ಹಳೆಯಂಗಡಿ: ಪರಿಸರದ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿ ಭಾರತೀಯ ಜನತಾ ಪಾರ್ಟಿಯು ತನ್ನ ಕಾರ್ಯಕರ್ತರ ಮೂಲಕ ವೃಕ್ಷರೋಹಣ ಎಂಬ ಅಭಿಯಾನದ ಮೂಲಕ ವನಮಹೋತ್ಸವವನ್ನು ರಾಜ್ಯ ಎಲ್ಲಾ ಗ್ರಾಮಗಳಲ್ಲೂ ಹಮ್ಮಿಕೊಂಡಿದೆ. ಇದರಿಂದ ಬಿಜೆಪಿಯು ಪರಿಸರ, ಪ್ರಕೃತಿ ಹಾಗೂ ಶುದ್ಧ ಸ್ವಚ್ಚತೆಯ ಜಾಗƒತಿ ಮೂಡಲು ವೇದಿಕೆಯನ್ನು ಕಲ್ಪಿಸಿದಂತಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ವಿಸ್ತಾರಕ ಪ್ರಮುಖ್ ಶ್ಯಾಮಲಾ ಕುಂದರ್ ಹೇಳಿದರು.
ಅವರು ಬಿಜೆಪಿಯ ಕಿನ್ನಿಗೋಳಿ ಶಕ್ತಿ ಕೇಂದ್ರದ ವ್ಯಾಪ್ತಿಯ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಕಲ್ಲಾಪುವಿನ ಸಾರ್ವಜನಿಕ ಹಿಂದೂ ರುದ್ರಭೂಮಿಯ ಪರಿಸರದಲ್ಲಿ ವೃಕ್ಷರೋಹಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಎಸ್. ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಮಾತನಾಡಿ, ಜನಸೇವೆ, ಸಮಾಜ ಮುಖೀ ಚಿಂತನೆಗೆ ವಿಶೇಷ ವೇದಿಕೆಯನ್ನು ನೀಡುವ ಬಿಜೆಪಿಯಲ್ಲಿನ ಶಿಸ್ತು ಹಾಗೂ ಕಾರ್ಯಕ್ರಮದಿಂದ ನಮ್ಮನ್ನು ಸಮಾಜ ಸೇವಾ ಮನೋಭಾವನೆಯಿಂದ ಅರ್ಪಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದು ಗ್ರಾಮ ಮಟ್ಟದಿಂದ ಕೇಂದ್ರದವರೆಗೆ ಪಸರಿಸಿದೆ ಎಂದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷ ಹರಿಪ್ರಸಾದ್, ಸಂಘ ಪರಿವಾರದ ಶ್ಯಾಮ ಪ್ರಸಾದ್, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ರಾವ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.ಸಂತೋಷ್ ಶೆಟ್ಟಿ ಸ್ವಾಗತಿಸಿ, ಹರಿಪ್ರಸಾದ್ ವಂದಿಸಿದರು.