Advertisement

ಖಾಸಗಿ ಬಸ್‌ ಮಾಲಕರಿಂದ ಉಳ್ತೂರಿನ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ

02:50 AM Jul 25, 2018 | Karthik A |

ತೆಕ್ಕಟ್ಟೆ: ಗ್ರಾಮೀಣ ಭಾಗಗಳಾದ ಉಳ್ತೂರು, ಕೆದೂರು, ಚಾರು ಕೊಟ್ಟಿಗೆ, ಬೇಳೂರು, ಶಾನಾಡಿ, ಹೆಸ್ಕಾತ್ತೂರು ಭಾಗಗಳಿಗೆ ಸಮರ್ಪಕವಾದ ಬಸ್‌ ಸಂಪರ್ಕಗಳಿಲ್ಲದೆ ಗ್ರಾಮೀಣ ಭಾಗದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಪರದಾಡಬೇಕಾದ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಉದಯವಾಣಿ ‘ಗಗನ ಕುಸುಮವಾದ ಸರಕಾರಿ ಬಸ್‌ ಸೌಲಭ್ಯ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಜು. 24ರಂದು ವರದಿ ಪ್ರಕಟವಾದ ಬೆನ್ನಲ್ಲೇ ಖಾಸಗಿ ಬಸ್‌ ಮಾಲಕರು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಅರಿತು ಬಸ್‌ ಸಂಚಾರದ ಮಾರ್ಗ ಬದಲಿಸಿ ಸಮಸ್ಯೆಗೆ ಸ್ಪಂದಿಸಿದ್ದಾರೆ.

Advertisement

ಬಸ್‌ ವೇಳಾಪಟ್ಟಿ 
ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಪ್ರತಿ ದಿನ ಬೆಳಗ್ಗೆ ಗಂಟೆ 8.45 ರಿಂದ ವಕ್ವಾಡಿ ಮಾರ್ಗವಾಗಿ ಕೋಟೇಶ್ವರ, ಕುಂದಾಪುರ ಬಸ್‌ ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ತೆಕ್ಕಟ್ಟೆ ಮಾರ್ಗವಾಗಿ ಕುಂದಾಪುರ ಸಂಪರ್ಕ ಕಲ್ಪಿಸುವ ಬಗ್ಗೆ ಖಾಸಗಿ ಬಸ್‌ ಮಾಲಕರು ಭರವಸೆಯನ್ನು ನೀಡಿದ್ದಾರೆ. ಈ ವರದಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

►ವಿಶೇಷ ವರದಿ►ಉಳ್ತೂರು: ಗಗನ ಕುಸುಮವಾದ ಸರಕಾರಿ ಬಸ್‌ ಸೌಲಭ್ಯ: https://bit.ly/2A254PB

Advertisement

Udayavani is now on Telegram. Click here to join our channel and stay updated with the latest news.

Next