Advertisement

ರೈತರ ಹಿತವೇ ಕಾರ್ಖಾನೆ ಖಾಸಗೀಕರಣ ಉದ್ದೇಶ

05:59 AM Jun 09, 2020 | Lakshmi GovindaRaj |

ಮೈಸೂರು: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಖಾಸಗೀಕರಣವಾದರೆ ಅಭಿವೃದಿಟಛಿ ಮತ್ತು ಜನರ ಸಮಸ್ಯೆ ಬಗೆಹರಿಯುತ್ತದೆ ಎಂದು ಜಿಲ್ಲಾ ಸಚಿವ ಸೋಮಶೇಖರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಿರಾಣಿ ಕಂಪನಿಯವರಿಗೆ ಸಾಕಷ್ಟು ಅನುಭವ ವಿದೆ. ಸಾಲ ಮರುಪಾವತಿಗೆ ಸಿದ್ಧರಿದ್ದಾರೆ. ಈ ಕುರಿತು ಕಾರ್ಮಿಕ ಇಲಾಖೆ ಸಚಿವರು ಕೂಡ ಭೇಟಿಯಾಗಿ ಮಾತನಾಡುತ್ತಾರೆ. ಟೆಂಡರ್‌ನಲ್ಲಿ ಯಾರು ಪಾಲ್ಗೊಂಡಿರುತ್ತಾರೋ ಅವರಿಗೆ ವಹಿಸಲಾಗಿದೆ. ಕಾರ್ಖಾನೆ, ರೈತರು, ನೌಕರರ ಹಿತದೃಷ್ಟಿಯೇ ನಮ್ಮೆಲ್ಲರ ಉದ್ದೇಶ ಎಂದು ಹೇಳಿದರು.

Advertisement

ರೈತರ ಹಿತ ಮುಖ್ಯ: ಸಂಸದೆ ಸುಮಲತಾ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 2 ಸಕ್ಕರೆ ಕಾರ್ಖಾನೆ ಮುಚ್ಚಿದೆ. ಕಬ್ಬು ಕಟಾವಿಗೆ ಬಂದಾಗ ಸಮಸ್ಯೆ ಉದ್ಬವ ವಾಗುತ್ತದೆ. ರೈತರಿಗೆ ಅನುಕೂಲವಾಗಬೇಕೆಂಬುದೇ ನನ್ನ ಉದ್ದೇಶ. ಜನಹಿತಕ್ಕಾಗಿ  ಮಾಡುವ ವಿಷಯದಲ್ಲಿ ರಾಜಕೀಯ ಮಾಡಬಾರದು. ಸಕ್ಕರೆ ಸಚಿವರೊಂದಿಗೂ ಮಾತು ಕತೆ ನಡೆಸಿದ್ದೆ. ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ಮೈಷುಗರ್‌ನಲ್ಲಿ ಏನೇನು ಅಕ್ರಮವಾಗಿದೆ ಎಂಬುದನ್ನು ನೋಡಬೇಕು. 420 ಕೋಟಿ ಹೂಡಿದರೂ ಪ್ರತಿಫ‌ಲ ಸಿಗಲಿಲ್ಲ. ಇದನ್ನು ಇತಿಹಾಸ ಎಂದು ಮುಚ್ಚಿಡಬೇಕಾ? ಅಥವಾ ರೈತರಿಗೆ ಅನುಕೂಲವಾಗುವಂತೆ ಮತ್ತೆ ಚಾಲನೆ ಮಾಡಬೇಕಾ ಎಂಬುದು ಮುಖ್ಯ ಎಂದು  ಹೇಳಿದರು.

ವಿರೋಧದ ಉದ್ದೇಶವೇನು?: ಪಿಎಸ್‌ಎಸ್‌ಕೆ ಕಾರ್ಖಾನೆ ಆಕ್ಟೋಬರ್‌ನಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಅಷ್ಟರಲ್ಲಿ ಆರಂಭಿಸಿದರೆ ಒಳ್ಳೆಯದು. ಮೈಷುಗರ್‌ ವಿಷಯದಲ್ಲಿ ಖಾಸಗಿಯವರಿಗೆ ಕೊಡಲು ಸರ್ಕಾರ ಮುಂದಾ ದಾಗ, ಪ್ರತಿ  ಪಕ್ಷದವರು ವಿರೋಧಿಸಿದರು. ಒಎನ್‌ ಡಿಎಂ ಕೊಡೋಣ ಎಂದ ಮೇಲೆ ಅದಕ್ಕೂ ವಿರೋಧ ಮಾಡುವುದಾದರೆ, ಅದರಲ್ಲಿ ನಿಮ್ಮ ಉದ್ದೇಶವೇ ನು? ರೈತರಿಗೆ ಮತ್ತು ಜನರಿಗೆ ಅನುಕೂಲವಾಗುವುದು ಬೇಡವೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next