ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆವಿಷ್ಕಾರಗಳನ್ನು ಕೈಗೊಳ್ಳುವ ಮೂಲಕರೈತರಿಗೆ ನೆರವಾಗಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆ (ಸಿಪಿಆರ್‌ಐ) ನಿವೃತ್ತ ನಿರ್ದೇಶಕ ಡಾ.ಎಸ್.ಸೀತಾರಾಮು ಕರೆ ನೀಡಿದರು.
ನಗರದ ಏಟ್ರಿಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ “ಇಂಟರ್ ಕಾಲೇಜ್ ಪ್ರಾಜೆಕ್ಟ್ ಎಕ್ಸ್‌ಪೋ-2018′ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ ಅವರು, ವಿಶ್ವವಿದ್ಯಾ ಲಯ ಗಳು ಆವಿಷ್ಕಾರಗಳಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿ ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ ಹೆಚ್ಚಿನ ಉತ್ಸಾಹದಿಂದ
ವಿದ್ಯಾರ್ಥಿಗಳು ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿ ಸಿಕೊಳ್ಳಲು ಸಹಾಯಕ ವಾಗುತ್ತದೆ ಎಂದು
ಹೇಳಿದರು.
ಕಾಲೇಜಿನ ವಿದ್ಯಾರ್ಥಿಗಳು ಸಂಶೋಧನೆಯ ಮೂಲಕ ಅತ್ಯುತ್ತಮವಾದ ಪ್ರಾಜೆಕ್ಟ್ಗಳನ್ನು ತಯಾರಿಸಿದ್ದು, ಅವುಗಳನ್ನು ವೀಕ್ಷಿಸಿದಾಗ ಅವರಲ್ಲಿ ಅಡಗಿರುವಂತಹ ಸೃಜನಶೀಲತೆ ಎದ್ದು ಕಾಣುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ಆವಿಷ್ಕಾರಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಜೆಕ್ಟ್ ಎಕ್ಸ್‌ಪೋದಲ್ಲಿ ಮೆಕಾನಿಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಮಾಹಿತಿ ವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು ಸಂವಹನ ಹಾಗೂ ಕಂಪ್ಯೂಟರ್ ವಿಜ್ಞಾನದ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಕೃಷಿ, ಆರೋಗ್ಯ, ರೋಬೊಟಿಕ್ಸ್, ಸಾಫ್ಟ್ವೇರ್ ಸೇರಿದಂತೆ 200ಕ್ಕೂ ಹೆಚ್ಚು ಪ್ರಾಜೆಕ್ಟ್ಗಳನ್ನು ತಯಾರಿಸಿದ್ದಾರೆ.
ಸ್ಮಾರ್ಟ್ ಮಾದರಿಯಲ್ಲಿ ಮನೆಯ ಸಂರಕ್ಷಣೆ, ಹೊಲದಲ್ಲಿ ಬೆಳೆಯುವ ಬೆಳೆಗಳಿಗೆ ನೀರು ಆಯಿಸುವುದು, ಮಾಲಿನ್ಯ ನಿಯಂತ್ರಣ, ವಿಕಲಚೇನತರಿಗೆ ಪರೀಕ್ಷೆ ಬರೆಯುವ ಸಾಧನ, ಸ್ಮಾರ್ಟ್ ಬ್ಲೈಡ್ ಸ್ಟಿಕ್, ಸ್ಮಾರ್ಟ್ ಪಾರ್ಕಿಂಗ್, ಏಕಕಾಲದಲ್ಲಿ ಕಟಾವು, ಔಷಧಿ ಸಿಂಪಡಣೆ ಸೇರಿದಂತೆ ಹಲವು ಕೆಲಸಗಳನ್ನು ಮಾಡುವ ಕೃಷಿ ಯಂತ್ರ, ಉಯ್ನಾಲೆ ಆಡುವ ಮೂಲಕ ನೀರು ಪಂಪ್ ಮಾಡುವ ಯಂತ್ರ ಸೇರಿದಂತೆ ಹಲವಾರು ಪ್ರಾಜೆಕ್ಟ್ಗಳು ಪ್ರದರ್ಶಿಸಿದರು.
ಬೈಕ್‌ನಿಂದ ವಿದ್ಯುತ್ ಉತ್ಪಾದನೆ: ವಿದ್ಯಾರ್ಥಿ ಎಸ್.ಪ್ರಶಾಂತ್ ದ್ವಿಚಕ್ರ ವಾಹನದಿಂದ ವಿದ್ಯುತ್ ಉತ್ಪಾದಿಸುವ ಪ್ರಯೋಗ ಮಾಡಿದ್ದು, ಬೈಕ್ ಚಾಲನೆಯಲ್ಲಿರುವಾಗ ಸೈಲೆನ್ಸರ್‌ನಿಂದ ಹೊರ ಬರುವ ಗಾಳಿಯಿಂದ ವಿದ್ಯುತ್ ಉತ್ಪತ್ತಿದಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ನಿಟ್ಟಿನಲ್ಲಿ ಪ್ರಶಾಂತ್ ಈಗಾಗಲೇ ಸಂಶೋಧನೆ ಕೈಗೊಂಡಿದ್ದು, ಅದು ಯಶಸ್ವಿಯಾಗಿದೆ.
ಮಾಲಿನ್ಯ ನಿಯಂತ್ರಣ ವಾತಾವರಣದಲ್ಲಿರುವ ಧೂಳಿನ ಕಣಗಳನ್ನು ನಿಯಂತ್ರಿಸುವಲ್ಲಿ ಪಾಚಿ ಪರಿಣಾಮಕಾರಿ ಯಾಗಿ
ಕಾರ್ಯನಿರ್ವಹಿಸುತ್ತದೆ. ಪಾಚಿ ಬೆಳೆಸಿದ ಕೃತಕ ಗೋಡೆಗಳನ್ನು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಇರಿಸುವುದರಿಂದ ಆ ಭಾಗಗಳಲ್ಲಿ ವಾಯು ಮಾಲಿನ್ಯ ನಿಯಂತ್ರಿಸಬಹುದು. 275 ಗಿಡಗಳು ನಿಯಂತ್ರಿಸಬಹುದಾದ ಧೂಳನ್ನು ಒಂದು ಕೃತಕ ಪಾಚಿ ಗೋಡೆ ನಿಯಂತ್ರಿಸುತ್ತದೆ ಎಂದು ವಿದ್ಯಾರ್ಥಿಗಗನ್ ಮಾಹಿತಿ ನೀಡಿದರು