Advertisement

ಸಹಕಾರಿ ಕ್ಷೇತ್ರಕ್ಕೆ ನೀಡಿ ಆದ್ಯತೆ

12:17 PM Nov 15, 2017 | Team Udayavani |

ಧಾರವಾಡ: ಸಮಾಜದಲ್ಲಿನ ಎಲ್ಲ ವಲಯಗಳ ಅಭಿವೃದ್ಧಿಯ ಪ್ರೇರಕ ಶಕ್ತಿಯಾಗಿರುವ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ಮಾಜಿ ಸಹಕಾರ ಸಚಿವ ಎಸ್‌.ಆರ್‌. ಮೋರೆ ಹೇಳಿದರು. 

Advertisement

ನಗರದ ಕೆಸಿಸಿ ಬ್ಯಾಂಕಿನ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 64ನೇ ಸಹಕಾರ ಸಪ್ತಾಹ ಹಾಗೂ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ವೃತ್ತಿಪರತೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಭಾರತ ಕೃಷಿ ಪ್ರಧಾನ ದೇಶ. ಗ್ರಾಮೀಣ ಭಾಗದಲ್ಲಿನ ರೈತರು, ಕೂಲಿಕಾರರು ಹಾಗೂ ಬಡವರ್ಗದ ಜನರ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸಹಕಾರ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕೊಡುಗೆ ನೀಡಬಲ್ಲವು. ಸಹಕಾರ ಕ್ಷೇತ್ರದಿಂದ ಮಾತ್ರ ಗ್ರಾಮಿಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು. 

ಕೆಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್‌.ವೈ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಬಾಪುಗೌಡ ಪಾಟೀಲ, ರಾಜ್ಯ ಗ್ರಾಹಕರ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ, ಬ್ಯಾಂಕಿನ ನಿರ್ದೇಶಕರಾದ ಪ್ರತಾಪ ಚವ್ಹಾಣ, ಮಲ್ಲಿಕಾರ್ಜುನ ಹೊರಕೇರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಶೆಲ್ಲಿಕೇರಿ,

ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕ ರಂಗಸ್ವಾಮಿ, ಹಿರಿಯ ಸಹಕಾರಿಗಳಾದ ಚಂದ್ರಕಾಂತ ಪಡಸಣ್ಣವರ, ಎಸ್‌.ಎನ್‌. ರಾಯನಾಳ, ಎಫ್‌.ಆರ್‌. ಕಲ್ಲನಗೌಡ್ರ, ದೇಸಾಯಿಗೌಡ ಪಾಟೀಲ, ಡಾ|ಸ್ಟಾನ್ಲಿ ವಿಲಿಯಂ ಐಝಾಕ್ಸ್‌, ಕೆಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿ.ಬಿ. ಪಾಟೀಲ, ವಸೂಲಾ ಧಿಕಾರಿ ಬಿ.ವಿ. ನಾಯಕ ಇದ್ದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಪಿ.ಪಿ.ಗಾಯಕವಾಡ ಉಪನ್ಯಾಸ ನೀಡಿದರು.

Advertisement

ಇದೇ ಸಂದರ್ಭದಲ್ಲಿ ನಿವೃತ್ತ ಅಪರ ನಿಬಂಧಕರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಾಕ್ಷಿ ಗೋಗಿ ಮತ್ತು ಉತ್ತಮ ಸಾಧನೆಗೈದ ಮೊರಬ, ದೇವಿಕೊಪ್ಪ, ಅರವಟಗಿ, ಛಬ್ಬಿ, ಕುಂದಗೋಳ, ಯರಗುಪ್ಪಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸನ್ಮಾನಿಸಲಾಯಿತು. ಶಿವಾನಂದ ಹೂಗಾರ ನಿರೂಪಿಸಿದರು. ಐ.ಎಸ್‌. ಪಾಟೀಲ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next