Advertisement

ಖಾಸಗಿ ಶಾಲೆ ಪ್ರತಿಭಟನೆಗೆ ಉಸ್ಮಾರ್ಡ್ ಬೆಂಬಲ

05:04 PM Feb 18, 2021 | Team Udayavani |

ರಾಮನಗರ: ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಂಕಷ್ಟ , ವಿವಿಧ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಫೆ.23ರಂದು ಬೆಂಗಳೂರಿನಲ್ಲಿ ಕ್ಯಾಮ್ಸ್‌ ಸಂಘಟನೆಯಿಂದ ನಡೆಯುತ್ತಿರುವ ಪ್ರತಿಭಟ ನೆಯಲ್ಲಿ ಜಿಲ್ಲೆಯಿಂದ ಎರಡು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಒಕ್ಕೂಟದ ಅಧ್ಯಕ್ಷ ಪಟೇಲ್‌ ಸಿ.ರಾಜು ತಿಳಿಸಿದರು.

Advertisement

ನಗ ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದಾಧಿಕಾರಿಗಳು, ಖಾಸಗಿ ಶಾಲೆಗಳ ಸಮಸ್ಯೆ ಗಳನ್ನು ಆಲಿಸದ ಸರ್ಕಾರದ ಧೋರಣೆಯನ್ನು ಪ್ರತಿಭಟನೆ ವೇಳೆ ಖಂಡಿಸಲಾ ಗುತ್ತದೆ ಎಂದರು. ಉಸ್ಮಾರ್ಡ್‌ ಸಂಘಟನೆಯಡಿ ಜಿಲ್ಲೆಯ 168 ಶಾಲೆಗಳಿವೆ. ಶಶಿಕುಮಾರ್‌ ನೇತೃತ್ವದ ಕ್ಯಾಮ್ಸ್‌ ಸಂಘಟನೆಗೆ ಈ ಶಾಲೆಗಳು ಸದಸ್ಯತ್ವ ಪಡೆದುಕೊಂಡಿದೆ. ತನ್ನಅಡಿಯಲ್ಲಿ 13,000 ಶಾಲೆಗಳಿವೆ ಎಂದು ಹೇಳಿಕೊಳ್ಳುತ್ತಿ ರುವ ರುಪ್ಸಾ ಸಂಘ ಟ ನೆಗೆ, ಜಿಲ್ಲೆಯ ಯಾವ ಖಾಸಗಿ ಅನುದಾನರಹಿತ ಶಾಲೆಗಳು ಸದಸ್ಯತ್ವ ಪಡೆದು ಕೊಂಡಿಲ್ಲ ಎಂದು ತಿಳಿಸಿದರು.

ಸೂಚನೆ ಅವೈಜ್ಞಾನಿಕ: 2020-21ನೇ ಸಾಲಿಗೆ ಅನ್ವಯಿಸುವಂತೆ ಸರ್ಕಾರ ಖಾಸಗಿ ಶಾಲೆಗಳು ಕೇವಲ ಬೋಧನಾ ಶುಲ್ಕದ ಪೈಕಿ ಶೇ.70ರಷ್ಟು ಹಣ ಮಾತ್ರ ಪಾವತಿಸಿಕೊಳ್ಳಬೇಕು ಎಂದು ನಿಯಮರೂಪಿಸಿದೆ. ವಿಶೇಷ ಅಭಿವೃದ್ಧಿ ಶುಲ್ಕ, ಇತರೆ ಶುಲ್ಕ ತೆಗೆದುಕೊಳ್ಳಬಾರದು ಎಂದಿದೆ. ವಾಸ್ತವದಲ್ಲಿ ಶೇ.55 ರಿಂದ 60 ಹಣ ಕಡಿತವಾಗುತ್ತದೆ. ಸರ್ಕಾರ ಹೇಳಿರುವಂತೆ ಕೇವಲ ಶೇ.30 ಕಡಿತವಾಗುವುದಿಲ್ಲ. ಬೋಧನಾ ಶುಲ್ಕ ಸೇರಿದಂತೆ ಎಲ್ಲಾ ಶುಲ್ಕಗಳನ್ನು ಪಡೆಯುವದರಿಂದಲೇ ಶಾಲೆ ನಡೆ ಸಲು ಸಾಧ್ಯ. ಹೀಗಾಗಿ ಒಟ್ಟಾರೆ ಶುಲ್ಕದ ಪೈಕಿ ಶೇ.30 ಕಡಿತ ಮಾಡಲು ನಾವು ತಯಾರಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ವೆಂಕಟ ಸುಬ್ಬಯ್ಯ ಚೆಟ್ಟಿ, ಕಾರ್ಯದರ್ಶಿ ನಿಶಾಂತ್‌, ಉಪಾ ಧ್ಯ ಕ್ಷ ರು  ಗಳಾದ ಪ್ರದೀಪ್‌, ಕಿರಣ್‌ ಪ್ರಸಾದ್‌, ಖಜಾಂಚಿ ಬಾಲ ಗಂಗಾ ಧರ ಮೂರ್ತಿ, ನಿರ್ದೇ ಶಕ ಅನ್ವರ್ ಹಾಜರಿ ದ್ದರು.

Advertisement

Udayavani is now on Telegram. Click here to join our channel and stay updated with the latest news.

Next