Advertisement

ಸ್ವಚ್ಛತೆ-ಸ್ಮಾರ್ಟ್‌ ಸಿಟಿ ಅನುಷ್ಠಾನಕ್ಕೆ ಆದ್ಯತೆ

01:13 PM Mar 05, 2017 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಸಮರ್ಪಕ ಅನುಷ್ಠಾನ, ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದಾಗಿ ನೂತನ ಮಹಾಪೌರ ಡಿ.ಕೆ. ಚವ್ಹಾಣ ತಿಳಿಸಿದರು. ಮಹಾಪೌರರಾಗಿ ಆಯ್ಕೆಯಾದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಸ್ವಚ್ಛಗೆ ಹೆಚ್ಚು ಒತ್ತು ನೀಡುವೆ.

Advertisement

ಮಹಾನಗರ ಎಲ್ಲ ವಾರ್ಡ್‌ಗಳಿಗೆ 24/7 ನೀರು ಪೂರೈಕೆ ಯೋಜನೆ ಕಾಮಗಾರಿ ಆರಂಭಗೊಂಡಿದ್ದು, ಅದನ್ನು ಆದಷ್ಟು ಬೇಗ ಪೂರ್ಣಗೊಳಿಸುವ, ರಸ್ತೆಗಳ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಸ್ಮಾರ್ಟ್‌ ಸಿಟಿ ಯೋಜನೆಗೆ ಮಹಾನಗರ ಆಯ್ಕೆಯಾಗಿದ್ದು, ಯೋಜನೆ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. 

ಯೋಜನೆ ಸಮರ್ಪಕ ಹಾಗೂ ಗುಣಮಟ್ಟದ ರೀತಿಯಲ್ಲಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಿರ್ವಹಿಸುವುದಾಗಿ ತಿಳಿಸಿದ ಅವರು, ಪಕ್ಷಕ್ಕೆ ನಿಷ್ಠನಾಗಿರುವುರುವುದು, ಪಕ್ಷ ನಾಯಕರು ಹಾಗೂ ಸಂಘ ಪರಿವಾರದ ಬೆಂಬಲ, ಮೆಚ್ಚುಗೆ ಹಿನ್ನೆಲೆಯಲ್ಲಿ ಇಂದು ನನಗೆ ಮಹಾಪೌರ ಸ್ಥಾನ ದೊರೆತಿದೆ ಎಂದರು. 

ವಿಜಯೋತ್ಸವ: ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಡಿ.ಕೆ. ಚವ್ಹಾಣ, ಲಕ್ಷ್ಮೀ ಬಾಯಿ ಬಿಜವಾಡ ಅವರ ಆಯ್ಕೆ ಘೋಷಣೆ ಆಗುತ್ತಿದ್ದಂತೆಯೇ ಪಾಲಿಕೆ ಆವರಣದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ,ಗುಲಾಲ ಎರಚಿ ಸಂಭ್ರಮಿಸಿದರು. ಅನಂತರ ನೂತನ ಮಹಾಪೌರ, ಉಪಮಹಾಪೌರರನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕರೆದ್ಯೊಯಲಾಯಿತು.

ಎಂಎಲ್‌ಸಿ-ಎಸಿಪಿ ವಾಗ್ವಾದ…
ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆ ಚುನಾವಣೆಯಲ್ಲಿ ಮತದಾನಕ್ಕೆಂದು ಒಳ ಪ್ರವೇಶಿಸುತ್ತಿದ್ದ ವಿಧಾನ ಪರಿಷತ್‌ ಸದಸ್ಯ ಪ್ರೊ| ಎಸ್‌.ವಿ.ಸಂಕನೂರ ಅವರನ್ನು ಎಸಿಪಿ ದಾವೂದ್‌ಖಾನ್‌ ತಡೆದಿದ್ದರಿಂದ ಆಕ್ರೋಶಗೊಂಡ ಪ್ರೊ| ಸಂಕನೂರು ಎಸಿಪಿಯೊಂದಿಗೆ ವಾಗ್ವಾದಕ್ಕಿಳಿದರು. ಪಾಲಿಕೆ ಒಳಗೆ ಹೋಗುತ್ತಿದ್ದ ಪ್ರೊ| ಸಂಕನೂರು ಅವರನ್ನು ತಡೆದ ಎಸಿಪಿಗೆ ತಾವು ಮತದಾನದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.

Advertisement

ನೀವು ಯಾರು ಎಂಬುದು ಗೊತ್ತಿಲ್ಲ ಎಂದಾಗ, ಆಕ್ರೋಶಗೊಂಡ ವಿಧಾನಪರಿತ್‌ ಸದಸ್ಯರು ಜನಪ್ರತಿನಿಧಿಗಳು ಯಾರೆಂಬುದು ತಿಳಿದುಕೊಳ್ಳಬೇಕೆಂದು ವಾಗ್ವಾದಕ್ಕಿಳಿದರು. ಇನ್ನೊಬ್ಬ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ ಹಾಗೂ ಬಿಜೆಪಿ ಕೆಲ ಮುಖಂಡರು ಎಸಿಪಿಗೆ ತಿಳಿಹೇಳಿ, ಪ್ರೊ| ಸಂಕನೂರು ಅವರನ್ನು ಒಳ ಕಳುಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next