Advertisement
ನಿನ್ನೆ ಮೈಸೂರು ಶಾಸಕ ನಾಗೇಂದ್ರಗೆ ಹಾಸನಾಂಬೆ ದರ್ಶನಕ್ಕೆ ಅಡ್ಡಿ ವಿಚಾರದಲ್ಲಿ ಬಹಿರಂಗವಾಗಿ ಪ್ರೀತಂಗೌಡ ನಾಗೇಂದ್ರರ ಕ್ಷಮೆ ಕೇಳಿ,ಕೆಲಸದ ಒತ್ತಡದಿಂದ ಅಧಿಕಾರಿಗಳು ಒತ್ತಡ ತಡೆಯಲಾಗಿಲ್ಲ. ಯಾವುದೇ ಪಕ್ಷದ ಚುನಾಯಿತ ಪ್ರತಿನಿಧಿ ಬಂದರೂ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಿದೆ. ನಿನ್ನೆ ಸಮನ್ವಯದ ಕೊರತೆಯಿಂದ ಸಮಸ್ಯೆ ಆಗಿದೆ. ನನ್ನ ಹಿರಿಯರು, ಸಹೋದರ ಸಮಾನರಾದ ಅವರಿಗೆ ನಾನು ಎಲ್ಲರ ಮುಖೇನ ನಾನು ಕ್ಷಮೆ ಕೇಳುತ್ತೇನೆ ಎಂದರು.
Related Articles
Advertisement
ಇಂದು (ಸೋಮವಾರ) ಹಾಸನಾಂಬೆಯ ದರ್ಶನ ಪಡೆದ ಬಳಿಕ ಪ್ರೀತಂ ಗೌಡ ಅವರೊಂದಿಗೆ ಸುದ್ದಿಗಾರರೊಂದಿದೆ ಮಾತನಾಡಿ,ನಿನ್ನೆ ನಾನು ತಡವಾಗಿ ಬಂದಿದ್ದೆ. ಸ್ವಲ್ಪ ಸಂವಹನದಲ್ಲಿ ಗೊಂದಲವಾಗಿತ್ತು. ನಾನು ಪ್ರೀತಂಗೆ ಕರೆ ಮಾಡಲಿಲ್ಲ. ನಿನ್ನೆ ರಾತ್ರಿ ಎಸ್ ಪಿ ಅವರೂ ಕರೆ ಮಾಡಿದ್ದರು. ಇಂದು ಬೆಳಗ್ಗೆ ಮೂರು ಬಾರಿ ಪ್ರೀತಂ ಕರೆ ಮಾಡಿದ್ದಾನೆ. ನಾನು ಮೂಡಿಗೆರೆಯಿಂದ ಬಂದು ದರ್ಶನ ಮಾಡಿದ್ದೇನೆ ಎಂದರು.
ನಾನು ಹಾಸನ ಪ್ರಭಾರಿಯಾಗಿರುವ ವೇಳೆ ನನಗೆ ಪ್ರತೀ ಬಾರಿ ಪ್ರೀತಂ ಊಟ ಕೊಡುತ್ತಿದ್ದ. ಅವನು ನನ್ನ ತಮ್ಮ. ನನಗಿಂತ ಸಣ್ಣವ. ತುಂಬಾ ಸಲುಗೆ ಇದೆ, ನಾವಿಬ್ಬರೇ ಅಲ್ಲ ಬಿಜೆಪಿಯಲ್ಲಿ ಜಾತ್ಯತೀತವಾಗಿ ನಮ್ಮದೇ ಒಂದು ಆತ್ಮೀಯ ಟೀಮ್ ಇದೆ. ನಿನ್ನೆಯ ವಿಚಾರ ಅಲ್ಲಿಗೆ ಬಿಟ್ಟಿದ್ದೇವೆ ಎಂದರು.
ಲಕ್ಷಾಂತರ ಜನರು ಬಂದಾಗ ಶಾಸಕ ಯಾರು ಎಂದು ಪೊಲೀಸರಿಗೆ ತಿಳಿಯುವುದಿಲ್ಲ. ಇಂದು ದರ್ಶನ ಮಾಡಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಭಾನುವಾರ ಮಧ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ನೈವೇದ್ಯ ಸಮರ್ಪಣೆ ವೇಳೆಯಲ್ಲಿ ನಾಗೇಂದ್ರ ಮತ್ತು ಕುಟುಂಬಸ್ಥರು ಆಗಮಿಸಿದ್ದರು. ದರ್ಶನ ಸಾಧ್ಯವಾಗದೆ ವಾಪಸಾಗಿದ್ದರು.