Advertisement

ಸರಕಾರಿ ಶಾಲೆಗಳ ಖಾಸಗೀಕರಣ?

06:25 AM Aug 30, 2017 | Harsha Rao |

ಹೊಸದಿಲ್ಲಿ: ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿರುವ ಆತಂಕದ ಸನ್ನಿವೇಶದಲ್ಲೇ ಸರಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುವಂತೆ ದೇಶದ ಉನ್ನತ ಚಿಂತಕರ ಚಾವಡಿ ನೀತಿ ಆಯೋಗ ಶಿಫಾರಸು ಮಾಡಿದೆ.

Advertisement

ಈಗಾಗಲೇ ಮಕ್ಕಳಿಲ್ಲದೇ ಸರಕಾರಿ ಶಾಲೆಗಳು ವಿಲೀನದ ಭೀತಿ ಎದುರಿಸುತ್ತಿವೆ. ಗುಣಮಟ್ಟದ ಶಿಕ್ಷಣದ ಕೊರತೆ ಮತ್ತು ಮೂಲಸೌಲಭ್ಯಗಳ ಅಲಭ್ಯತೆಯಿಂದಾಗಿ ನಲುಗುತ್ತಿವೆ. 

ಫ‌ಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿರುವ, ಶಿಥಿಲಾವಸ್ಥೆಯ ಲ್ಲಿರುವ ಸರಕಾರಿ ಶಾಲೆಗಳನ್ನು ಖಾಸಗಿಯವರಿಗೆ ಒಪ್ಪಿಸಬೇಕು. ಖಾಸಗಿಯವರು ಇಂಥ ಶಾಲೆಗಳನ್ನು ದತ್ತು ಪಡೆದು ಅವುಗಳ ನಿರ್ವಹಣೆ ಮಾಡಬೇಕು. ಈ ಮೂಲಕ ಗುಣಮಟ್ಟ ವನ್ನು ಹೆಚ್ಚಿಸಿ, ಮಕ್ಕಳನ್ನೂ ಶಾಲೆಯತ್ತ ಆಕರ್ಷಿಸಬೇಕು ಎಂಬುದು ನೀತಿ ಆಯೋಗದ ಆಶಯ. ನೀತಿ ಆಯೋಗ ಇತ್ತೀಚೆಗೆ ನೀಡಿದ “3 ವರ್ಷಗಳ ಕಾರ್ಯಕಾರಿ ಯೋಜನಾ ವರದಿ’ಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿದೆ.
ಅದರಂತೆ, ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಖಾಸಗಿ ವಲಯವು ಶಾಲೆಗಳಲ್ಲಿ ಸೂಕ್ತ ಮೂಲಸೌಲಭ್ಯ ನೀಡಬೇಕು.

ಸರಕಾರ ಕೂಡ ಪ್ರತಿ ವಿದ್ಯಾರ್ಥಿಗೆ ಇಂತಿಷ್ಟು ಎಂಬಂತೆ ಹಣದ ನೆರವು ನೀಡಬೇಕು ಎಂದಿದೆ. ವರದಿ ಹೇಳಿರುವಂತೆ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ವಿದ್ಯಾರ್ಥಿಗಳು ಮಾತ್ರ ಸರಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಕಾರಣವೇನು?
ಸರಕಾರಿ ಶಾಲೆಗಳಿಂದ ಮಕ್ಕಳು ದೂರವಾಗಲು ಅಲ್ಲಿ ನೀಡುತ್ತಿ ರುವ ಶಿಕ್ಷಣವೇ ಕಾರಣ. ಶಾಲೆಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು, ಶಿಕ್ಷಕರು ಗೈರಾಗು ವುದು, ಪಾಠ ಮಾಡದೇ ಇರು ವುದು, ಗುಣಮಟ್ಟ ಕಳಪೆಯಾಗಿ
ರುವುದು ಸರಕಾರಿ ಶಾಲೆ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣ .

Advertisement

ಚೀನಕ್ಕಿಂತ ನಮ್ಮ ಶಿಕ್ಷಕರ ವೇತನವೇ ಹೆಚ್ಚು
ಸರಕಾರಿ ಶಾಲೆಗಳೆಂದರೆ ಅಲ್ಲಿ ಪಾಠ ಸರಿಯಾಗಿ ಮಾಡಲ್ಲ, ಶಿಕ್ಷಕರೇ ಇರಲ್ಲ, ಮೂಲಭೂತ ಸೌಲಭ್ಯಗಳಿಲ್ಲ ಎನ್ನುವವರೇ ಹೆಚ್ಚು. ಆದರೆ ವೇತನದ ವಿಚಾರದಲ್ಲಿ ಭಾರತದ ಶಿಕ್ಷಕರು ಚೀನದವರಿಗಿಂತ 4 ಪಟ್ಟು ಹೆಚ್ಚು ಪಡೆಯುತ್ತಿದ್ದಾರೆ. ಅಂದರೆ ಭಾರತದಲ್ಲಿ ಶಿಕ್ಷಣ ಇಲಾಖೆಯಲ್ಲಿ ವೆಚ್ಚ ಮಾಡುತ್ತಿರುವ ಹಣದಲ್ಲಿ ಶೇ.80ರಷ್ಟು ಶಿಕ್ಷಕರ ವೇತನ, ಕಲಿಕಾ ತರಬೇತಿಗೇ ವೆಚ್ಚವಾಗುತ್ತಿದೆ ಎಂದೂ ಅಧ್ಯಯನ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next