Advertisement

Kasaragod ಖಾಸಗಿ ಬಸ್‌ಗಳ ಮುಷ್ಕರ: ಪ್ರಯಾಣಿಕರಿಗೆ ಸಮಸ್ಯೆ

01:34 AM Nov 01, 2023 | Team Udayavani |

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಖಾಸಗಿ ಬಸ್‌ ಸಂಘಟನೆಯವರು ನಡೆಸಿದ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಮಸ್ಯೆಗೀಡಾದರು. ಅ. 30ರ ಮಧ್ಯರಾತ್ರಿ ಆರಂಭಗೊಂಡ ಮುಷ್ಕರ ಅ. 31ರ ಮಧ್ಯ ರಾತ್ರಿವರೆಗೆ ನಡೆಯಿತು.

Advertisement

ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸಬೇಕೆಂಬುದು ಬಸ್‌ ಮಾಲಕರ ಪ್ರಮುಖ ಬೇಡಿಕೆಯಾಗಿದೆ. ಬಸ್‌ಗಳಲ್ಲಿ ಸಿಸಿ ಕೆಮರಾ, ಚಾಲಕರಿಗೆ ಸೀಟ್‌ ಬೆಲ್ಟ್ ಕಡ್ಡಾಯಗೊಳಿಸಿದ ಸರಕಾರದ ನಿರ್ಧಾರವನ್ನು ಬಸ್‌ ಮಾಲಕರು ಪ್ರತಿಭಟಿಸಿದ್ದಾರೆ.

ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸದಿದ್ದಲ್ಲಿ ನವೆಂಬರ್‌ 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಬಸ್‌ ಮಾಲಕರ ಸಂಯುಕ್ತ ಸಮಿತಿ ನಿರ್ಧರಿಸಿದೆ. ಮಂಗಳವಾರ ಬಸ್‌ ಮುಷ್ಕರದಿಂದ ಖಾಸಗಿ ಬಸ್‌ಗಳನ್ನೇ ಆಶ್ರಯಿಸಿರುವ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೀಡಾದರು. ವಿವಿಧ ಅಗತ್ಯಗಳಿಗೆ ವಿವಿಧ ಪ್ರದೇಶಗಳಿಗೆ ತೆರಳುವವರು ಬಸ್‌ ಸೌಕರ್ಯವಿಲ್ಲದೆ ಸಮಸ್ಯೆಗೀಡಾದರು. ಖಾಸಗಿ ಬಸ್‌ಗಳು ಮಾತ್ರವೇ ಸಂಚರಿಸುವ ರೂಟ್‌ಗಳಲ್ಲಿ ಟ್ಯಾಕ್ಸಿ ವಾಹನಗಳನ್ನು ಆಶ್ರಯಿಸಬೇಕಾಯಿತು.

ರಾಷ್ಟ್ರೀಯ ಹೆದ್ದಾರಿ, ಅಂತಾರಾಜ್ಯ ರಸ್ತೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಸಂಚರಿಸುತ್ತಿರುವುದರಿಂದ ಆ ಪ್ರದೇಶಗಳ ಪ್ರಯಾಣಿಕರು ಸಮಸ್ಯೆ ಯಿಂದ ಸ್ವಲ್ಪ ಮಟ್ಟಿಗೆ ಪಾರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ದೂರದ ಸ್ಥಳಗಳಿಗೆ ತೆರಳುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಸುಮಾರು 8 ಸಾವಿರದಷ್ಟು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಅವುಗಳೆಲ್ಲ ಮುಷ್ಕರದ ಹಿನ್ನೆಲೆಯಲ್ಲಿ ರಸ್ತೆಗಿಳಿಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next