಯ ನಡುವೆಯೂ ಭಾರತದ ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯ ಮುಂಬಯಿಗೆ ಆಗಮಿಸಿ ತಂಡ ಸೇರಿಕೊಂಡಿದ್ದಾರೆ.

Advertisement

ಪ್ರಿಯಾ ಪೂನಿಯ ಅವರ ತಾಯಿ ಸರೋಜಾ ಪೂನಿಯ ಕೆಲವೇ ದಿನಗಳ ಹಿಂದೆ ಕೊರೊನಾದಿಂದ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ:ಲೆಜೆಂಡ್ರಿ ಆ್ಯತ್ಲೀಟ್‌ ಮಿಲ್ಖಾ ಸಿಂಗ್‌ಗೆ ಕೋವಿಡ್

ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿರುವ ವನಿತಾ ತಂಡವೀಗ ಮುಂಬಯಿಗೆ ಆಗಮಿಸಿ ಕ್ವಾರಂಟೈನ್‌ ನಲ್ಲಿ ಉಳಿದುಕೊಂಡಿದೆ. ದುಃಖದಲ್ಲಿ ಮುಳುಗಿರುವ ಪ್ರಿಯಾ ಪೂನಿಯ ಮುಂಬಯಿಗೆ ಆಗಮಿಸುವುದು ಅನುಮಾನ ಎಂದೇ ಭಾವಿಸಲಾಗಿತ್ತು. ಆದರೆ ಅವರು ವೃತ್ತಿ ಬದ್ಧತೆಗೆ ಬೆಲೆ ಕೊಡುವುದಾಗಿ ತಂದೆಗೆ ಮಾತು ಕೊಟ್ಟಿದ್ದರು. ಅದರಂತೆ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರು.

ಇಂಗ್ಲೆಂಡ್ ವನಿತಾ ತಂಡದ ವಿರುದ್ಧ ಭಾರತ ವನಿತಾ ತಂಡ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯಗಳನ್ನಾಡಲಿದೆ. ಪುರುಷರ ತಂಡದ ಜೊತೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next