Advertisement
ನಗರದಲ್ಲಿ ಕಾರ್ಯಾಚರಣೆ ನಡೆಸುವ ಎಳìಳ ಸಿಟಿ ಬಸ್ ಗಳಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಚಲೋ ಸಂಸ್ಥೆ ಸಹಯೋಗದೊಂದಿಗೆ ಸಿಟಿ ಬಸ್ ಮಾಲಕರ ಸಂಘ ನಿರ್ಧರಿಸಿದ್ದು, ಬಸ್ ಸಂಚಾರ ಆರಂಭಿಸಿದ ಬಳಿಕ ಕೆಲವೇ ದಿನಗಳಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಮಂಗಳೂರು ನಗರದಲ್ಲಿ ಸುಮಾರು 350 ಸಿಟಿ ಬಸ್‌ಗಳು ವಿವಿಧ ರೂಟ್‌ಗಳಲ್ಲಿ ಸಂಚರಿಸುತ್ತಿದ್ದು, ಈ ಎಲ್ಲ ಬಸ್‌ಗಳಲ್ಲಿ ಈ ಸ್ಮಾರ್ಟ್ ಕಾರ್ಡ್ ಸದ್ಬಳಕೆ ಮಾಡಿಕೊಳ್ಳಬಹುದು.
ಪ್ರಯಾಣಿಕರು ಉಚಿತವಾಗಿ ಪಡೆದ ಕಾರ್ಡಿಗೆ ಟಾಪ್‌ಅಪ್ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆಂದು ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಸೆಂಟರ್ ತೆರಯಲು ತೀರ್ಮಾನಿಸಲಾಗಿದೆ. ಅಲ್ಲದೆ, ಮೊಬೈಲ್ ರೀಚಾರ್ಜ್ ಅಂಗಡಿಗಳಲ್ಲೂ ಈ ವ್ಯವಸ್ಥೆ ಒದಗಿಸಲು ಚಿಂತನೆ ನಡೆಸಲಾಗಿದೆ. ಈ ಕಾರ್ಡ್‌ಗೆ ಕಡಿಮೆ ಎಂದು ಎಷ್ಟು ರೀಚಾರ್ಜ್ ಮಾಡಬೇಕು ಎಂಬುವುದರ ಬಗ್ಗೆ ಸದ್ಯದಲ್ಲಿಯೇ ನಿರ್ಧಾರವಾಗಲಿದೆ. ಖಾತೆಯಲ್ಲಿದ್ದ ಹಣಕ್ಕೆ ವ್ಯಾಲಿಡಿಟಿ ಇರುವುದಿಲ್ಲ.
Related Articles
ಇದರಿಂದಾಗಿ ಪ್ರಯಾಣಿಕರಿಗೆ ನಗದು ಅಥವಾ ಚಿಲ್ಲರೆ ಸಮಸ್ಯೆ ಉದ್ಭವಿಸುವುದಿಲ್ಲ. ಅಲ್ಲದೆ, ಕೊರೊನಾ ಸಮಯದಲ್ಲಿ ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡಿದಂತಾಗುತ್ತದೆ.
Advertisement
ಏನಿದು ವ್ಯವಸ್ಥೆ?ಇದೊಂದು ಡಿಜಿಟಲ್ ಪಾವತಿ ವ್ಯವಸ್ಥೆ. ಪ್ರಯಾಣಿಕರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಸದ್ಯ ಸಿಟಿ ಬಸ್‌ನ ಎಲ್ಲ ನಿರ್ವಾಹಕರಲ್ಲಿ ಇಟಿಎಂ ಟಿಕೆಟ್ ಮೆಶಿನ್ ಇದ್ದು, ಸ್ಮಾರ್ಟ್ ಕಾರ್ಡ್ ಜಾರಿಯಾದ ಬಳಿಕ ಅದನ್ನು ಇಟಿಎಂನಲ್ಲಿ ಮುಟ್ಟಿಸಿದರಾಯಿತು. ಆಗ ಪ್ರಯಾಣ ದರವು ಪ್ರಯಾಣಿಕನ ಕಾರ್ಡ್ ನಿಂದ ಕಡಿತವಾಗುತ್ತದೆ. ಈಗಾಗಲೇ ಆ್ಯಪ್ ವ್ಯವಸ್ಥೆ ಜಾರಿ
ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ “ಚಲೋ’ ಎಂಬ ಹೆಸರಿನ ಆ್ಯಪ್ ಮೂಲಕ ಬಸ್‌ನ ಲೈವ್ ಟ್ರಾÂಕಿಂಗ್ ವ್ಯವಸ್ಥೆ ಇದ್ದು, ಮೊಬೈಲ್ ಜಿಪಿಎಸ್ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿ ಮೊಬೈಲ್‌ನಲ್ಲಿ ತಿಳಿಯಬಹುದಾಗಿದೆ. ಮ್ಯಾಪ್‌ನಲ್ಲಿ ಟ್ಯಾಪ್ ಮಾಡಿ ಸದ್ಯ ಬಸ್ ಎಲ್ಲಿದೆ ಎಂಬುವುದನ್ನು ತಿಳಿಯಲು ಸಾಧ್ಯ. ಅಷ್ಟೇಅಲ್ಲ, ಒಂದು ಕಡೆಯಿಂದ ಮತ್ತೂಂದೆಡೆ ಚಲಿಸಲು ಎಷ್ಟು ಸಮಯ ಬೇಕು? ಮುಂದಿನ ನಿಲ್ದಾಣ ಸೇರಿದಂತೆ ಹಲವು ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿದೆ. ಡಿಜಿಟಲ್ ವ್ಯವಸ್ಥೆಗೆ ಒಲವು
ಡಿಜಿಟಿಲ್ ವ್ಯವಸ್ಥೆಗೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ. ಬಸ್ ಸಂಚಾರ ಆರಂಭಗೊಂಡ ವಾರದಲ್ಲಿಯೇ ಈ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಪರಿಚಯಿಸಲಿದ್ದೇವೆ. ಪ್ರಯಾಣಿಕರಿಗೆ ಕಾರ್ಡ್ ಪಡೆಯಲು ನಗರದ ಕೆಲವು ಕಡೆಗಳಲ್ಲಿ ಸೆಂಟರ್ ಆರಂಭಿಸುತ್ತೇವೆ.
-ದಿಲ್‌ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ . ಚಲೋ ಆ್ಯಪ್ ಸಹಯೋಗ
ಸ್ಮಾರ್ಟ್‌ಕಾರ್ಡ್ ಪಡೆಯುವ ನಿಟ್ಟಿನಲ್ಲಿ ನಗರದ ಕೆಲವು ಕಡೆಗಳಲ್ಲಿ ಔಟ್‌ಲೆಟ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಇದರಿಂದ ಚಿಲ್ಲರೆ ಸಮಸ್ಯೆ ತಪ್ಪಲಿದೆ. ಆರ್‌ಬಿಐ ನಿರ್ದೇಶನದಂತೆ ಚಲೋ ಆ್ಯಪ್ ಸಹಯೋಗದೊಂದಿಗೆ ಈ ಕಾರ್ಡ್ ಮುದ್ರಿಸಲಾಗಿದೆ.
-ಅಮೃತ್ ಮಯ್ಯ, ಚಲೋ ಆಪರೇಷನ್ ಮ್ಯಾನೇಜರ್.