Advertisement

Salaar: ಪೃಥ್ವಿರಾಜ್ ಸುಕುಮಾರನ್‌ ಹುಟ್ಟುಹಬ್ಬಕ್ಕೆ ʼಸಲಾರ್‌ʼ ಪೋಸ್ಟರ್‌ ಗಿಫ್ಟ್

12:23 PM Oct 16, 2023 | Team Udayavani |

ಹೈದರಾಬಾದ್:  ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್‌ʼ ರಿಲೀಸ್‌ ಗೆ ದಿನ ನಿಗದಿಯಾಗಿದೆ. ಬಿಡುಗಡೆ ದಿನಾಂಕ ಫೈನಲ್‌ ಆದ ಬಳಿಕ ಸಿನಿಮಾ ತಂಡ ಪ್ರಚಾರದ ಅಖಾಡಕ್ಕೆ ಮತ್ತೆ ಇಳಿದಿದೆ. ಈ ನಡುವೆ ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ ನಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿರಾಜ್ ಸುಕುಮಾರನ್‌ ಅವರ ಹುಟ್ಟುಹಬ್ಬಕ್ಕೆ ಸ್ಪೆಷೆಲ್‌ ಪೋಸ್ಟರ್‌ ರಿಲೀಸ್‌ ಮಾಡಿದೆ.

Advertisement

ಪ್ಯಾನ್‌ ಇಂಡಿಯಾ ʼಸಲಾರ್ʼ ಸಿನಿಮಾ ಸಟ್ಟೇರಿದ ದಿನದಿಂದ ನಾನಾ ಕಾರಣದಿಂದ ಸದ್ದು ಮಾಡುತ್ತಿದೆ. ಸಿನಿಮಾದ ಕೆಲ ಕೆಲಸಗಳು ಬಾಕಿಯಿರುವುದರಿಂದ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಿತ್ತು. ಅಂತಿಮವಾಗಿ ಸಿನಿಮಾ ಡಿಸೆಂಬರ್‌ 22 ರಂದು ರಿಲೀಸ್‌ ಆಗುವುದಾಗಿ ಸಿನಿಮಾ ತಂಡ ಇತ್ತೀಚೆಗೆ ಅಧಿಕೃತವಾಗಿ ಹೇಳಿತ್ತು.

ಇದನ್ನೂ ಓದಿ: ರಾಮನಗರಕ್ಕೆ ಕಸ ತಂದರೆ ಲಾರಿಗಳಿಗೆ ಬೆಂಕಿ ಹಾಕುತ್ತೇವೆ: ಡಿಸಿಎಂಗೆ ಜೆಡಿಎಸ್ ಎಚ್ಚರಿಕೆ

ಬಹುತಾರಾಗಣವುಳ್ಳ ʼಸಲಾರ್‌ʼ ಟೀಸರ್‌ ಮೂಲಕ ಮತ್ತಷ್ಟು ಹೈಪ್‌ ಹೆಚ್ಚಿಸಿದೆ. ಮಾಲಿವುಡ್‌ ಸ್ಟಾರ್‌ ನಟ ಪೃಥ್ವಿರಾಜ್ ಸುಕುಮಾರನ್‌ ಸಿನಿಮಾದಲ್ಲಿ ‘ವರ್ಧರಾಜ ಮನ್ನಾರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರ(ಅ.16 ರಂದು) ಪೃಥ್ವಿರಾಜ್ ಸುಕುಮಾರನ್‌ ಅವರ 41ನೇ ಹುಟ್ಟುಹಬ್ಬವಾಗಿದ್ದು, ಈ ನಿಟ್ಟಿನಲ್ಲಿ ʼಸಲಾರ್ʼ ತಂಡ ಅವರ ಪಾತ್ರದ ಸ್ಪೆಷೆಲ್‌ ಪೋಸ್ಟರ್‌ ರಿಲೀಸ್‌ ಮಾಡಿ ಬರ್ತ್‌ ಡೇ ವಿಶ್‌ ಮಾಡಿದೆ.

ಎರಡು ಪಾರ್ಟ್‌ ಗಳಲ್ಲಿ ʼಸಲಾರ್‌ʼ ಸಿನಿಮಾ ರಿಲೀಸ್‌ ಆಗಲಿದೆ. ಪ್ರಭಾಸ್‌ ಜೊತೆ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗಪತಿ ಬಾಬು, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮತ್ತು ರಾಮಚಂದ್ರರಾಜು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next