Advertisement

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ

05:48 PM Oct 22, 2024 | Team Udayavani |

ಮುಂಬೈ: ಒಂದು ಕಾಲದಲ್ಲಿ ಮುಂದಿನ ಸಚಿನ್‌ ತೆಂಡೂಲ್ಕರ್‌ ಎಂದೇ ಕರೆಯಲ್ಪಡುತ್ತಿದ್ದ ಮುಂಬೈನ ಬ್ಯಾಟರ್‌ ಪೃಥ್ವಿ ಶಾ (Prithvi Shaw) ಕ್ರಿಕೆಟ್‌ ಭವಿಷ್ಯ ಇದೀಗ ಮತ್ತಷ್ಟು ಡೋಲಾಯಮಾನವಾಗಿದೆ. ಪ್ರತಿಭೆ ಇದ್ದರೂ ಇತರ ಕಾರಣಗಳಿಂದ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಶಾ ಇದೀಗ ಮುಂಬೈ ರಣಜಿ ತಂಡದಿಂದಲೂ (Mumbai Ranji Team) ಹೊರ ಹಾಕಲ್ಪಟ್ಟಿದ್ದಾರೆ.

Advertisement

ಪೃಥ್ವಿ ಶಾ ಅವರ ಹೊರಗುಳುಯುವಿಕೆ ಬಗ್ಗೆ ತಂಡದ ಮ್ಯಾನೇಜ್‌ ಮೆಂಟ್‌ ಯಾವುದೇ ಮಾಹಿತಿ ನೀಡದಿದ್ದರೂ ಫಿಟ್ನೆಸ್ ಮತ್ತು ಶಿಸ್ತಿನ ಬಗೆಗಿನ ಅವರ ವರ್ತನೆಯಿಂದ ಕೋಚ್ ಸಂತೋಷವಾಗಿಲ್ಲ ಎಂದು ವರದಿ ಹೇಳಿದೆ.‌

ಸಂಜಯ್ ಪಾಟೀಲ್ (ಅಧ್ಯಕ್ಷ), ರವಿ ಠಾಕರ್, ಜೀತೇಂದ್ರ ಠಾಕ್ರೆ, ಕಿರಣ್ ಪೊವಾರ್ ಮತ್ತು ವಿಕ್ರಾಂತ್ ಯೆಲಿಗೇಟಿ ಅವರನ್ನೊಳಗೊಂಡ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಆಯ್ಕೆ ಸಮಿತಿಯು ಶಾ ಅವರನ್ನು ಕನಿಷ್ಠ ಒಂದು ರಣಜಿ ಪಂದ್ಯಕ್ಕಾದರೂ ಹೊರಗಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಕ್ರಿಕ್‌ಬಜ್‌ ನ ವರದಿಯ ಪ್ರಕಾರ, ಶಾ ಅವರ ಅಶಿಸ್ತು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಣಜಿ ಟ್ರೋಫಿ ತಂಡದಿಂದ ಶಾ ಅವರನ್ನು ಕೈಬಿಡುವ ಮೂಲಕ ಆಯ್ಕೆದಾರರು ಮತ್ತು ತಂಡದ ಆಡಳಿತ ಮಂಡಳಿ ಶಾ ಅವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

Advertisement

ನೆಟ್ ಸೆಷನ್‌ಗಳಿಗೆ ತಡವಾಗಿ ವರದಿ ಮಾಡುವುದು ಶಾ ವಿಷಯಕ್ಕೆ ಬಂದಾಗ ತಂಡದ ಮ್ಯಾನೇಜ್‌ ಮೆಂಟ್ ಗೆ ಕಿರಿಕಿರಿ ತಂದಿದೆ. ಅವರು ನೆಟ್ ಸೆಷನ್‌ ಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅಲ್ಲದೆ ಸರಿಯಾಗಿ ಪ್ರ್ಯಾಕ್ಟೀಸ್‌ ಗೆ ಬರುವುದಿಲ್ಲ ಎಂದು ವರದಿ ಹೇಳುತ್ತದೆ. ಅನೇಕರು ಅವರನ್ನು ಅಧಿಕ ತೂಕ ಎಂದು ಪರಿಗಣಿಸುತ್ತಾರೆ. ಇದು ಅವರು ಇರುವ ವೃತ್ತಿಯ ಬಗ್ಗೆ ಶಿಸ್ತಿನ ಕೊರತೆಯನ್ನು ತೋರಿಸುತ್ತದೆ.

ಅನುಭವಿ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ನಾಯಕ ಅಜಿಂಕ್ಯ ರಹಾನೆ ಕೂಡ ಅಭ್ಯಾಸಕ್ಕೆ ಸರಿಯಾಗಿ ಬರುತ್ತಾರೆ. ಮತ್ತೊಂದೆಡೆ, ಶಾ ಅವರು ಸ್ಥಿರ ಪ್ರದರ್ಶನ ನೀಡದ ಹೊರತಾಗಿಯೂ ಕೆಲವು ಸೆಷನ್‌ ಗಳನ್ನು ತಪ್ಪಿಸುತ್ತಾರೆ.

ಶಾ ಅವರನ್ನು ಕೈಬಿಡುವ ನಿರ್ಧಾರವು ಕೇವಲ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆಗಾರರದ್ದು ಮಾತ್ರವಲ್ಲ ಎಂದು ವರದಿ ಹೇಳುತ್ತದೆ. ನಾಯಕ ಮತ್ತು ಕೋಚ್ ಕೂಡ ಅವರನ್ನು ತಂಡದಿಂದ ಕೈಬಿಡಲು ಉತ್ಸುಕರಾಗಿದ್ದರು.

2018 ರಲ್ಲಿ ರಾಜ್‌ಕೋಟ್‌ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಶಾ ಬಳಿಕ ವೃತ್ತಿಜೀವನದಲ್ಲಿ ಮೈದಾನದ ಹೊರಗಿನ ಸಮಸ್ಯೆಗಳಿಂದ ಇಳಿಮುಖ ಕಂಡಿದ್ದಾರೆ. ಈ ಋತುವಿನಲ್ಲಿ ಶಾ ಆಡಿದ ಎರಡು ರಣಜಿ ಪಂದ್ಯಗಳಲ್ಲಿ ಅವರು 7 ಮತ್ತು 12 (ಬರೋಡಾ ವಿರುದ್ಧ), 1 ಮತ್ತು 39 (ಮಹಾರಾಷ್ಟ್ರ ವಿರುದ್ಧ) ಸ್ಕೋರ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next